ಪೋಸ್ಟ್ ಆಫೀಸ್ ನಲ್ಲಿ ನೀವು 10 ಸಾವಿರ ಹಣ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಉತ್ತಮವಾದ ರಿಟರ್ನ್ಸ್ ಕೊಡುವ ಯೋಜನೆಗಳಲ್ಲಿ FD ಯೋಜನೆ ಕೂಡ ಒಂದು. FD ಹೂಡಿಕೆಯ ಮೇಲೆ ಒಳ್ಳೆಯ ಬಡ್ಡಿದರ ಸಿಗುತ್ತದೆ.
Post Office Scheme : ಒಂದು ವೇಳೆ ನೀವು ನಿಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಬೇಕು ಎಂದುಕೊಂಡರೆ, ಅದಕ್ಕಾಗಿ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಹೂಡಿಕೆ ಆಗಿದೆ. ಪೋಸ್ಟ್ ಆಫೀಸ್ ಕೇಂದ್ರ ಸರ್ಕಾರಕ್ಕೆ ಸೇರಿರುವ ಇಲಾಖೆ ಆಗಿರುವುದರಿಂದ ಇಲ್ಲಿ ನೀವು ಹಣದ ಸುರಕ್ಷತೆ ಬಗ್ಗೆ ಯೋಚನೆ ಮಾಡುವ ಅಗತ್ಯವೇ ಇಲ್ಲ.
ಇಲ್ಲಿ ನಿಮ್ಮ ಹಣ ಬಹಳ ಸುರಕ್ಷಿತವಾಗಿ ಇರುತ್ತದೆ. ಹಾಗೆಯೇ ನೀವು ಮಾಡುವ ಹೂಡಿಕೆಗೆ ಉತ್ತಮವಾದ ಬಡ್ಡಿದರ (Interest Rate) ಕೂಡ ಸಿಗುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಉತ್ತಮವಾದ ರಿಟರ್ನ್ಸ್ ಕೊಡುವ ಯೋಜನೆಗಳಲ್ಲಿ FD ಯೋಜನೆ ಕೂಡ ಒಂದು. FD ಹೂಡಿಕೆಯ ಮೇಲೆ ಒಳ್ಳೆಯ ಬಡ್ಡಿದರ ಏನೋ ಸಿಗುತ್ತದೆ.
ಆದರೆ Fixed Deposit ಹೂಡಿಕೆ ಮಾಡುವುದಕ್ಕಾಗಿ ಮೊದಲಿಗೆ ನೀವು ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ ಓಪನ್ ಮಾಡಬೇಕು, ಬೇಕಾಗುವ ದಾಖಲೆಗಳನ್ನೆಲ್ಲಾ ನೀಡಿ ಅಕೌಂಟ್ ಓಪನ್ ಮಾಡಿದರೆ, ಆಗ ನಿಮಗೆ FD ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇಲ್ಲಿ ನೀವು ಅಲ್ಪಾವಧಿಯ ಹೂಡಿಕೆ, ದೀರ್ಘಾವಧಿ ಹೂಡಿಕೆ ಎಲ್ಲವನ್ನು ಕೂಡ ಮಾಡಬಹುದು.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋ ಮಹಿಳೆಯರಿಗೆ ಸಿಗುತ್ತೆ 10 ಸಾವಿರದಿಂದ 20 ಲಕ್ಷದವರೆಗೂ ಲೋನ್!
ಪೋಸ್ಟ್ ಆಫೀಸ್ ನಲ್ಲಿ ನೀವು FD ಮಾಡುವುದರಿಂದ ಎಷ್ಟು ಲಾಭ ಸಿಗುತ್ತದೆ? ಉದಾಹರಣೆಗೆ ನೀವು ಪೋಸ್ಟ್ ಆಫೀಸ್ ನಲ್ಲಿ 10 ಸಾವಿರ ರೂಪಾಯಿಗಳನ್ನು5 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ, ಆಗ ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ? ಮೆಚ್ಯುರಿಟಿ ವೇಳೆಗೆ ನಿಮ್ಮ ಕೈಗೆ ಬರುವ ಹಣವೆಷ್ಟು? FD ಯಲ್ಲಿ ಹೂಡಿಕೆ ಮಾಡುವುದು ಹೇಗೆ? ನಿಮ್ಮ ಹಣವನ್ನು ಸುರಕ್ಷಿತವಾಗಿಟ್ಟು, ಒಳ್ಳೆಯ ರಿಟರ್ನ್ಸ್ ಕೊಡುವಂಥ ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ…
5 ವರ್ಷದ ನಂತರ ಸಿಗುವ ಮೊತ್ತವೆಷ್ಟು?
10 ಸಾವಿರ ರೂಪಾಯಿಗಳನ್ನು ಪೋಸ್ಟ್ ಆಫೀಸ್ ನಲ್ಲಿ ದೀರ್ಘ ಕಾಲದ ಅವಧಿಗೆ, ಅಂದರೆ 5 ವರ್ಷಗಳ ಅವಧಿಗೆ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ ಎಂದರೆ, ಮೆಚ್ಯುರಿಟಿ ನಂತರ ಬಡ್ಡಿ ಸೇರಿಸಿ, ನಿಮ್ಮ ಕೈಗೆ ₹14,499 ರೂಪಾಯಿ ಬರುತ್ತದೆ.
ಈ ಯೋಜನೆಯಲ್ಲಿ ₹4,499 ರೂಪಾಯಿಗಳು ನಿಮಗೆ 5 ವರ್ಷದ ಅವಧಿಗೆ ಬಡ್ಡಿ ರೂಪದಲ್ಲಿ ಸಿಗುತ್ತದೆ. ಇದು ಒಂದು ಉತ್ತಮವಾದ ರಿಟರ್ನ್ಸ್ ಮೊತ್ತ ಆಗಿದೆ.
ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ!
ಎಷ್ಟು ಹಣವನ್ನು ಎಷ್ಟು ಅವಧಿಗೆ ಹೂಡಿಕೆ ಮಾಡುತ್ತೀರಿ ಎನ್ನುವುದು ಇಲ್ಲಿ ಬಹಳ ಮುಖ್ಯ ಆಗುತ್ತದೆ. ಒಂದು ವೇಳೆ ನೀವು ಕೂಡ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು ಎಂದು ಬಯಸಿದರೆ, ನಿಮಗೆ ಹತ್ತಿರ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳ ಜೊತೆಗೆ ಮಾತನಾಡಿ, ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ನಿಮಗೆ ಇಷ್ಟ ಆಗುವ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಬಹುದು. ಅವುಗಳಿಗೆ ಒಳ್ಳೆಯ ರಿಟರ್ನ್ಸ್ ಕೂಡ ಪಡೆಯಬಹುದು.
ಚಿನ್ನ ಖರೀದಿಗೂ ಮುನ್ನ ಬಿಲ್ ನಲ್ಲಿ ಈ ಅಂಶ ನಮೂದಿಸಲಾಗಿದೆಯಾ ತಪ್ಪದೆ ಚೆಕ್ ಮಾಡಿ! ಹೊಸ ನಿಯಮ
How much interest can you get on 10,000 fixed Deposit at the post office