ಆನ್ಲೈನ್ ಮೂಲಕವೇ ವೋಟರ್ ಐಡಿ ಮಾಡಿಕೊಳ್ಳಿ, ಮನೆ ಬಾಗಿಲಿಗೆ ತಲುಪುತ್ತೆ ಕಾರ್ಡ್!

ಆನ್ಲೈನ್ನಲ್ಲಿ ವೋಟರ್ ಐಡಿ ಮಾಡಿಸಿಕೊಂಡು ಕೆಲವೇ ದಿನಗಳಲ್ಲಿ ಮನೆಗೆ ಬರುವಂತೆ ಮಾಡಿಕೊಳ್ಳಿ!

ನಾವು ಭಾರತೀಯ ಪ್ರಜೆ ಎಂದು ಗುರುತಿಸುವ ಸಲುವಾಗಿ ಇರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ (Aadhaar Card) , ಪ್ಯಾನ್ ಕಾರ್ಡ್ ( PAN Card) ಜೊತೆಗೆ ವೋಟರ್ ಐಡಿ (voter ID) ಕೂಡ ಒಂದು.

ಭಾರತದಲ್ಲಿ ಪ್ರತಿಯೊಬ್ಬ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಮತ ಚಲಾಯಿಸಲು ಅಥವಾ ಚುನಾವಣೆ (election) ಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಹೊಂದಿರುವುದು ಕಡ್ಡಾಯ.

ಭಾರತೀಯ ಚುನಾವಣಾ ಆಯೋಗ (election commission of India) ಪ್ರತಿಯೊಬ್ಬರಿಗೂ ವೋಟರ್ ಐಡಿ ನೀಡುತ್ತದೆ ಹಾಗೂ ಅದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಕೂಡ ರೂಪಿಸುತ್ತದೆ.

ಆನ್ಲೈನ್ ಮೂಲಕವೇ ವೋಟರ್ ಐಡಿ ಮಾಡಿಕೊಳ್ಳಿ, ಮನೆ ಬಾಗಿಲಿಗೆ ತಲುಪುತ್ತೆ ಕಾರ್ಡ್! - Kannada News

ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ

ವೋಟರ್ ಐಡಿ ಪಡೆದುಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸುಲಭ!

ಎಲ್ಲರಿಗೂ ತಿಳಿದಿರುವಂತೆ ವೋಟರ್ ಐಡಿ ಪಡೆದುಕೊಳ್ಳಬೇಕು ಅಂದ್ರೆ ಚುನಾವಣಾ ಆಯೋಗದ ಕಚೇರಿಗೆ ಹೋಗಬೇಕು ಅಥವಾ ಹತ್ತಿರದ ಸೇವಕೇಂದ್ರಗಳಲ್ಲಿಯೂ ಕೂಡ ವಿತರಣೆ ಮಾಡಲಾಗುತ್ತದೆ

ಕೆಲವೊಮ್ಮೆ ಎಷ್ಟೋ ಹೊತ್ತಿನ ವರೆಗೆ ಕಾದು ಕುಳಿತು ವೋಟರ್ ಐಡಿ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಇನ್ನು ಮುಂದೆ ವೋಟರ್ ಐಡಿ ಅಥವಾ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಲು ಕೆಲವೇ ನಿಮಿಷಗಳು ಸಾಕು.. ಹೇಗೆ ಅಂತೀರಾ?

ಹೌದು, ಈಗ ಲೋಕಸಭಾ ಎಲೆಕ್ಷನ್ (lok sabha election) ಕೂಡ ಹತ್ತಿರ ಬರುತ್ತಿದೆ ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ವೋಟರ್ ಐಡಿ ನವೀಕರಿಸಿಕೊಳ್ಳುವುದಕ್ಕೆ ಹಾಗೂ ಹೊಸ ವೋಟರ್ ಐಡಿ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ನೀವು ಇನ್ನು ಮುಂದೆ ಯಾವುದೇ ಸರ್ಕಾರಿ ಕಚೇರಿಗೆ ಹೋಗಬೇಕಾಗಿಲ್ಲ. ಬದಲಾಗಿ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಿಂದಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ? ಇಲ್ಲಿದೆ ಮಹತ್ವದ ಮಾಹಿತಿ

Voter IDಆನ್ಲೈನ್ ನಲ್ಲಿ ವೋಟರ್ ಐಡಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? (Online voter ID)

* https://voters.eci.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

*ರಾಷ್ಟ್ರೀಯ ಮತದಾರರ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ಈಗ ಆನ್ಲೈನ್ ಅಪ್ಲೈ ನಲ್ಲಿ ಮತದಾರರ ನೋಂದಣಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ

*ಈಗ ಫಾರ್ಮ್ ನಂಬರ್ 6 ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು.

*ಭರ್ತಿ ಮಾಡಿದ ನಂತರ ಫಾರ್ಮ್ ಅನ್ನು ಮತ್ತೆ ಲೋಡ್ ಮಾಡಿ. ನಿಮ್ಮ ಈ ಮೇಲ್ಗೆ ಒಂದು ಲಿಂಕ್ ಕಳುಹಿಸಲಾಗುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದ್ರೆ ನಿಮಗೆ ನಿಮ್ಮ ಅರ್ಜಿಯ ಸ್ಥಿತಿ ತಿಳಿದುಕೊಳ್ಳಬಹುದು.

*ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೇವಲ 10 ದಿನಗಳಲ್ಲಿ ಮತದಾರರ ಗುರುತಿನ ಚೀಟಿ ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮುಖಾಂತರ ಬರುತ್ತದೆ.

ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ

Get voter ID online, the card will be delivered to your doorstep

Follow us On

FaceBook Google News

Get voter ID online, the card will be delivered to your doorstep