ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ? ಇಲ್ಲಿದೆ ಮಹತ್ವದ ಮಾಹಿತಿ

ಪಾಲಕರ ಆಸ್ತಿ ಹಂಚಿಕೆ ಬಗ್ಗೆ ಮತ್ತೊಂದು ಆದೇಶ ಹೊರಡಿಸಿದ ಹೈಕೋರ್ಟ್, ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗಲಿದೆ ಗೊತ್ತೇ?

Bengaluru, Karnataka, India
Edited By: Satish Raj Goravigere

ತಂದೆ ತಾಯಿಯ ಆಸ್ತಿಯಲ್ಲಿ ಅಂದ್ರೆ ಪಾಲಕರ ಆಸ್ತಿಯಲ್ಲಿ ಮಕ್ಕಳಿಗೆ ಸಮಾನವಾದ ಪಾಲು (property rights to daughter) ಇದ್ದೆ ಇದೆ, ಸಮಾನ ಪಾಲು ನೀಡಲಾಗುತ್ತಿದೆ. ಹಾಗಾಗಿ ಮದುವೆಯಾಗಿ ಹೋದ ನಂತರವೂ ಕೂಡ ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಸಹೋದರರು ಪಾಲು ಕೊಡಲೇಬೇಕು.

ಪಾಲಕರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಇರುವ ಪಾಲು ಎಷ್ಟು?

ತಂದೆ ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕು ಇದೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಮದುವೆಯಾದ ನಂತರವೂ ಹೆಣ್ಣು ಮಕ್ಕಳಿಗೆ ಅಪ್ಪನ ಪಿತ್ರಾರ್ಜಿತ ಆಸ್ತಿ (Inherited property) ಯಲ್ಲಿ ಹಕ್ಕು ಪಡೆದುಕೊಳ್ಳಬಹುದು.

Property Rights

ಇದೀಗ ತೆಲಂಗಾಣ ಹೈಕೋರ್ಟ್ (Telangana High court) ಹೆಣ್ಣುಮಕ್ಕಳ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮತ್ತೊಂದು ಮಹತ್ವದ ವಿಷಯವನ್ನು ತಿಳಿಸಿದೆ.

ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ

ಸಹೋದರನೊಬ್ಬ ತನ್ನ ಸಹೋದರಿಗೆ ಮದುವೆಯಾದ ನಂತರ ಅಪ್ಪನ ಆಸ್ತಿಯಲ್ಲಿ ಕೊಡಬೇಕಾದ ಪಾಲಿನ ಬಗ್ಗೆ ಪ್ರಶ್ನೆ ಮಾಡಿದ್ದ. ಇದರ ಬಗ್ಗೆ ಹೈಕೋರ್ಟ್ ಮಹತ್ವವಾದ ತೀರ್ಮಾನವನ್ನು ತಿಳಿಸಿದೆ.

ತಂದೆಯ ಮರಣದ ನಂತರ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಇರುವ ಹಕ್ಕಿನ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಿದ್ದು ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂಜಿ ಪ್ರಿಯದರ್ಶಿನಿ ಅವರು ಅರ್ಜಿ ಪರಿಶೀಲಿಸಿ ಆದೇಶ ಹೊರಡಿಸಿದ್ದಾರೆ. ಸೋದರಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕೆ ಎನ್ನುವ ಸಹೋದರನ ಅರ್ಜಿಯನ್ನು ವಜಾ ಗೊಳಿಸುವ ಮೂಲಕ ಮಾತ್ರವಾದ ತೀರ್ಪನ್ನು ಕೂಡ ನ್ಯಾಯಮೂರ್ತಿಗಳು ಕೊಟ್ಟಿದ್ದಾರೆ.

ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ

Property documentsಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವ ಹೆಣ್ಣು ಮಗಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕಿದೆ!

ತಂದೆಯ ಆಸ್ತಿಗೆ ಸಂಬಂಧಪಟ್ಟಂತೆ ವಿಲ್ ಡಿಡ್ ನಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ತನ್ನ ಸಹೋದರಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆಗೆ ಪಾಲು ಕೊಡುವುದಿಲ್ಲ ಎಂದು ತಿಳಿಸಿದ್ದ. ಆದರೆ ಇದಕ್ಕೆ ವಿರುದ್ಧವಾಗಿ ಕೋರ್ಟ್ ಆದೇಶ ಹೊರಡಿಸಿದ್ದು ಸಹೋದರಿಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎನ್ನುವ ಕಾರಣಕ್ಕೆ ತಂದೆ ಆಸ್ತಿಯಲ್ಲಿ ಆಕೆಗೆ ಪಾಲು ಕೊಡದೆ ಇರುವಂತಿಲ್ಲ ಎಂದು ತೀರ್ಪನ್ನು ನೀಡಿದೆ.

ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು

ಒಬ್ಬ ಹೆಣ್ಣು ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಅಲ್ಲಿ ಆಕೆಗೆ ಎಷ್ಟೇ ಸುಖದ ಸುಪ್ಪತ್ತಿಗೆ ಇದ್ದರು, ಆಕೆ ಎಷ್ಟೇ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದರು ಕೂಡ, ಅದೇ ತಂದೆಯ ಆಸ್ತಿಯಲ್ಲಿ ಪಡೆದುಕೊಳ್ಳಬೇಕಾದ ಆಸ್ತಿ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಹಾಗಾಗಿ ಯಾವುದೇ ಸಹೋದರರು ಕಾನೂನಾತ್ಮಕವಾಗಿ ತನ್ನ ಸಹೋದರಿಗೆ ಪಾಲು ಕೊಡಲು ನಿರಾಕರಿಸಲು ಸಾಧ್ಯವಿಲ್ಲ.

What is the share of daughter in father property, Here is the information