Business News

ಬಡವರಿಗೆ ಅನುಕೂಲಕ್ಕಾಗಿ ಪ್ರತಿ ತಿಂಗಳು ಸಿಗಲಿದೆ ₹3000 ರೂಪಾಯಿ! ಯೋಜನೆಗೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಕಡೆಯಿಂದ ಹಲವು ಯೋಜನೆಗಳನ್ನು ಬಡವರಿಗೆ ಅನುಕೂಲ ಆಗಲಿ ಎಂದು ಜಾರಿಗೆ ತರಲಾಗಿದೆ. ಅವುಗಳಿಂದ ಕೋಟ್ಯಾಂತರ ಬಡ ವರ್ಗದ ಜನರಿಗೆ ಅರ್ಥಿಕವಾಗಿ ಸಹಾಯ ಆಗುತ್ತಿದೆ. ಅಂಥದ್ದೊಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.

ಈ ಒಂದು ಯೋಜನೆ ಇಂದ ನಿಮಗೆ ಪ್ರತಿ ತಿಂಗಳು ₹3000 ರೂಪಾಯಿ ಆರ್ಥಿಕ ಸಹಾಯ ಸಿಗಲಿದ್ದು, ಜೊತೆಗೆ ಇನ್ನು ಕೆಲವು ಪ್ರಯೋಜನಗಳು ಸಿಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

Get Rupees 3000 benefit From This Scheme

ಕೇಂದ್ರ ಸರ್ಕಾರವು ನಮ್ಮ ದೇಶದ ಜನರಿಗಾಗಿ ಇಶ್ರಮ್ ಕಾರ್ಡ್ (E-Shram Card) ಸೌಲಭ್ಯವನ್ನು ಜಾರಿಗೆ ತಂದಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಈ ಒಂದು ಕಾರ್ಡ್ ಮಾಡಿಸಿಕೊಂಡರೆ, ನಿಮಗೆ ಪ್ರತಿ ತಿಂಗಳು ₹3000 ರೂಪಾಯಿಗಳು ಪೆನ್ಶನ್ (Pension) ರೂಪದಲ್ಲಿ ಸಿಗಲಿದ್ದು, ಅದರ ಜೊತೆಗೆ ಆರೋಗ್ಯ ವಿಮೆಯ (Health Insurance) ಪ್ರಯೋಜನ ಸಹ ಸಿಗಲಿದೆ.

ಒಟ್ಟಿನಲ್ಲಿ ಇದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯ ಆಯ್ಕೆ ಆಗಿದ್ದು, ಕಷ್ಟದಲ್ಲಿರುವ ಜನಸಾಮಾನ್ಯರು ಇಶ್ರಮ್ ಕಾರ್ಡ್ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ.

ಇಂತಹ ಎಲ್ಲಾ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ! ಕೇಂದ್ರದಿಂದ ಹೊಸ ಯೋಜನೆ ಜಾರಿ

ಇಶ್ರಮ್ ಕಾರ್ಡ್ ಅಂದ್ರೆ ಏನು?

ಇಶ್ರಮ್ ಕಾರ್ಡ್ ಅನ್ನು ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೂಲಿ ಕೆಲಸ ಮಾಡುವಂಥ ಕಾರ್ಮಿಕರಿಗಾಗಿ ಜಾರಿಗೆ ತರಲಾಗಿದೆ. ಕೂಲಿ ಕಾರ್ಮಿಕರಿಗೆ ವಯಸ್ಸಾದ ಕಾಲದಲ್ಲಿ ಆರ್ಥಿಕವಾಗಿ ಯಾವುದೇ ನೆರವು ಇರುವುದಿಲ್ಲ. ಹಾಗಾಗಿ ಅಂಥವರಿಗೆ ಸಹಾಯ ಆಗಲಿ ಎಂದು ಇಶ್ರಮ್ ಕಾರ್ಡ್ ಸೌಲಭ್ಯವನ್ನು ಜಾರಿಗೆ ತರಲಾಗಿದ್ದು, ಈ ಕಾರ್ಡ್ ಮಾಡಿಸಿಕೊಂಡರೆ, ಅವರಿಗೆ ವಯಸ್ಸಾದ ಕಾಲಕ್ಕೆ ಪ್ರತಿ ತಿಂಗಳು ₹3000 ರೂಪಾಯಿಗಳು ಪೆನ್ಶನ್ ರೂಪದಲ್ಲಿ ಸಿಗಲಿದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಯಾರೇ ಇದ್ದರು ಅರ್ಜಿ ಸಲ್ಲಿಸಿ ಇಶ್ರಮ್ ಕಾರ್ಡ್ ಪಡೆದರೆ, ವಯಸ್ಸಾದ ಕಾಲಕ್ಕೆ ನೀವು ಕಷ್ಟಪಡುವ ಅವಶ್ಯಕತೆಯೇ ಇರುವುದಿಲ್ಲ.

