ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡೋಕೆ ಇವತ್ತೇ ಲಾಸ್ಟ್ ಡೇಟ್! ಕೊನೆಯ ಗಡುವು
Aadhaar Update : 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಇನ್ನು ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ, ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಿಕೊಳ್ಳಬೇಕು
Aadhaar Update : ನಮ್ಮೆಲ್ಲರ ಬಳಿ ಆಧಾರ್ ಕಾರ್ಡ್ ಇದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ UIDAI ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅವುಗಳನ್ನು ಜನರು ಪಾಲಿಸಿದರೆ ಮುಂದಿನ ದಿನಗಳಲ್ಲಿ ಯಾವುದು ಸಮಸ್ಯೆ ಆಗುವುದಿಲ್ಲ ಎಂದು ಖುದ್ದು UIDAI ತಿಳಿಸಿರುತ್ತದೆ.
ಇದೀಗ UIDAI ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ಹೊಸ ಅಪ್ಡೇಟ್ ನೀಡಿದ್ದು, ಎಲ್ಲರೂ ಸಹ ಈ ಒಂದು ಕೆಲಸವನ್ನು ತಪ್ಪದೇ ಮಾಡಲೇಬೇಕು, ಇಲ್ಲದಿದ್ದರೆ ನಿಮಗೆ ತೊಂದರೆ..
ಚಿನ್ನಾಭರಣ ಪ್ರಿಯರಿಗೆ ಇಂದು ಕೊಂಚ ಸಮಾಧಾನ! ಇಳಿಕೆ ಕಂಡ ಗಗನ ಕುಸುಮ ಚಿನ್ನದ ಬೆಲೆ
ಆಧಾರ್ ನವೀಕರಣಕ್ಕೆ ಇವತ್ತೇ ಕೊನೆಯ ದಿನ
UIDAI ಕೆಲವು ತಿಂಗಳುಗಳ ಹಿಂದೆಯೇ ತಿಳಿಸಿದ ಹಾಗೆ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಇನ್ನು ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ, ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಇದು ಸರ್ಕಾರ ನೀಡಿರುವ ಎಚ್ಚರಿಕೆ ಆಗಿದೆ.
ಹೌದು, ಜೂನ್ 14 ಅಂದರೆ ಇಂದು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದಕ್ಕೆ ಕೊನೆಯ ದಿನಾಂಕ ಆಗಿದೆ. ಒಂದು ವೇಳೆ ನೀವಿನ್ನು ಆಧಾರ್ ಅಪ್ಡೇಟ್ ಮಾಡಿಸಿಲ್ಲ ಎಂದರೆ, ಇಂದೇ ಮಾಡಿಸಿ.
ಈಗಾಗಲೇ ಹಲವು ಸಾರಿ ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ನೀಡಿದ ಸಮಯವನ್ನು ಸರ್ಕಾರ ಮುಂದಕ್ಕೆ ಹಾಕುತ್ತಲೇ ಬಂದಿತು, ಆದರೆ ಮತ್ತೊಮ್ಮೆ ಈ ದಿನಾಂಕವನ್ನು ಮುಂದಕ್ಕೆ ಹಾಕುವ ಹಾಗೆ ಕಾಣುತ್ತಿಲ್ಲ. ಮತ್ತೆ ಮುಂದಕ್ಕೆ ಹೋಗುವ ಹಾಗಿದ್ದರೆ ಈವರೆಗೂ UIDAI ಇಂದಲೇ ಅಧಿಕೃತ ಮಾಹಿತಿ ಸಿಗುತ್ತಿತ್ತು, ಆದರೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದರೆ, ಮತ್ತೊಮ್ಮೆ ದಿನಾಂಕವನ್ನು ಪೋಸ್ಟ್ ಪೋನ್ ಮಾಡುವುದಿಲ್ಲ ಎಂದು ಖಚಿತವಾಗಿದೆ. ಜೂನ್ 14ರ ನಂತರ ಆಧಾರ್ ಅಪ್ಡೇಟ್ ಮಾಡಿಸಬೇಕು ಎಂದರೆ ಹಣ ತೆರಬೇಕಾಗುತ್ತದೆ.
