Business News

ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಇನ್ಮುಂದೆ ಡಬಲ್ ಬೆನಿಫಿಟ್

ಕೇಂದ್ರ ಸರ್ಕಾರ (Central government) ರೈತರ ಹಿತ ದೃಷ್ಟಿಯಿಂದ ಜಾರಿಗೆ ತಂದಿರುವ ಹಲವು ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (pm Kisan Samman Nidhi Yojana) ಹೆಚ್ಚು ಫೇಮಸ್ ಆಗಿದೆ. ಯಾಕಂದ್ರೆ ಈ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ರೈತರು ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳುತ್ತಿದ್ದಾರೆ.

ರೈತರ ಹಿತ ದೃಷ್ಟಿಯಿಂದ ರೈತರ ಆರ್ಥಿಕ ಪರಿಸ್ಥಿತಿ (farmers financial stability) ಸುಧಾರಿಸಲು ಕೇಂದ್ರ ಸರ್ಕಾರ ಸಾಕಷ್ಟು ಸೌಲಭ್ಯವನ್ನು ಒದಗಿಸಿ ಕೊಡುತ್ತಿದೆ. ಅದೇ ರೀತಿ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಆರಂಭಿಸಿದ ನಂತರ ಕೋಟ್ಯಾಂತರ ರೂಪಾಯಿಗಳನ್ನು ರೈತರಿಗೆ ಒದಗಿಸಲಾಗಿದೆ.

PM Kisan Yojana New Update on Deposit of Money to Bank Account

ಕಡಿಮೆ ಬಡ್ಡಿಗೆ ಪಡೆಯಿರಿ 10 ಲಕ್ಷ ತನಕ ಸಾಲ! ಇದು ಕೇಂದ್ರ ಸರ್ಕಾರದ ಯೋಜನೆ

ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಫಲಾನುಭವಿ ರೈತರ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ. ಮೂರು ಕಂತುಗಳಲ್ಲಿ ಹಣ ಜಮಾ ಮಾಡಲಾಗುತ್ತಿದ್ದು, ಪ್ರತಿ ಕಂತಿಗೆ 2,000 ವರ್ಗಾವಣೆ ಮಾಡಲಾಗುತ್ತದೆ.

ರೈತರಿಗೆ ಗುಡ್ ನ್ಯೂಸ್!

2019 ಫೆಬ್ರುವರಿ ತಿಂಗಳಿನಲ್ಲಿ ಪಿಎಂ ಕಿಸಾನ್ ಸಮ್ಮಾನ ನೀಡಿ ಯೋಜನೆ ಆರಂಭವಾಯಿತು. ಮೂರು ಕಂತುಗಳು, ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ರೈತರಿಗೆ 15 ಕಂತಿನ ಹಣ ಜಮಾ ಮಾಡಲಾಗಿದ್ದು, ರೈತರು 16ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಮಧ್ಯಂತರ ಬಜೆಟ್ (budget) ಘೋಷಣೆ ಮಾಡಲಾಗುವುದು. ಲೋಕಸಭಾ ಚುನಾವಣೆ (Loksabha election) ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಈಗ ಸಿಗುತ್ತಿರುವ ಹಣಕ್ಕೆ ಶೇಕಡ 50% ನಷ್ಟು ಹೆಚ್ಚುವರಿಯಾಗಿ ಹಣ ಒದಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಮನೆ, ಆಸ್ತಿ, ಜಮೀನು ಖರೀದಿ ನಿಯಮದಲ್ಲಿ ಭಾರೀ ಬದಲಾವಣೆ! ಹೊಸ ನಿಯಮ

pm Kisan Samman Nidhi Yojanaಅಂದರೆ 6,000ದ ಬದಲಿಗೆ ಪ್ರತಿವರ್ಷ 9,000ಗಳನ್ನು ರೈತರ ಖಾತೆಗೆ (Bank Account) ಜಮಾ ಮಾಡುವ ಸಾಧ್ಯತೆ ಇದೆ. ಮೂರು ಕಂತುಗಳಲ್ಲಿ ಹಣ ಜಮಾ ಮಾಡಲಾಗುವುದು. ಆದರೆ ಪ್ರತಿ ಕಂತಿಗೆ 3,000 ರೂಪಾಯಿಗಳನ್ನು ನೀಡಲಾಗುವುದು.

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು!

E-KYC ಚೆಕ್ ಮಾಡಿ!

ಇನ್ನು ಮುಂದೆ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ E-KYC ಕಡ್ಡಾಯವಾಗಿದೆ. ಇಲ್ಲಿಯವರೆಗೆ 15 ಕಂತಿನ ಹಣ ಬಿಡುಗಡೆ ಆಗಿದ್ದು, 16ನೇ ಕಂತಿನ ಹಣ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಹಣ ನಿಮ್ಮ ಖಾತೆ ಸೇರಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡಿಸಿಕೊಳ್ಳಬೇಕು.

ಒಂದು ವೇಳೆ ಇದುವರೆಗೆ E-KYC ಮಾಡಿಸಿಕೊಳ್ಳದೆ ಇದ್ದರೆ ತಕ್ಷಣ ಬ್ಯಾಂಕ್ ಗೆ ಹೋಗಿ ಮಾಡಿಸಿ. ಇಲ್ಲವಾದರೆ ಮುಂದಿನ ಕಂತಿನ ಹಣ ನಿಮ್ಮ ಖಾತೆಯನ್ನು ತಲುಪುವುದಿಲ್ಲ.

ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ

ಯೋಜನೆಗೆ ಸಂಬಂಧಪಟ್ಟ ದೂರು ದಾಖಲಿಸಲು ಮಾಹಿತಿ

ಸಹಾಯವಾಣಿ ಸಂಖ್ಯೆ; (toll free number)
155261
1800115526 (ಟೋಲ್ ಫ್ರೀ) 011-23381092

Great news for farmers from the central government, double benefit

Our Whatsapp Channel is Live Now 👇

Whatsapp Channel

Related Stories