ಕ್ರೆಡಿಟ್ ಸ್ಕೋರ್ ಇಲ್ಲ ಅಂದ್ರೂ ಸುಲಭವಾಗಿ ಸಿಗುತ್ತೆ ಪರ್ಸನಲ್ ಲೋನ್; ಎಲ್ಲಿ ಗೊತ್ತಾ?
Personal Loan : ಬ್ಯಾಂಕ್ ನಲ್ಲಿ ಸಾಲ (bank loan) ಮಾಡಬೇಕು ಅಂದ್ರೂ ಸಿಬಿಲ್ ಸ್ಕೋರ್ ( CIBIL score) ಅಥವಾ ಕ್ರೆಡಿಟ್ ಸ್ಕೋರ್ (credit score) ಎನ್ನುವುದು ಬಹಳ ಮುಖ್ಯ
Personal Loan : ನೀವು ಯಾವುದೇ ಬ್ಯಾಂಕ್ ನಲ್ಲಿ ಸಾಲ (bank loan) ಮಾಡಬೇಕು ಅಂದ್ರೂ ಸಿಬಿಲ್ ಸ್ಕೋರ್ ( CIBIL score) ಅಥವಾ ಕ್ರೆಡಿಟ್ ಸ್ಕೋರ್ (credit score) ಎನ್ನುವುದು ಬಹಳ ಮುಖ್ಯ.
ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಾಗ ಮಾತ್ರ ಸುಲಭವಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ಹಾಗೂ ಕ್ರೆಡಿಟ್ ಪಾಯಿಂಟ್ಸ್ (credit points) ಎಷ್ಟು ಇರುತ್ತೆ ಎನ್ನುವುದರ ಆಧಾರದ ಮೇಲೆ ಬಡ್ಡಿದರ ಕೂಡ ನಿರ್ಧಾರವಾಗುತ್ತದೆ.
ಸಿಬಿಲ್ ಸ್ಕೋರ್ ಸಾಮಾನ್ಯವಾಗಿ 300 ರಿಂದ 900 ಗಳನ್ನು ಹೊಂದಿರುತ್ತದೆ 750 ಪಾಯಿಂಟ್ಗಳಿಗಿಂತಲೂ ಹೆಚ್ಚಿಗೆ ಸಿಬಿಲ್ ಸ್ಕೋರ್ ಇದ್ದರೆ ಅದು ಉತ್ತಮ ಸ್ಕೋರ್ ಎನಿಸಿಕೊಳ್ಳುತ್ತದೆ. ಹಾಗೂ ಅಂತವರಿಗೆ ಸುಲಭವಾಗಿ ಸಾಲ ಕೂಡ ಸಿಗುತ್ತದೆ.
ಆದರೆ ಎಲ್ಲರ ಸಿಬಿಲ್ ಸ್ಕೋರ್ ಕೂಡ ಉತ್ತಮವಾಗಿರುತ್ತದೆಯೇ ಎಂದರೆ ಖಂಡಿತವಾಗಿಯೂ ಇಲ್ಲ. ಹಾಗಾದ್ರೆ ಅಂತವರು ಹೇಗೆ ಸಾಲ ಪಡೆದುಕೊಳ್ಳಬಹುದು ಎನ್ನುವ ಯೋಚನೆ ನಿಮ್ಮದಾಗಿದ್ದರೆ ಇದಕ್ಕೆ ಒಂದು ಬೆಸ್ಟ್ ಪ್ಲಾನ್ ಇದೆ.
ರೈತರಿಗೆ ಸಿದ್ಧಿ ಸುದ್ದಿ, ಈ ಎಮ್ಮೆ ತಳಿ ಸಾಕಿದ್ರೆ ಲಕ್ಷಗಟ್ಟಲೆ ಆದಾಯ; ಸಿಗುತ್ತೆ ಸರ್ಕಾರದ ಸಬ್ಸಿಡಿ ಸಾಲ
ಎಲ್ ಐ ಸಿ ಯಲ್ಲಿ ಪಡೆಯಿರಿ ಸಾಲ – LIC Loan
LIC – (Life insurance corporation of India) ನೀವು ಎಲ್ ಐ ಸಿ ಯಲ್ಲಿ ಖಾತೆ ಹೊಂದಿದ್ದೀರಾ ಹಾಗಾದ್ರೆ ಸಿಬಿಲ್ ಸ್ಕೋರ್ ಇರಬೇಕು ಅಂತ ಟೆನ್ಶನ್ ಮಾಡ್ಕೋಬೇಡಿ. ಎಲ್ಐಸಿ ಎಲ್ಲಿ ಪಾಲಿಸಿ ಹೊಂದಿದ್ದರೆ ನಿಮಗೆ ಸಿಗುತ್ತೆ ಸುಲಭ ಸಾಲ (get lone if you have LIC policy). ಸಿಬಿಲ್ ಪಾಯಿಂಟ್ ಜಾಸ್ತಿ ಇರಬೇಕು ಎನ್ನುವ ರೂಲ್ಸ್ ಇಲ್ಲದೆ ಎಲ್ಐಸಿ ಎಲ್ಲಿ ಸಾಲ ಪಡೆದುಕೊಳ್ಳಬಹುದು.