ಈ ಕಾರ್ಡ್ ಇಂದ ಪ್ರತಿ ತಿಂಗಳು ಪೆನ್ಶನ್ (Monthly Pension) ಸಿಗುವುದರ ಜೊತೆಗೆ ವಿಮೆ ಸೌಲಭ್ಯ ಕೂಡ ಇದೆ. ಒಂದು ವೇಳೆ ಇಶ್ರಮ್ ಕಾರ್ಡ್ ಮಾಡಿಸಿರುವ ವ್ಯಕ್ತಿ ಅಪಘಾತದಲ್ಲಿ ಮೃತರಾದರೆ ಅವರ ಕುಟುಂಬಕ್ಕೆ 2 ಲಕ್ಷದವರೆಗೂ ವಿಮೆಯ (Insurance) ಹಣ ಸಿಗುತ್ತದೆ..  ಈ ಎಲ್ಲಾ ಪ್ರಯೋಜನ ಇಶ್ರಮ್ ಕಾರ್ಡ್ ನಲ್ಲಿ ಲಭ್ಯವಿದೆ..

ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್

e-shram Cardಇಶ್ರಮ್ ಕಾರ್ಡ್ ಪ್ರಯೋಜನ:

*60 ವರ್ಷ ಮೇಲ್ಪಟ್ಟ ನಂತರ ಇಶ್ರಮ್ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ₹3000 ಪೆನ್ಶನ್ ಸಿಗುತ್ತದೆ.
*ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತವಾಗಿ ಅಂಗಾಂಗಗಳ ವೈಫಲ್ಯ ಉಂಟಾದರೆ, ಅವರು ಅರ್ಜಿ ಹಾಕಿ, 1ಲಕ್ಷದವರೆಗೂ ಸಹಾಯ ಪಡೆಯಬಹುದು.
*ಇಶ್ರಮ್ ಕಾರ್ಡ್ ಪಡೆದವರು ಅಪಘಾತದಲ್ಲಿ ಮೃತರಾದರೆ ಅವರ ಪತ್ನಿಗೆ ₹2 ಲಕ್ಷದವರೆಗು ವಿಮೆಯ ಮೊತ್ತ ಸಿಗುತ್ತದೆ..

ಇಶ್ರಮ್ ಕಾರ್ಡ್ ಪಡೆಯಲು ಅರ್ಹತೆ:

*ಅರ್ಜಿ ಹಾಕಿದವರಿಗೆ 60 ವರ್ಷವಾದ ನಂತರ ಪ್ರತಿ ತಿಂಗಳು ₹3000 ಪೆನ್ಶನ್ ಸಿಗುತ್ತದೆ.
*ವಿಮೆಯ ಸೌಲಭ್ಯವೂ ಇರಲಿದೆ.

ಈ ಎಲ್ಲಾ ಸೌಲಭ್ಯಗಳು ಇರುವ ಕಾರಣ, ಕಾರ್ಮಿಕ ವರ್ಗಕ್ಕೆ ಸೇರಿದವರು, ಇಶ್ರಮ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

Get Rupees 3000 benefit From This Scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories