ರೈತರಿಗೆ ಸಿಹಿ ಸುದ್ದಿ, ಈ ಎಮ್ಮೆ ತಳಿ ಸಾಕಿದ್ರೆ ಲಕ್ಷಗಟ್ಟಲೆ ಆದಾಯ; ಸಿಗುತ್ತೆ ಸರ್ಕಾರದ ಸಬ್ಸಿಡಿ ಸಾಲ
ಸರ್ಕಾರವು ಕೂಡ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರಿಗೆ ಅನುಕೂಲವಾಗುವ ಸಬ್ಸಿಡಿಗಳನ್ನು (subsidy Loan) ಕೂಡ ನೀಡುತ್ತದೆ
ರಾಜ್ಯದಲ್ಲಿ ಸಾಕಷ್ಟು ಜನ ರೈತರು ಕೃಷಿಯ (agriculture) ಜೊತೆಗೆ ಉಪಕಸುಬಾಗಿ ಹೈನುಗಾರಿಕೆ (dairy farming), ಪಶು ಸಂಗೋಪನೆ, ಜೇನು ಸಾಕಾಣಿಕೆ ಹೀಗೆ ಮೊದಲಾದ ಕಸುಬುಗಳನ್ನು ಮಾಡುತ್ತಾರೆ.
ಇದಕ್ಕೆ ತಕ್ಕ ಹಾಗೆ ಸರ್ಕಾರವು ಕೂಡ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರಿಗೆ ಅನುಕೂಲವಾಗುವ ಸಬ್ಸಿಡಿಗಳನ್ನು (subsidy Loan) ಕೂಡ ನೀಡುತ್ತದೆ.
ಅಷ್ಟೇ ಅಲ್ಲದೆ ಎಮ್ಮೆ, ಹಸು, ಕೋಳಿ, ಹಂದಿ, ಮೊಲ ಮೊದಲಾದ ಸಾಕು ಪ್ರಾಣಿಗಳು ಸಾಕಾಣಿಕೆಗೆ ಸಬ್ಸಿಡಿ ಜೊತೆಗೆ ಸಾಲ ಸೌಲಭ್ಯವನ್ನು (loan facility) ಕೂಡ ಸರ್ಕಾರ ಒದಗಿಸುತ್ತದೆ.
ಸ್ಟೇಟ್ ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್ ಸಿಗುತ್ತಿದೆ, ಈಗಲೇ ಅರ್ಜಿ ಸಲ್ಲಿಸಿ
ಎಮ್ಮೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ (subsidy Loan for buffalo farming)
ನೀವು ರೈತರಾಗಿದ್ದರೆ ಹೆಚ್ಚು ಲಾಭಗಳಿಸಲು ಬಯಸಿದರೆ ಖಂಡಿತವಾಗಿ ಈ ಎಮ್ಮೆ ತಳಿ ಸಾಕಾಣಿಕೆ ಮಾಡಬೇಕು. ವಿಶೇಷವೆಂದರೆ ಈ ತಳಿಯ ಎಮ್ಮೆ ಸಾಕಾಣಿಕೆಯ ಮೇಲೆ ಸರ್ಕಾರ ವಿಮೆ (insurance) ಸೌಲಭ್ಯವನ್ನು ಕೂಡ ನೀಡುತ್ತಿದೆ
ಹಾಗಾಗಿ ಸಂಪೂರ್ಣವಾದ ಬಂಡವಾಳವನ್ನು ಕೂಡ ಸರ್ಕಾರದಿಂದಲೇ ಪಡೆದು ನೀವು ಈ ಎಮ್ಮೆ ತಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಪಡೆಯಬಹುದಾಗಿದೆ.
ವಿಶೇಷ ಎಮ್ಮೆ ತಳಿ ಯಾವುದು ಗೊತ್ತಾ?
ಸರ್ಕಾರದಿಂದಲೂ ಕೂಡ ಪ್ರೋತ್ಸಾಹ ಇರುವಂತಹ ಎಮ್ಮೆ ತಳಿ ಮೂರ್ರ ತಳಿ ಆಗಿದೆ. ಈ ತಳಿಯ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದರೆ ಪ್ರತಿ ತಿಂಗಳು ಲಕ್ಷ ಆದಾಯ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕೆ ಮುಖ್ಯ ಕಾರಣ ಮುರ್ರಾ ತಳಿ ಬಹಳ ವಿಶೇಷವಾದ ತಳಿ ಆಗಿದ್ದು ಅತಿ ಹೆಚ್ಚು ಹಾಲು ನೀಡುವಂತಹ ಎಮ್ಮೆ ತಳಿಯಾಗಿದೆ.
ಸ್ಟೇಟ್ ಬ್ಯಾಂಕ್ ಪರ್ಸನಲ್ ಲೋನ್ ಆಫರ್! ಅಡಮಾನ ಬೇಕಿಲ್ಲ, ಹೆಚ್ಚುವರಿ ಶುಲ್ಕವೂ ಇಲ್ಲ
ಮುರ್ರಾ ಎಮ್ಮೆ ತಳಿಯ ವೈಶಿಷ್ಟ್ಯತೆಗಳು!
*ಪಂಜಾಬ್, ಹರ್ಯಾಣ, ದೆಹಲಿ ಭಾಗದಲ್ಲಿ ಮಾತ್ರ ಕಂಡುಬರುವ ಮುರ್ರಾ ಎಮ್ಮೆ ತಳಿಯನ್ನು ಕರ್ನಾಟಕದಲ್ಲಿಯೂ ಕೂಡ ಸಾಕಾಣಿಕೆ ಮಾಡಲು ಸಾಧ್ಯವಿದೆ.
*ಈ ಎಮ್ಮೆ ತಳಿ ಪ್ರತಿದಿನ ಸುಮಾರು 30 ಲೀಟರ್ ನಷ್ಟು ಹಾಲು ಕೊಡಬಲ್ಲದು.
*ಎಮ್ಮೆ ತಳಿಯ ಗರ್ಭಧಾರಣೆಯ ಅವಧಿ 310 ದಿನಗಳು.
*ಬಾಗಿದ ಕೊಂಬುಗಳನ್ನ ಹೊಂದಿರುವ ಮುರ್ರಾ ತಳಿಯ ಎಮ್ಮೆಗಳು ಬಹಳ ದಷ್ಟ ಪುಷ್ಟವಾಗಿರುತ್ತದೆ ನೋಡಲು ಬಹಳ ಎತ್ತರವಾಗಿರುತ್ತದೆ.
*ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿ ಇರುವ ಈ ಎಮ್ಮೆ ತಳಿಗಳು ನೋಡಲು ಕೂಡ ಬಹಳ ಆಕರ್ಷಕವಾಗಿ ಇರುತ್ತವೆ. ನೋಡಲು ಎಷ್ಟು ದೊಡ್ಡದಾಗಿ ಕಾಣಿಸುತ್ತದೆಯೋ ಅಷ್ಟೇ ಮೃದು ಸ್ವಭಾವವನ್ನು ಹೊಂದಿರುತ್ತವೆ.
*ಮುರ್ರಾ ತಳಿಯ ಹಾಲಿನಲ್ಲಿ 7.3% ನಷ್ಟು ಕೊಬ್ಬಿನಂಶ ಇದೆ.
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ
ಮುರ್ರಾ ತಳಿಯ ಎಮ್ಮೆ ಸಾಕಾಣಿಕೆಗೆ ಸರ್ಕಾರದ ಬೆಂಬಲ
ಈ ತಳಿಯ ಎಮ್ಮೆ ಸುಮಾರು ಐವತ್ತು ಸಾವಿರ ರೂಪಾಯಿಗಳಿಂದ ಎರಡು ಲಕ್ಷ ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ, ಹೆಚ್ಚಾಗಿ ಹರಿಯಾಣ, ಪಂಜಾಬ್ ರಾಜ್ಯಗಳಿಗೆ ಹೋಗಿ ಖರೀದಿ ಮಾಡಿಕೊಂಡು ಬರಬೇಕಾಗುತ್ತದೆ.
ಲೋಕಲ್ ಮಾರುಕಟ್ಟೆಯಲ್ಲಿ ಮೂರ್ರ ತಳಿ ಎಂದು ಹೇಳಿ ಬೇರೆ ತಳಿಯ ಎಮ್ಮೆ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಎಮ್ಮೆ ತಳಿ ಖರೀದಿ ಮಾಡುವ ಮೊದಲು ಬಹಳ ಜಾಗರೂಕತೆಯಿಂದ ಇರಿ.
ಸಬ್ಸಿಡಿ ವಿಚಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90% ನಷ್ಟು ಸಬ್ಸಿಡಿ ಸಿಗುತ್ತದೆ. ಸಾಮಾನ್ಯ ರೈತರಿಗೆ ಸಿಗುವ ಸಬ್ಸಿಡಿ ಮೊತ್ತ ಸ್ವಲ್ಪ ಕಡಿಮೆ ಇದ್ದರೂ, ಎಮ್ಮೆ ಖರೀದಿಗೆ ಉತ್ತಮ ಬಂಡವಾಳವನ್ನಂತೂ ಸರ್ಕಾರ ಒದಗಿಸುತ್ತದೆ.
ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್
ಯಾರಿಗೆ ಸಿಗಲಿದೆ ಸಬ್ಸಿಡಿ! (Who can get subsidy Loan)
ಮಹಿಳಾ ಮತ್ತು ಅಂಗವಿಕಲ ವ್ಯಕ್ತಿ ಕೂಡ ಸಬ್ಸಿಡಿ ಪಡೆದುಕೊಳ್ಳಬಹುದು ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಅರ್ಜಿ ಸಲ್ಲಿಸಬಹುದು. ಹಾಲು ಉತ್ಪಾದಕರು ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪಶು ಸಂಗೋಪನೆ ಮಾಡುವ ರೈತರು ಅರ್ಜಿ ಸಲ್ಲಿಸಬಹುದು.
ಹಾಲು ಉತ್ಪಾದಕರ ಸಂಘದಿಂದಲೂ ಕೂಡ ನೀವು ಈ ಎಮ್ಮೆ ತಳಿ ಖರೀದಿಗೆ ಸಹಾಯಧನ ಪಡೆಯಬಹುದಾಗಿದ್ದು ಹಾಲನ್ನು ಮಾತ್ರ ಅದೇ ಡೈರಿಗೆ ಮಾರಾಟ ಮಾಡಬೇಕು ಎನ್ನುವ ನಿಯಮ ಇರುತ್ತದೆ.
Lakhs of income from this buffalo farming, Get subsidy loan Also