ಕೇಂದ್ರದಿಂದ ಸಿಗಲಿದೆ 5 ಲಕ್ಷ ರೂಪಾಯಿ ಬಂಪರ್ ಗಿಫ್ಟ್​, ಈ ಕೊಡುಗೆ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

Story Highlights

ಕೇಂದ್ರ ಸರ್ಕಾರವು ನಮ್ಮ ದೇಶದ ಬಡಜನರಿಗೆ ಆರೋಗ್ಯದ ವಿಷಯದಲ್ಲಿ ಸಹಾಯ ಮಾಡುವುದಕ್ಕಾಗಿ, ಆಯುಷ್ಮನ್ ಭಾರತ್ ಯೋಜನೆ ಹಾಗೆಯೇ ಪಿಎಮ್ ಜನ ಆರೋಗ್ಯ ಯೋಜನೆಗಳನ್ನು 5 ವರ್ಷಗಳ ಹಿಂದೆ ಶುರು ಮಾಡಿದೆ.

ಕೇಂದ್ರ ಸರ್ಕಾರವು ನಮ್ಮ ದೇಶದ ಬಡಜನರಿಗೆ ಅನುಕೂಲ ಆಗುವ ಹಾಗೆ, ಸಹಾಯ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಜನರು ಸಹ ಪಡೆದು, ಒಳ್ಳೆಯ ರೀತಿಯಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆಯಲ್ಲಿ ಕೇಂದ್ರ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದ್ದು, ಈ ಒಂದು ಯೋಜನೆಯ ಮೂಲಕ ಜನರಿಗೆ 5 ಲಕ್ಷದ ವರೆಗು ಸರ್ಕಾರದಿಂದ ಸಹಾಯ ಸಿಗುತ್ತದೆ. ಇದನ್ನು ಹೇಗೆ ಪಡೆದುಕೊಳ್ಳುವುದು ಎಂದು ಪೂರ್ತಿಯಾಗಿ ಮಾಹಿತಿ ಪಡೆಯೋಣ..

ಕೇಂದ್ರ ಸರ್ಕಾರವು ನಮ್ಮ ದೇಶದ ಬಡಜನರಿಗೆ ಆರೋಗ್ಯದ ವಿಷಯದಲ್ಲಿ ಸಹಾಯ ಮಾಡುವುದಕ್ಕಾಗಿ, ಆಯುಷ್ಮನ್ ಭಾರತ್ ಯೋಜನೆ ಹಾಗೆಯೇ ಪಿಎಮ್ ಜನ ಆರೋಗ್ಯ ಯೋಜನೆಗಳನ್ನು 5 ವರ್ಷಗಳ ಹಿಂದೆ ಶುರು ಮಾಡಿದೆ. ಈ ಎರಡು ಯೋಜನೆಗಳ ಅನುಸಾರ, ಇದರ ಫಲಾನುಭವಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ, ವಾರ್ಷಿಕವಾಗಿ ಅವರು 5 ಲಕ್ಷದವರೆಗು ಆರ್ಥಿಕ ಸಹಾಯವನ್ನು ಸರ್ಕಾರದ ಮೂಲಕ ಪಡೆಯಬಹುದು. ಇದು ಈ ಯೋಜನೆಗಳ ವಿಶೇಷತೆ ಆಗಿದೆ.

ಜಿಯೋದಿಂದ ಬಂಪರ್ ಕೊಡುಗೆ! ಈ ಕಡಿಮೆ ರೀಚಾರ್ಜ್‌ನೊಂದಿಗೆ 12 ಒಟಿಟಿ ಫ್ಲಾಟ್‌ಫಾರ್ಮ್ ಫ್ರೀ

ಮೊದಲಿಗೆ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (NHPS) ಎಂದು ಕರೆಯಲಾಗುತ್ತಿದ್ದ ಯೋಜನೆಯನ್ನು 2018ರಲ್ಲಿ ಪಿಎಮ್ ಜನ ಆರೋಗ್ಯ ಯೋಜನೆ (PMJAY) ಎಂದು ಬದಲಾಯಿಸಲಾಯಿತು. ಇಲ್ಲಿ ಜನರ ಆರೋಗ್ಯಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಹಣ ಒದಗಿಸುತ್ತದೆ. ಹಾಗೆಯೇ ಆಯುಶ್ಮಾನ್ ಭಾರತ್ ಕಾರ್ಡ್ ಇರುವವರಿಗೆ ಕೆಲವು ಆಸ್ಪತ್ರೆಗಳಲ್ಲಿ ಫ್ರೀ ಟ್ರೀಟ್ಮೆಂಟ್ ಸಿಗುತ್ತದೆ. ಇದನ್ನು ಪಡೆಯಲು ನೀವು ಕೆಲವು ದಾಖಲೆಗಳನ್ನು ಕೊಡಬೇಕು, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಫೋನ್ ನಂಬರ್, ಮನೆಯ ದೃಢೀಕರಣ ಪತ್ರ, ಇನ್ಕಮ್ ಸರ್ಟಿಫಿಕೇಟ್ ಇದೆಲ್ಲವನ್ನು ಕೊಡಬೇಕಾಗುತ್ತದೆ..

ಆಯುಶ್ಮಾನ್ ಭಾರತ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು ಎಂದು ನೋಡುವುದಾದರೆ, ನಿಮಗೆ ಹತ್ತಿರ ಇರುವ CSC ಕೇಂದ್ರ ಅಥವಾ ಎಂಪೆನೆಲ್ಡ್ ಅಸ್ಪತ್ರಗೆ ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು. PMJAY ಗೆ ಅರ್ಜಿ ಸಲ್ಲಿಸುವ ಮೊದಲು ಆ ಯೋಜನೆಗೆ ನಿಮಗೆ ಅರ್ಹತೆ ಇದೆಯಾ ಎಂದು ಚೆಕ್ ಮಾಡಬೇಕು, ಇದಕ್ಕಾಗಿ PMJAY ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Am I Eligible ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ನಿಮ್ಮ ಫೋನ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, get otp ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್​! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ

ಈಗ ನಿಮ್ಮ ಹೆಸರು, ರಾಜ್ಯ, ರೇಷನ್ ಕಾರ್ಡ್ ನಂಬರ್, ಅಡ್ರೆಸ್, ಫೋನ್ ನಂಬರ್ ಇದೆಲ್ಲವನ್ನು ಕೇಳುತ್ತದೆ. ಭರ್ತಿ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಫ್ಯಾಮಿಲಿ PMJAY ಫಲ ಪಡೆಯಲು ಅರ್ಹತೆ ಹೊಂದಿದೆ ಎಂದರೆ, ನಿಮ್ಮೆದುರು ರಿಸಲ್ಟ್ ಬರುತ್ತದೆ. ಬಳಿಕ ಅಪ್ಲೈ ಮಾಡಿ, ಕಾರ್ಡ್ ಪಡೆಯಬಹುದು. ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ, ಆಸ್ಪತ್ರೆಗೆ ಹೋಗಿ ಕಾರ್ಡ್ ತೋರಿಸಿ, 5 ಲಕ್ಷದವರೆಗೂ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.

Get A bumper gift of 5 lakh rupees by this Scheme

Related Stories