ಚಿನ್ನದ ಬೆಲೆ 10 ಗ್ರಾಂಗೆ ₹1.02 ಲಕ್ಷ! ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನ ಶಾಕಿಂಗ್ ಲೆವಲ್ಗೆ ಏರಿಕೆ - Gold Price Today
ಆಗಸ್ಟ್ 7ರಂದು ದೇಶದಾದ್ಯಾಂತ ಚಿನ್ನದ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರ 10 ಗ್ರಾಂಗೆ ₹1,02,340, 22 ಕ್ಯಾರೆಟ್ ₹93,810 ತಲುಪಿದೆ ಎಂದು ವರದಿ.
- ಬೆಂಗಳೂರಿನಲ್ಲಿ ಚಿನ್ನದ ಬೆಲೆ ₹1,02,340 ತಲುಪಿದೆ
- 22 ಕ್ಯಾರೆಟ್ ಬಂಗಾರದ ದರ ₹93,810 ಮಟ್ಟಕ್ಕೆ ಏರಿಕೆ
- ಚಿನ್ನದ ಜೊತೆ ಬೆಳ್ಳಿಯ ಬೆಲೆಯೂ ಗಗನಕ್ಕೇರಿದೆ
ಬೆಂಗಳೂರು, ಅಗಸ್ಟ್ 7, ಬುಧವಾರ ಬೆಳಿಗ್ಗೆಯಿಂದಲೇ ದೇಶದಾದ್ಯಾಂತ ಚಿನ್ನದ ಬೆಲೆ (Gold Price Today) ರೆಕಾರ್ಡ್ ಮಟ್ಟ ತಲುಪಿದ್ದು, ಗೃಹಿಣಿಯರ ಚಿನ್ನಾಭರಣ (Gold Jewellery) ಕನಸುಗಳಿಗೆ ಕಡಿವಾಣ ಹಾಕಿದಂತಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate) ಇತಿಹಾಸದಲ್ಲಿ ಇಲ್ಲದಷ್ಟು ಮಟ್ಟಕ್ಕೆ ಏರಿವೆ.
ಬೆಂಗಳೂರು ನಗರದಲ್ಲಿ ಇಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಮಿಗೆ ₹1,02,340 ಆಗಿದ್ದು, 22 ಕ್ಯಾರೆಟ್ ಬಂಗಾರ ₹93,810 ಕ್ಕೆ ವ್ಯಾಪಾರವಾಗಿದೆ. ಇದೇ ಬೆಲೆ ಮುಂಬೈ, ವಿಜಯವಾಡ, ಚೆನ್ನೈ, ಮತ್ತು ಹೈದರಾಬಾದ್ ನಗರಗಳಲ್ಲಿ ಸಹ ನೋಡುವಂತಾಗಿದೆ.
ಇದನ್ನೂ ಓದಿ: ಪೈಸಾ ವಸೂಲ್! ಕೇವಲ 198ಕ್ಕೆ 40 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾ
ಇನ್ನೊಂದೆಡೆ, ಬೆಳ್ಳಿ ಬೆಲೆ ಕೂಡಾ ಹೊಸ ಎತ್ತರ ತಲುಪಿದ್ದು, ಬೆಂಗಳೂರಿನಲ್ಲಿ 1 ಕಿಲೋ ಬೆಳ್ಳಿ ₹1,16,100 ರೂ. ಆಗಿದೆ. ಹೈದರಾಬಾದ್, ಕೇರಳ ಮತ್ತು ಚೆನ್ನೈಗಳಲ್ಲಿ ಬೆಳ್ಳಿಯ ದರ ₹1,26,100 ರೂಪಾಯಿ ತಲುಪಿದೆ.
ಹೆಚ್ಚುವರಿ ವೆಚ್ಚದ ಹಿನ್ನೆಲೆಯಲ್ಲಿ ಗ್ರಾಹಕರು ಚಿನ್ನ ಖರೀದಿಗೆ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ. ವಿಶೇಷವಾಗಿ ಮದುವೆ, ಆಚರಣೆಗಳಲ್ಲಿ ಚಿನ್ನ ಖರೀದಿಸುವ ಯೋಜನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
ದೇಶದ ಇತರೆ ನಗರಗಳೆಲ್ಲಾ ಸಹ ಇದೇ ಸ್ಥಿತಿಯಲ್ಲಿದ್ದು, ದೆಹಲಿಯಲ್ಲಿ 24 ಕ್ಯಾರೆಟ್ ಬಂಗಾರ ₹1,02,490, ಮತ್ತು 22 ಕ್ಯಾರೆಟ್ ₹93,960 ದರಕ್ಕಿದೆ.
ಇಂತಹ ಬೆಲೆ ಏರಿಕೆಯಲ್ಲಿ ಬಂಗಾರ ಖರೀದಿಸುವ ಮುನ್ನ ದರ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ. ಇದು ದಿನದಿಂದ ದಿನಕ್ಕೆ ಬದಲಾವಣೆ ಹೊಂದುವ ಕಾರಣ, ನವೀನ ದರ ತಿಳಿದು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಸ್ಕೀಮ್, ತಿಂಗಳಿಗೆ ₹5000 ಪೆನ್ಷನ್! ನೀವೂ ಕೂಡ ಅಪ್ಲೈ ಮಾಡಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಹೈದರಾಬಾದ್ನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,02,340 ರೂ.ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 93,810 ರೂ.ಗಳಾಗಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,02,490 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 93,960 ರೂ.ಗಳಾಗಿದೆ.
ಇದನ್ನೂ ಓದಿ: 500 ರೂಪಾಯಿ ನೋಟುಗಳು ರದ್ದಾಗುತ್ತಾ? ಸರ್ಕಾರದಿಂದ ಮಹತ್ವದ ಅಪ್ಡೇಟ್
ಮುಂಬೈನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,02,340 ರೂ.ಗಳಾಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 93,810 ರೂ.ಗಳಾಗಿದೆ.
ಚೆನ್ನೈನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,02,340 ರೂ.ಗಳಾಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 93,810 ರೂ.ಗಳಾಗಿದೆ.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
Gold Prices Hit Record High in Bengaluru




