1 ಲಕ್ಷ ಬೆಲೆಬಾಳುವ ಚಿನ್ನಾಭರಣ ಅಡವಿಟ್ಟರೆ ಎಷ್ಟು ಲೋನ್ ಸಿಗುತ್ತೆ? ಇಲ್ಲಿದೆ ಲೆಕ್ಕ
Gold Loan: ಬಂಗಾರವನ್ನು ಅಡವಿಟ್ಟು ಸಾಲ (gold loan) ಪಡೆಯಲು ಯೋಜಿಸುತ್ತಿದ್ದರೆ, ಅದರ ಅಡಿಯಲ್ಲಿ ಇರುವ ನಿಯಮಗಳು, ಶುಲ್ಕಗಳು ಹಾಗೂ ಪರಿಣಾಮಗಳು ಗೊತ್ತಿರಬೇಕು.

Gold Loan: ಬಂಗಾರ (gold) ಬೆಲೆ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಬೆಲೆ ಏರಿಕೆಯಾಗಬಹುದು, ಕೆಲವೊಮ್ಮೆ ತಗ್ಗಬಹುದು. ತೀವ್ರವಾಗಿ ಇಳಿಕೆಯಾಗಿದ್ರೆ, ನೀವು ಪಡೆದ ಸಾಲದ ಮೌಲ್ಯಕ್ಕಿಂತ ಬಂಗಾರದ ಮೌಲ್ಯ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.
ಈ ಸಂದರ್ಭದಲ್ಲಿ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿ ನೀವು ಇನ್ನಷ್ಟು ಹಣ ಪಾವತಿಸಬೇಕೆಂದು ಒತ್ತಾಯಿಸಬಹುದು. ಹಾಗಾಗಿ ಇಂತಹ ಪರಿಸ್ಥಿತಿಗೂ ಸಿದ್ಧರಾಗಿರಬೇಕು.
ಬಂಗಾರದ ಮೌಲ್ಯವನ್ನು ಆಧರಿಸಿ ಲಭ್ಯವಾಗುವ ಸಾಲದ ಪ್ರಮಾಣವನ್ನು “ಲೋನ್ ಟು ವ್ಯಾಲ್ಯೂ (LTV)” ಎನ್ನುತ್ತಾರೆ. RBI ನಿಯಮದ ಪ್ರಕಾರ, ಗರಿಷ್ಠ 75% ವರೆಗೆ ಮಾತ್ರ ಲೋನ್ (loan) ನೀಡಲು ಅನುಮತಿ ಇದೆ.
ಇದನ್ನೂ ಓದಿ: ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇರುತ್ತಾ? ಇಲ್ಲಿದೆ ಕೋರ್ಟ್ ತೀರ್ಪು
ಉದಾಹರಣೆಗೆ, ನಿಮ್ಮ ಬಂಗಾರದ ಮೌಲ್ಯ ₹1 ಲಕ್ಷ ಆದರೆ, ನೀವು ಗರಿಷ್ಠ ₹75,000 ವರೆಗೆ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತೀರಿ. ಇತ್ತೀಚಿನ 30 ದಿನಗಳ ಸರಾಸರಿ ಬಂಗಾರದ ಬೆಲೆಗಳನ್ನು IBJA (India Bullion & Jewellers Association) ಪ್ರಕಟಿಸುತ್ತದೆ.
ತಕ್ಷಣದ ಹಣದ ಅಗತ್ಯವಿದ್ದಾಗ ಬಂಗಾರವನ್ನು ಅಡವಿಟ್ಟು ಸಾಲ ಪಡೆಯುವುದು ಸಾಮಾನ್ಯ. ಆದರೆ, ಇದು ನೇರವಾದ ಪ್ರಕ್ರಿಯೆಯಲ್ಲ. ಸಾಲ ಪಡೆಯುವ ಮುನ್ನ, ವಾಸ್ತವಿಕ ಶರತ್ತುಗಳನ್ನು ಓದಿ, ಅರ್ಥಮಾಡಿಕೊಳ್ಳಬೇಕು.
ಇದನ್ನೂ ಓದಿ: ಮನೆ ಕಟ್ಟಲು 30 ಲಕ್ಷ ಲೋನ್ ತಗೊಂಡ್ರೆ ಬಡ್ಡಿ ಎಷ್ಟು? EMI ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕ
ಕೆಲವೊಮ್ಮೆ ಆಫರ್ಗಳು ಆಕರ್ಷಕವಾಗಿದ್ದರೂ ಅದರ ಅಡಿಯಲ್ಲಿ ಶುಲ್ಕಗಳು ಇದ್ದೇ ಇರುತ್ತವೆ. ಒಂದು ದಿನ ತಡವಾದರೆ ಭಾರೀ ದಂಡ ವಿಧಿಸಬಹುದು. ಕಮ್ಮಿ ಬಡ್ಡಿದರಗಳ ಮಾಯೆಗೆ ಬೀಳದಿರಿ. ನಿಮ್ಮ ಬಂಗಾರವನ್ನು ಸುರಕ್ಷಿತವಾಗಿ ಇರಿಸಿಕೊಂಡಿರುವ ರೆಪ್ಯೂಟೆಡ್ ಬ್ಯಾಂಕ್ ಅಥವಾ NBFC (non-banking finance company) ಯಿಂದ ಮಾತ್ರ ಸಾಲ ಪಡೆದುಕೊಳ್ಳುವುದು ಸುರಕ್ಷಿತ.
ಇದನ್ನೂ ಓದಿ: ನಿಮ್ಮದು ಪಿಎಂ ಜನ್ ಧನ್ ಬ್ಯಾಂಕ್ ಖಾತೆ ಇದ್ಯಾ? ಹಾಗಾದ್ರೆ ಇಲ್ಲಿದೆ ಬಿಗ್ ಅಪ್ಡೇಟ್
ಆರ್ಥಿಕ ತುರ್ತು ಪರಿಸ್ಥಿತಿಗಳಲ್ಲಿ ಬಂಗಾರವನ್ನು ಅಡವಿಟ್ಟು ಸಾಲ ಪಡೆಯುವುದು ಸಹಜ. ಆದರೆ ಬಡ್ಡಿದರ, ರಿಪೇಮೆಂಟ್ ನಿಯಮಗಳು, ಪ್ರೊಸೆಸಿಂಗ್ ಶುಲ್ಕಗಳ ಮಾಹಿತಿ ಸಂಪೂರ್ಣವಾಗಿ ತಿಳಿದ ನಂತರವೇ ಮುನ್ನಡೆಸಬೇಕು.
ಕೆಲವೊಮ್ಮೆ ಮಾಯಾಜಾಲದ ಆಫರ್ಗಳ ಹಿಂದೆ ಹೆಚ್ಚಿದ ಬಡ್ಡಿದರಗಳು ಅಡಗಿರುತ್ತವೆ. ಆದ್ದರಿಂದ ಮುಂಚೆ ಓದಿ, ತಿಳಿದು, ಆಮೇಲೆ ನಿರ್ಧಾರ ಮಾಡಬೇಕು.
Gold Loan Tips Before You Borrow