ಸಾಲ ಪಡೆದುಕೊಳ್ಳಲು ಅರ್ಹತೆಗಳು (Eligibility to get loan by LIC)
*ಎಲ್ಐಸಿ ನಲ್ಲಿ ಪಾಲಿಸಿ ಹೊಂದಿರುವುದು ಕಡ್ಡಾಯ.
*18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾಲ ಸೌಲಭ್ಯ.
*ಕನಿಷ್ಠ ಮೂರು ವರ್ಷಗಳಿಂದ ಪಾಲಿಸಿ ಪ್ರೀಮಿಯಂ ಸತತವಾಗಿ ಪಾವತಿ ಮಾಡುವವರಾಗಿರಬೇಕು.
ಸ್ಟೇಟ್ ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್ ಸಿಗುತ್ತಿದೆ, ಈಗಲೇ ಅರ್ಜಿ ಸಲ್ಲಿಸಿ
ಎಲ್ಐಸಿ ಎಲ್ಲಿ ಸಿಗುವ ಸಾಲ ಎಷ್ಟು? (How much loan amount you can get)
ಪಾಲಿಸಿ ಸರಂಡರ್ ಮೌಲ್ಯವನ್ನು ಅವಲಂಬಿಸಿ ಇರುತ್ತದೆ. ಅಂದರೆ ಅವಧಿ ಮುಗಿಯುವ ಒಳಗೆ ಪಾಲಿಸಿ ಒಪ್ಪಿಸಿದರೆ ಸ್ಥಿರ ಮೌಲ್ಯವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ಪಾಲಿಸಿ ಮೌಲ್ಯದ ಶೇಕಡಾ 90ರಷ್ಟು ಹಣಕ್ಕೆ ಸಾಲ ಪಡೆದುಕೊಳ್ಳಬಹುದು. 10 ರಿಂದ 13% ವರೆಗೆ interest ಇದ್ದು ಇದು ಬ್ಯಾಂಕುಗಳ ವೈಯಕ್ತಿಕ ಸಾಲದ (personal loan) ಬಡ್ಡಿಗಿಂತ ಕಡಿಮೆ ಇರುತ್ತದೆ.
ಇನ್ನು ಎಲ್ ಐ ಸಿ ಪಾಲಿಸಿ ಮೇಲೆ ಸಾಲ ಪಡೆದು ಕೊಂಡಾಗ ನೀವು ಪ್ರತಿ ತಿಂಗಳು ಪಾವತಿಸುವ ಅಗತ್ಯವಿಲ್ಲ ನಿಮ್ಮ ಬಳಿ ಹಣ ಇದ್ದಾಗ ಸಾಲ ತೀರಿಸಬಹುದು. ಆದರೆ ನೀವು ಹಣ ಪಾವತಿ ಮಾಡುವವರಿಗೆ ಬಡ್ಡಿ ಬೀಳುತ್ತಲೇ ಇರುತ್ತದೆ. ನೀವು ಕೊನೆಯವರೆಗೂ ಸಾಲ ತೀರಿಸದೇ ಇದ್ದಲ್ಲಿ ಪಾಲಿಸಿ ಮುಗಿದ ನಂತರ ಅಸಲು ಹಾಗೂ ಬಡ್ಡಿ ಕಡಿತಗೊಳಿಸಿ ಉಳಿದ ಹಣವನ್ನು ಹಿಂತಿರುಗಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ
ಎಲ್ಐಸಿ ಪಾಲಿಸಿ ಮೇಲಿನ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to apply)
ಎಲ್ಐಸಿ ಪಾಲಿಸಿ ಮೇಲೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು, ಆನ್ಲೈನ್ ಆದರೆ ಎಲ್ಐಸಿ ಈ ಸೇವೆ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ಆಫ್ಲೈನ್ ಆಗಿದ್ದರೆ ಎಲ್ಐಸಿ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು (KYC documents) ನೀಡಿ ಸಾಲಕ್ಕೆ ಅರ್ಜಿ ಹಾಕಬಹುದು.
ಅರ್ಜಿ ಹಾಕುವಾಗ ನೀವು ಸಾಲಕ್ಕೆ ಅರ್ಹರಿದ್ದೀರಾ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತದೆ, ಇನ್ನು ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ. ನಂತರ ಅರ್ಜಿ ಸಲ್ಲಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕೆವೈಸಿ ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಬೇಕಾಗುತ್ತೆ. ಈ ರೀತಿ ಎಲ್ಐಸಿ ಪಾಲಿಸಿ ಹೊಂದಿದ್ದರೆ ಅದರ ಮೇಲೂ ಕೂಡ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು.
ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್
Get Personal loan without credit score