ಸ್ಟೇಟ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಬದಲಿಸುವ ಸುಲಭ ಮಾರ್ಗ ಇಲ್ಲಿದೆ!
ಇದು ಡಿಜಿಟಲ್ ಇಂಡಿಯಾ, ಈಗ ಬಹುತೇಕ ಜನರು ಹಣಕಾಸಿನ ವರ್ಗಾವಣೆ ಮಾಡುವುದು, ಯಾವುದೇ ವಸ್ತುವನ್ನು ಖರೀದಿ ಮಾಡಿದಾಗ ಹಣ ಪಾವತಿ ಮಾಡುವುದನ್ನು ಯುಪಿಐ ಆಪ್ ಗಳನ್ನು (UPI App) ಬಳಸಿ ಮಾಡುತ್ತಾರೆ.
ತಮ್ಮ ಬ್ಯಾಂಕ್ ಅಕೌಂಟ್ ಗಳನ್ನು ಯುಪಿಐ ಆಪ್ ಗಳಿಗೆ ಲಿಂಕ್ ಮಾಡಿಕೊಂಡಿರುತ್ತಾರೆ. ಬ್ಯಾಂಕ್ ಅಕೌಂಟ್ ನ ಎಲ್ಲಾ ಮಾಹಿತಿ ಪಡೆಯಲು ನಿಮ್ಮ ಫೋನ್ ನಂಬರ್ ಅಕೌಂಟ್ ಗೆ ಲಿಂಕ್ ಆಗಿರುತ್ತದೆ.

ಕೆಲವೊಮ್ಮೆ ಫೋನ್ ನಂಬರ್ ಬದಲಾಯಿಸುತ್ತೇವೆ, ಅಂಥ ಸಮಯದಲ್ಲಿ ಹೊಸ ಫೋನ್ ನಂಬರ್ ಅನ್ನು ನಿಮ್ಮ SBI ಖಾತೆಗೆ ಲಿಂಕ್ ಮಾಡಬೇಕು ಎಂದರೆ, ಬ್ಯಾಂಕ್ ಗೆ ಹೋಗಬೇಕಿಲ್ಲ. ಸುಲಭವಾಗಿ ಮನೆಯಿಂದಲೇ ಮಾಡಬಹುದು..
ನಿಮ್ಮ ಸಿಲಿಂಡರ್‌ನಲ್ಲಿ ಇನ್ನು ಎಷ್ಟು ಗ್ಯಾಸ್ ಉಳಿದಿದೆ ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
SBI ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಅನ್ನು ಈ ರೀತಿ ಬದಲಾಯಿಸಿ:
ನಿಮ್ಮ ಬ್ಯಾಂಕ್ ಅಕೌಂಟ್ ಇರುವುದು State Bank Of India ನಲ್ಲಾಗಿದ್ದು, ಅದಕ್ಕೆ ಲಿಂಕ್ ಆಗಿರುವ ಫೋನ್ ನಂಬರ್ ಅನ್ನು ಬದಲಾಯಿಸಬೇಕು ಎಂದುಕೊಂಡಿದ್ದರೆ, ಈ ಕೆಲಸವನ್ನು ನೀವು ಸುಲಭವಾಗಿ ಮನೆಯಲ್ಲೇ ಕೂತು ಮಾಡಬಹುದು.
ಹೌದು, SBI ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಬದಲಾವಣೆ ಮಾಡಲು ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ (Smartphone) ಅಥವಾ ಲ್ಯಾಪ್ ಟಾಪ್ (Laptop) ಇದ್ದರೆ ಸಾಕು, ಈ ಕೆಲಸ ಸುಲಭವಾಗಿ ಆಗುತ್ತದೆ.
ಈ ಕ್ರಮ ಅನುಸರಿಸಿ:
*ಮೊದಲಿಗೆ SBI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು, ಇದು www.onlinesbi.com ಅಧಿಕೃತ ವೆಬ್ಸೈಟ್ ಆಗಿದೆ.
