ಇಷ್ಟು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆ ₹440 ರೂಪಾಯಿ ಏರಿಕೆ! ಬೆಳ್ಳಿ ಬೆಲೆ ₹1700 ರೂಪಾಯಿ ಹೆಚ್ಚಳ

Gold Price Today : ದೀಪಾವಳಿ ಹಬ್ಬದ ನಂತರ ಸತತ ಕುಸಿದಿದ್ದ ಚಿನ್ನದ ಬೆಲೆ (Gold Prices) ಈಗ ಮತ್ತೆ ಏರುತ್ತಿದೆ. ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಗುರುವಾರ (ನ.16) 22ಕ್ಯಾರೆಟ್ 10ಗ್ರಾಂ ಚಿನ್ನ ರೂ.400ರಷ್ಟು ಹೆಚ್ಚಿದ್ದರೆ, 24ಕ್ಯಾರೆಟ್ 10ಗ್ರಾಂನ ಚಿನ್ನ ರೂ.440ರಷ್ಟು ಏರಿಕೆಯಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,950 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.61,040 ಆಗಿದೆ. ಬೆಳ್ಳಿಯ ಬೆಲೆಯೂ (Silver Prices) ಚಿನ್ನದ ಹಾದಿಯಲ್ಲೆ ಸಾಗಿದೆ. ಬೆಳ್ಳಿಯ ಬೆಲೆ 1700 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 74,700 ರೂ. ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ (Gold and Silver Rates) ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

₹3 ಲಕ್ಷ ಸಾಲ ಯೋಜನೆ ಕುರಿತು ಪ್ರಧಾನಿ ಮೋದಿ ಘೋಷಣೆ! ಯಾರಿಗೆಲ್ಲಾ ಸಿಗಲಿದೆ ಬೆನಿಫಿಟ್

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

Gold Price Today

ಕಡಿಮೆ ಬಂಡವಾಳ, ಕೈತುಂಬಾ ಆದಾಯ! ಈ ಬಿಸಿನೆಸ್ ಮಾಡಿದ್ರೆ ಬಾರೀ ಇನ್ಕಮ್ ಗುರೂ

ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,100 ಇದ್ದರೆ, 24 ಕ್ಯಾರೆಟ್ ಬೆಲೆ ರೂ.61,190 ಆಗಿದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,950, 24 ಕ್ಯಾರೆಟ್ ಬೆಲೆ ರೂ.61,040,

ಕೋಲ್ಕತ್ತಾ 22 ಕ್ಯಾರೆಟ್ ಬೆಲೆ ರೂ.55,950, 24 ಕ್ಯಾರೆಟ್ ಬೆಲೆ ರೂ.61,040,

ಚೆನ್ನೈ 22 ಕ್ಯಾರೆಟ್ ಬೆಲೆ ರೂ.56,450, 24 ಕ್ಯಾರೆಟ್ ಬೆಲೆ ರೂ.61,580,

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,950, 24 ಕ್ಯಾರೆಟ್ ಬೆಲೆ ರೂ.61,040,

ಕೇರಳದಲ್ಲಿ 22 ಕ್ಯಾರೆಟ್ ಬೆಲೆ ರೂ.55,950, 24 ಕ್ಯಾರೆಟ್ ಬೆಲೆ ರೂ.61,040.

ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ ರೂ.55,950 ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ ರೂ.61,040 ಆಗಿದೆ.

ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.55,950 ಮತ್ತು 24 ಕ್ಯಾರೆಟ್ ಬೆಲೆ ರೂ.61,040 ಆಗಿದೆ.

ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿಯೋದು ಹೇಗೆ? ಅಷ್ಟಕ್ಕೂ ಎಕ್ಸ್ಪೈರಿ ಆಗಿದ್ರೆ ಏನಾಗುತ್ತೆ ಗೊತ್ತಾ?

ಬೆಳ್ಳಿಯ ಬೆಲೆ – Silver Price

ಚಿನ್ನದ ಬೆಲೆ

ರೈತರಿಗೆ ಸಿಹಿ ಸುದ್ದಿ, ರಕ್ತ ಚಂದನ ಬೆಳೆಯಲು ಮತ್ತು ಮಾರಲು ಸರ್ಕಾರದ ಗ್ರೀನ್ ಸಿಗ್ನಲ್!

ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 74,700 ರೂ. ಮುಂಬೈನಲ್ಲಿ ರೂ.74,700 ಇದ್ದರೆ, ಚೆನ್ನೈನಲ್ಲಿ ರೂ.77,700, ಬೆಂಗಳೂರಿನಲ್ಲಿ ರೂ.71,500, ಕೇರಳದಲ್ಲಿ ರೂ.77,700 ಮತ್ತು ಕೋಲ್ಕತ್ತಾದಲ್ಲಿ ರೂ.74,700 ಆಗಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 77,700 ರೂ. ಮುಂದುವರೆದಿದೆ.

Gold Price Today 16th November 2023, Gold And Silver Rates In Bengaluru, Hyderabad, Delhi, Mumbai, Chennai

Related Stories