ಚೆಕ್ ಬೌನ್ಸ್ ಕುರಿತು ಇದ್ದಕ್ಕಿದ್ದಂತೆ ಹೊಸ ರೂಲ್ಸ್! ಇಲ್ಲಿದೆ ಹೈಕೋರ್ಟ್ ಕೊಟ್ಟ ಬಿಗ್ ಅಪ್ಡೇಟ್
ಹಾಗಾಗಿ ಒಂದು ವೇಳೆ ನೀವಿನ್ನು ಆಧಾರ್ ಅಪ್ಡೇಟ್ ಮಾಡಿಸಿಲ್ಲ ಎಂದರೆ, ಇಂದೇ ಮಾಡಿಸಿಬಿಡಿ. ಆಧಾರ್ ಅಪ್ಡೇಟ್ ಮಾಡಿಸುವುದಕ್ಕೆ ನೀವು ಹೊರಗೆ ಹೋಗುವ ಅವಶ್ಯಕತೆ ಸಹ ಇಲ್ಲ. ನಿಮ್ಮ ಮನೆಯಲ್ಲೇ ಕೂತು, ನಿಮ್ಮ ಫೋನ್ ಇಂದಲೇ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಹಾಗಿದ್ದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಸುಲಭವಾಗಿ ಹೇಗೆ ಮಾಡುವುದು ಎಂದು ತಿಳಿಸುತ್ತೇವೆ ನೋಡಿ..
ಆಧಾರ್ ಅಪ್ಡೇಟ್ ಪ್ರಕ್ರಿಯೆ
*ಮೊದಲಿಗೆ ಈ https://myaadhaar.uidai.gov.in/ ಲಿಂಕ್ ಗೆ ಭೇಟಿ ನೀಡಿ
*ಈ ವೆಬ್ಸೈಟ್ ಗೆ Login ಆಗಿ password create ಮಾಡಿ
*ಬಳಿಕ My Aadhar ಎನ್ನುವ ಟ್ಯಾಬ್ ಅನ್ನು ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಆಧಾರ್ ಅಪ್ಡೇಟ್ ಮಾಡಲು ವಿವರಗಳನ್ನು ಎಂಟರ್ ಮಾಡಿ
*ನಂತರ ನೀವು ಆಧಾರ್ ಗೆ ಲಿಂಕ್ ಮಾಡಿರುವ ಫೋನ್ ನಂಬರ್ ಒಂದ login ಮಾಡಿ
*ನಂತರ ಆಧಾರ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದರೆ ಆ ಡೀಟೇಲ್ಸ್ ಅಪ್ಡೇಟ್ ಮಾಡಿ
*ಬಳಿಕ ಡಾಕ್ಯುಮೆಂಟ್ಸ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
*ಈಗ ನಿಮ್ಮ ಆಧಾರ್ ಡೀಟೇಲ್ಸ್ ಎಲ್ಲವೂ ಕಾಣುತ್ತದೆ.
*ಎಲ್ಲಾ ಮಾಹಿತಿ ಸರಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ.
*ಬಳಿಕ ಆಧಾರ್ ಅಪ್ಡೇಟ್ ಪ್ರಕ್ರಿಯೆಯನ್ನು submit ಮಾಡಿ
*ಬಳಿಕ ನಿಮಗೆ 14 digits ಇರುವ URN ನಂಬರ್ ಸಿಗುತ್ತದೆ.
*ಈ ನಂಬರ್ ಬಳಸಿ ಆಧಾರ್ ಅಪ್ಡೇಟ್ ಹೇಗಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
Today is the last date to update Aadhaar card for free