*ಇಲ್ಲಿ ನಿಮ್ಮ ಅಕೌಂಟ್ ಗೆ ಮೊದಲು ಲಾಗಿನ್ ಮಾಡಿ, ನಂತರ ನಿಮ್ಮ ಪ್ರೊಫೈಲ್ ಓಪನ್ ಮಾಡಿ
*ಇಲ್ಲಿ ಪರ್ಸನಲ್ ಡೀಟೇಲ್ಸ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಬಳಿಕ ಪಾಸ್ವರ್ಡ್ ಹಾಕಿ
*ಇಲ್ಲಿ ನೀವು ಮೇಲ್ ಐಡಿ ಮತ್ತು ಫೋನ್ ನಂಬರ್ ಆಯ್ಕೆಯನ್ನು ನೋಡುತ್ತೀರಿ, ಹಾಗೆಯೇ ಫೋನ್ ನಂಬರ್ ಬದಲಾಯಿಸುವ ಮತ್ತೊಂದು ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ. ಫೋನ್ ನಂಬರ್ ಬದಲಾಯಿಸಿ.
ಈ ಬ್ಯಾಂಕ್ ಅಕೌಂಟ್ ಇದ್ದು ಜೀರೋ ಬ್ಯಾಲೆನ್ಸ್ ಇದ್ರೂ ಪರವಾಗಿಲ್ಲ, ಸಿಗುತ್ತೆ ₹10,000 ರೂಪಾಯಿ!
ATM ನಲ್ಲಿ ಫೋನ್ ನಂಬರ್ ಬದಲಾವಣೆ ಮಾಡಿ:
*SBI ATM ಗೆ ಹೋಗಿ, ನಿಮ್ಮ ಎಟಿಎಂ ಕಾರ್ಡ್ (ATM Card) ಬಳಸಿ ಪಿನ್ ನಂಬರ್ ಹಾಕಿದರೆ, ಅಲ್ಲಿ ಫೋನ್ ನಂಬರ್ ಬದಲಾಯಿಸುವ ಆಯ್ಕೆ ಸಿಗುತ್ತದೆ. ಅದನ್ನು ಸೆಲೆಕ್ಟ್ ಮಾಡಿದಾಗ, ಈಗಾಗಲೇ ನೀವು ಲಿಂಕ್ ಮಾಡಿರುವ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ.
*ಓಟಿಪಿಯನ್ನು ATM ಸ್ಕ್ರೀನ್ ಮೇಲೆ ನಮೂದಿಸಬೇಕು.
*ಈಗ ಹೊಸ ಫೋನ್ ನಂಬರ್ ಆಪ್ಶನ್ ಬರುತ್ತದೆ, ಅಲ್ಲಿ ಹೊಸ ಫೋನ್ ನಂಬರ್ ಹಾಕಿ, ದೃಢೀಕರಣಗೊಳಿಸಿದಾಗ ಹೊಸ ಫೋನ್ ನಂಬರ್ ಲಿಂಕ್ ಆಗುತ್ತದೆ.
ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ? ಪಡೆಯೋದು ಈಗ ಇನ್ನಷ್ಟು ಸುಲಭ, ಜೊತೆಗೆ ಸಾಕಷ್ಟು ಬೆನಿಫಿಟ್!
ಬ್ಯಾಂಕ್ ಇಂದ ನಂಬರ್ ಚೇಂಜ್ ಮಾಡಿ:
ಒಂದು ವೇಳೆ ನಿಮ್ಮ ಬ್ಯಾಂಕ್ ಬ್ರಾಂಚ್ ಗೆ ಹೋಗಿ ಫೋನ್ ನಂಬರ್ ಚೇಂಜ್ ಮಾಡಬೇಕು ಎಂದರೆ, ಆಗ ನೀವು ಬ್ಯಾಂಕ್ ಬ್ರಾಂಚ್ ಗೆ ಹೋಗಿ, ಫೋನ್ ನಂಬರ್ ಚೇಂಜ್ ಗಾಗಿ ಇರುವ ಫಾರ್ಮ್ ಪಡೆದು, ಅದನ್ನು ಫಿಲ್ ಮಾಡಿ, ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಕಾಪಿಯನ್ನು ನೀಡಿ, ಅರ್ಜಿ ಸಲ್ಲಿಸಿದರೆ, ಕೆಲ ಸಮಯದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಹೊಸ ಫೋನ್ ನಂಬರ್ ಲಿಂಕ್ ಆಗುತ್ತದೆ.
Here’s an easy way to change mobile number linked to State Bank account