10ನೇ ತರಗತಿ ಪಾಸ್ ಆದವರಿಗೆ ಸರ್ಕಾರಿ ಕೆಲಸ! 69,000 ಸಂಬಳ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆ

ಕೇಂದ್ರ ಸರ್ಕಾರದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ; 10ನೇ ತರಗತಿ ಪಾಸ್ ಆದವರಿಗೂ 69,000ರೂ. ಸಂಬಳ ಸಿಗುವ ಸೌಲಭ್ಯ ಮಿಸ್ ಮಾಡ್ಕೋಬೇಡಿ

ನೀವು ಕಡಿಮೆ ಶಿಕ್ಷಣ (Education) ಪಡೆದುಕೊಂಡಿದ್ದರು ಕೂಡ ಕೇಂದ್ರ ಸರಕಾರದ ಉದ್ಯೋಗಕ್ಕೆ (government job) ಸೇರಿಕೊಳ್ಳಬೇಕಾದ ಸಂಬಳ ಪಡೆದುಕೊಳ್ಳಬೇಕಾ? ಹಾಗಾದ್ರೆ ಈ ಕೆಲಸಕ್ಕೆ ಇಂದೇ ಕೊನೆಯ ದಿನಾಂಕ!

ಅಂದರೆ ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳು ಖಾಲಿ ಇದ್ದು, ಕೇವಲ 10ನೇ ತರಗತಿ ಪಾಸ್ ಆಗಿರುವವರು (job for 10th pass candidate) ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಇಂದೇ (28 ನವೆಂಬರ್ 2023) ಕೊನೆಯ ದಿನಾಂಕವಾಗಿರುವುದರಿಂದ ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

10ನೇ ತರಗತಿ ಪಾಸ್ ಆದವರಿಗೆ ಸರ್ಕಾರಿ ಕೆಲಸ! 69,000 ಸಂಬಳ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆ - Kannada News

ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ! ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹20,000 ಸ್ಕಾಲರ್ಶಿಪ್

ಹುದ್ದೆಗಳ ವಿವರ (About job)

ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ (Indo-Tibetan Border Police Force) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನರಲ್ ಡ್ಯೂಟಿ 2048 ಕಾನ್ಸ್ಟೇಬಲ್ ಹುದ್ದೆಗಳು (constable vacancy) ಖಾಲಿ ಇವೆ.

ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ (Qualification)

ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಯಾವುದೇ ವಿಶ್ವವಿದ್ಯಾಲಯ ಅಥವಾ ನೋಂದಾಯಿತ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ದಾಖಲೆ ಒದಗಿಸಬೇಕು ಎಂದು ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ (Age)

ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ 18 ವರ್ಷ ವಯಸ್ಸಿನಿಂದ 23 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಅಥವಾ ವಿಭಾಗೀಯ ವಿದ್ಯಾರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಕೂಡ ನೀಡಲಾಗುವುದು.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ಸ್ಕಾಲರ್ಶಿಪ್; ಇಂದೇ ಅರ್ಜಿ ಸಲ್ಲಿಸಿ

Govt jobsಅರ್ಜಿ ಶುಲ್ಕ (Application fee)

ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ ಸಿ (SC) ಹಾಗೂ ಎಸ್ ಟಿ (ST) ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದವರಿಗೆ 100 ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಇದನ್ನು ಆನ್ಲೈನ್ ಮೂಲಕವೇ ಪಾವತಿಸಬಹುದು.

ವೇತನ (Salary)

ಆಯ್ಕೆಯಾದ ಅಭ್ಯರ್ಥಿಗಳು 21,700 ರೂಪಾಯಿಗಳಿಂದ 69,100 ಗಳ ವರೆಗೆ ಮಾಸಿಕ ವೇತನ ಪಡೆದುಕೊಳ್ಳಬಹುದು. ಆಯ್ಕೆಯಾದ ಅಭ್ಯರ್ಥಿ ದೇಶದ ಯಾವುದೇ ಭಾಗದಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು.

ಫೋನ್‌ಪೇನಲ್ಲಿ ಅಮೌಂಟ್ ಇಲ್ವಾ? ಪರವಾಗಿಲ್ಲ, ಫೋನ್‌ಪೇ ಮೂಲಕವೇ ಪಡೆಯಿರಿ ಲೋನ್

ಆಯ್ಕೆ ಹೇಗೆ? (Selection process)

ಮೊದಲಿಗೆ ದೈಹಿಕ ಮಾನದಂಡಗಳ ಪರೀಕ್ಷೆ ನಡೆಸಲಾಗುವುದು. ನಂತರ ದಾಖಲಾತಿ ಪರೀಕ್ಷೆ ಇರುತ್ತದೆ. ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ನಡೆಸಿದ ನಂತರ ನೇರ ಸಂದರ್ಶನ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ನವೆಂಬರ್ 2023, ಅಂದರೆ ಇಂದೇ ಕೊನೆಯ ದಿನಾಂಕ (last date) ವಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ. ಈ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಂಖ್ಯೆ 011-24369482 ಅಥವಾ 24369483 ಗೆ ಕರೆ ಮಾಡಬಹುದು.

Govt jobs for 10th class passers, 69,000 salary

Follow us On

FaceBook Google News

Govt jobs for 10th class passers, 69,000 salary