ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಬ್ಯಾಂಕ್ ಲೋನ್ ಪಡೆಯೋದು ಹೇಗೆ ಗೊತ್ತಾ; ಇಲ್ಲಿದೆ ಟಿಪ್ಸ್
credit score : ನಾವು ಹಣ ಸಂಪಾದನೆ ಮಾಡ್ತೀವಿ ನಿಜ ಆದರೂ ಕೂಡ ಎಷ್ಟೋ ಸಂದರ್ಭದಲ್ಲಿ ಬಹಳ ಅಗತ್ಯ ಇರುವಾಗ ಹಣದ ಸಮಸ್ಯೆ ಎದುರಾಗುತ್ತೆ. ಇಂತಹ ಸಂದರ್ಭದಲ್ಲಿ ಯಾರ ಬಳಿಯಾದರೂ ಕೈ ಚಾಚಿದರೆ ಹಣ ಸಿಕ್ಕೇ ಬಿಡುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದು ನಾವು ನಮ್ಮ ಅವಶ್ಯಕತೆಗಳನ್ನ ಪೂರೈಸಿ ಕೊಳ್ಳುತ್ತೇವೆ.
ಬ್ಯಾಂಕಿನಲ್ಲಿ ಯಾವುದೇ ಉದ್ಯಮ ಅಥವಾ ಉದ್ಯೋಗ ಮಾಡುತ್ತಿರುವವರಿಗೆ ಸುಲಭವಾಗಿ ಸಾಲ ಸಿಗುತ್ತದೆ ಅದಕ್ಕಾಗಿ ಮಾಡಬೇಕಾಗಿರುವ ಪ್ರಮುಖ ಕೆಲಸ ಅಂದ್ರೆ ನಮ್ಮ ಬ್ಯಾಂಕ್ ವ್ಯವಹಾರ ಸರಿಯಾಗಿ ಇರಬೇಕು ಅಂದ್ರೆ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿರಬೇಕು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ 20,500 ರೂಪಾಯಿ! ಭರ್ಜರಿ ಕೊಡುಗೆ
ಹೌದು, ಬ್ಯಾಂಕ್ ನಲ್ಲಿ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಸುಲಭವಾಗಿ ಸಾಲ ಸಿಗುತ್ತೆ. 300 ರಿಂದ 900 ಪಾಯಿಂಟ್ ಗಳನ್ನು ನಾವು ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸುತ್ತೇವೆ. ಇದರಲ್ಲಿ 750ಕ್ಕಿಂತ ಹೆಚ್ಚಿನ ಸ್ಕೋರ್ ಇದ್ರೆ ಅದನ್ನು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ
ಹಾಗಾಗಿ 750ಕ್ಕಿಂತ ಜಾಸ್ತಿ 900 ವರೆಗೆ ಇರುವ ಕ್ರೆಡಿಟ್ ಸ್ಕೋರ್, ಬಹಳ ಬೇಗ ಮತ್ತು ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಲು ಸಹಾಯವಾಗುತ್ತದೆ. ಅದೇ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೆ ಸಾಲ (Loan) ಸೌಲಭ್ಯ ಸುಲಭವಾಗಿ ಸಿಗುವುದಿಲ್ಲ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದಿಂದ 1 ಲಕ್ಷದವರೆಗೆ ಸ್ಕಾಲರ್ಶಿಪ್! ಅಪ್ಲೈ ಮಾಡಿ
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ ಪಡೆದುಕೊಳ್ಳುವುದು ಹೇಗೆ?
* ಹೆಚ್ಚಿನ ಡೌನ್ ಪೇಮೆಂಟ್ _ ಹೌದು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೆ ನೀವು ಸಾಲ ಪಡೆಯುವಾಗ ಡೌನ್ ಪೇಮೆಂಟ್ ಹೆಚ್ಚಾಗಿ ಮಾಡಬೇಕು ಅಂದ್ರೆ ವಾಹನದ ಮೇಲೆ ಸಾಲ ಪಡೆಯುವುದಿದ್ದರೆ ಈ ನಿಯಮ ಅನ್ವಯವಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಸಾಲದ ಹೊರೆ ಕೂಡ ಕಡಿಮೆಯಾಗುತ್ತದೆ ಜೊತೆಗೆ ಬ್ಯಾಂಕ್ ಬೇಗ ಸಾಲವನ್ನು ಮಂಜೂರು ಮಾಡುತ್ತದೆ.
* ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಮಾಹಿತಿ ಪಡೆಯಿರಿ _ ಬೇರೆ ಬೇರೆ ರೀತಿಯ ಸಾಲವನ್ನು ಬೇರೆ ಬೇರೆ ಬ್ಯಾಂಕುಗಳು ನೀಡುತ್ತವೆ ಹಾಗೂ ನಿಯಮಗಳಲ್ಲಿಯೂ ಕೂಡ ಸಾಕಷ್ಟು ವ್ಯತ್ಯಾಸ ಇರುತ್ತದೆ.
ಜಸ್ಟ್ 250 ಹೂಡಿಕೆ ಮಾಡಿದ್ರೆ ಸಾಕು ಪ್ರತಿ ತಿಂಗಳು ಸಿಗುತ್ತೆ 5 ಸಾವಿರ ರೂಪಾಯಿ ಪಿಂಚಣಿ
ಕೆಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಗೆ ಮೊದಲ ಆದ್ಯತೆ ನೀಡುತ್ತವೆ. ಆದರೆ ಇನ್ನೂ ಕೆಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಗೆ ಬದಲಾಗಿ ಕೆಲವು ಆಪ್ಷನ್ ಗಳನ್ನು ಕೊಡುತ್ತವೆ. ಇಂತಹ ಸಂದರ್ಭದಲ್ಲಿ ನೀವು ಸಾಲ ಮಾಡುವುದಕ್ಕೂ ಮೊದಲು ನಾಲ್ಕಾರು ಬ್ಯಾಂಕುಗಳಲ್ಲಿ ವಿಚಾರಿಸಿ ನಂತರ ಎಲ್ಲಿ ಸೂಕ್ತ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
* ಜಂಟಿ ಸಾಲ (joint loan) _ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ನೀವು ಕುಟುಂಬದ ಸದಸ್ಯರೊಂದಿಗೆ ಅಥವಾ ಇತರ ಪಾರ್ಟ್ನರ್ ಜೊತೆಗೆ ಸಾಲ ತೆಗೆದುಕೊಳ್ಳಬಹುದು ಈ ರೀತಿ ಜಂಟಿಯಾಗಿ ಸಾಲ ತೆಗೆದುಕೊಂಡಾಗ ಅವರ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನಿಮಗೆ ಸುಲಭ ಸಾಲ ಸಿಗುತ್ತದೆ.
* ಸರಿಯಾದ ದಾಖಲೆ ನೀಡುವುದು – ನೀವು ಉತ್ತಮ ಕೆಲಸದಲ್ಲಿ ಇದ್ದು ನಿಮ್ಮ ಬಳಿ ಆಸ್ತಿ ಕೂಡ ಇದ್ರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಬಹಳ ಮುಖ್ಯ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಸ್ಯಾಲರಿ ಸ್ಲಿಪ್ ಮೊದಲಾದ ದಾಖಲೆಗಳು ಸಾಲ ಪಡೆದುಕೊಳ್ಳುವುದಕ್ಕೆ ಹೆಚ್ಚು ಸಹಾಯಕವಾಗುತ್ತವೆ.
ಈ ರೀತಿ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗಲೂ ಕೂಡ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕಡ್ಡಾಯ ಸೂಚನೆ!
how to get a bank loan even if the credit score is low