ಉಚಿತ ಗ್ಯಾಸ್ ಕನೆಕ್ಷನ್ ಪಡೆಯೋಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ

Free Gas Connection : ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಈ ಎಲ್ಲಾ ಗ್ಯಾಸ್ ಏಜೆನ್ಸಿಗಳಿಂದ ಪಡೆಯಬಹುದು ಉಚಿತ ಗ್ಯಾಸ್ ಕನೆಕ್ಷನ್

Free Gas Connection : ಪ್ರಧಾನ ಮಂತ್ರಿ ಉಜ್ವಲ ಯೋಜನೆ (Ujjwala Yojana) ಬಹಳ ಫೇಮಸ್ ಆಗಿದೆ ಎಂದೇ ಹೇಳಬಹುದು. ಈ ಯೋಜನೆಯಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಯಲ್ಲಿ ಅಡುಗೆ ಮಾಡಿಕೊಳ್ಳುವಂತೆ ಆಗಿದೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನುವುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0!

ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಕಲೆಕ್ಷನ್ (free gas connection) ಹಾಗೂ ಸಬ್ಸಿಡಿ (subsidy) ದರದಲ್ಲಿ ಗ್ಯಾಸ್ ಸಿಲೆಂಡರ್ (Gas Cylinder) ನೀಡಲಾಗುತ್ತಿದೆ.

ನೀವು ಸುಲಭವಾಗಿ ಹತ್ತಿರದ ಸೇವಾ ಸಿಂಧೂ ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿ ಗೆ ಹೋಗಿ, ಉಚಿತ ಗ್ಯಾಸ್ ಗಾಗಿ ಬುಕಿಂಗ್ ಮಾಡಬಹುದು ಅಥವಾ ಇದೆಲ್ಲ ಬೇಡ ಎನಿಸಿದರೆ ಸುಲಭವಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯೋಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ - Kannada News

ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಹೊಸ ರೂಲ್ಸ್

ಉಜ್ವಲ ಯೋಜನೆಗೆ ಸಲ್ಲಿಸುವುದು ಹೇಗೆ? (How to apply for free gas connection)

ಹೌದು ಆನ್ಲೈನ್ ಮೂಲಕ ಸುಲಭವಾಗಿ ಗ್ಯಾಸ್ ಕನೆಕ್ಷನ್ ಗಾಗಿ ಅರ್ಜಿ ಸಲ್ಲಿಸಬಹುದು. ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (LPG gas cylinder) ಅನ್ನು ಉಚಿತವಾಗಿ ಪಡೆದುಕೊಳ್ಳಲು ಸರ್ಕಾರ ಕೆಲವು ಮಾನದಂಡಗಳನ್ನು ನಿರ್ಧರಿಸಿದೆ. ಆ ಮಾನದಂಡಗಳ ಒಳಗೆ ಬರುವ ಕುಟುಂಬಗಳಿಗೆ ಉಚಿತವಾಗಿ ಎಲ್ ಪಿ ಜಿ ಕನೆಕ್ಷನ್ ಪಡೆದುಕೊಳ್ಳಲು ಸಾಧ್ಯವಿದೆ.

LPG Gas Cylinder*ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಬ್ರೌಸರ್ (Google browser) ಓಪನ್ ಮಾಡಿ.

*ಗೂಗಲ್ ನಲ್ಲಿ ಉಜ್ವಲ ಯೋಜನೆ ಎಂದು ಸರ್ಚ್ ಮಾಡಿ.

https://www.pmuy.gov.in/kn/ujjwala2.html ಈ ವೆಬ್ಸೈಟ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಅಥವಾ ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ.

*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮಗೆ ಬೇಕಾದ ಭಾಷೆಯನ್ನು ಬದಲಾಯಿಸಬಹುದು. ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ. ಮುಂದಿನ ಹಂತವಾಗಿ ಮುಖಪುಟದಲ್ಲಿ ಕಾಣುವ Click here to apply for New Ujjwala 2.0 connection ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

*ಅಲ್ಲಿ ತಿಳಿಸಿರುವ ಎಲ್ಲಾ ಮಾನದಂಡಗಳ ಅಡಿಯಲ್ಲಿ ನೀವು ಬರುವುದಾದರೆ, ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ನಂತರ ಅಪ್ಲೈ ಮಾಡಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯಿರಿ! ಸೆಕೆಂಡುಗಳಲ್ಲಿ ಹಣ ಖಾತೆಗೆ ಜಮಾ

*ಈಗ ನಮ್ಮ ದೇಶದಲ್ಲಿ ಮುಖ್ಯವಾಗಿರುವ ಗ್ಯಾಸ್ ಕನೆಕ್ಷನ್ ಏಜೆನ್ಸಿಗಳಾದ Bharath, Indian, HP ಈ ಮೂರು ಏಜೆನ್ಸಿಗಳ ಲಿಂಕ್ ಕಾಣಿಸುತ್ತದೆ. ನಿನ್ನ ಹತ್ತಿರದ ಏಜೆನ್ಸಿ ಯಾವುದು ಎಂದು ನೋಡಿ ಅದರ ಮೇಲೆ ಕ್ಲಿಕ್ ಮಾಡಿ.

*ಆಗ ನಿಮಗೆ ಯಾವ ಗ್ಯಾಸ್ ಕನೆಕ್ಷನ್ ಕಂಪನಿ ಆಯ್ಕೆ ಮಾಡಿದ್ದಿರೋ ಆ ಕಂಪನಿಯ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ.

*Regular LPG connection or Ujwala 2.0 New connection ಈ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಎರಡನೆಯ ಆಯ್ಕೆ ನ್ಯೂ ಕನೆಕ್ಷನ್ ಎಂಬುದನ್ನು ಆಯ್ದುಕೊಳ್ಳಿ.

*ಈಗ ಡಿಕ್ಲರೇಷನ್ ನೋಟ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಓಕೆ ಎಂದು ಅನುಮೋದಿಸಿ.

*ಈಗ ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆ ಮಾಡಬೇಕು. ಬಳಿಕ ನಿಮ್ಮ ಹತ್ತಿರದ ಗ್ಯಾಸ್ ಕನೆಕ್ಷನ್ ಏಜೆನ್ಸಿ ಗಳ ಲಿಸ್ಟ್ ಬರುತ್ತದೆ. ಅದನ್ನು ಆಯ್ದುಕೊಂಡು ಮುಂದಿನ ಪ್ರಕ್ರಿಯೆಗೆ ಕಂಟಿನ್ಯೂ ಎಂದು ಕ್ಲಿಕ್ ಮಾಡಿ. ಈಗ ನಿಮ್ಮ ಅರ್ಜಿ ಸ್ವೀಕಾರವಾಗಿರುತ್ತದೆ. ಕೊನೆಯದಾಗಿ ಸ್ವೀಕೃತಿ ಪ್ರತಿ ಪಡೆದುಕೊಳ್ಳುವುದನ್ನು ಮರೆಯಬೇಡಿ.

ಸ್ಟೇಟ್ ಬ್ಯಾಂಕ್ ಸೇರಿದಂತೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ 6 ದೊಡ್ಡ ಬ್ಯಾಂಕ್‌ಗಳು!

ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದರೆ, ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಗ್ಯಾಸ್ ಏಜೆನ್ಸಿ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ. ನೀವು ಅರ್ಹರಾಗಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಉಚಿತ ಗ್ಲಾಸ್ ಕನೆಕ್ಷನ್ ಬರುತ್ತದೆ.

Here is an easy way to apply for free gas connection

Follow us On

FaceBook Google News