ಜಸ್ಟ್ 250 ಹೂಡಿಕೆ ಮಾಡಿದ್ರೆ ಸಾಕು ಪ್ರತಿ ತಿಂಗಳು ಸಿಗುತ್ತೆ 5 ಸಾವಿರ ರೂಪಾಯಿ ಪಿಂಚಣಿ
ಹಣವನ್ನ ದುಡಿದ ನಂತರ ಒಂದಷ್ಟು ಹೂಡಿಕೆ ಮಾಡಿದರೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಹಣಕಾಸು ತಜ್ಞರು (financial experts) ಹೇಳುತ್ತಾರೆ. ನೀವು ಎಷ್ಟೇ ಹಣ ದುಡಿದರು ಸರಿ ಅದರಲ್ಲಿ ಇರುವ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು
ಇದೀಗ ಸರ್ಕಾರ ಬಡವರಿಗು ಕೂಡ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದು, ಕಡಿಮೆ ಹಣ ದುಡಿಯುವವರು ಕೂಡ ತಮ್ಮ ವೃದ್ಧಾಪ್ಯದ ಭವಿಷ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಈ ಯೋಜನೆಗಳು ಸಹಾಯ ಮಾಡುತ್ತವೆ ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ (Pension) ಕೂಡ ಒಂದು.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕಡ್ಡಾಯ ಸೂಚನೆ!
ಏನಿದು ಅಟಲ್ ಪಿಂಚಣಿ ಯೋಜನೆ! (Atal pension Yojana)
ಭಾರತೀಯ ನಾಗರಿಕರು ವೃದ್ಧಾಪ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಅಟಲ್ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ಈ ಹಣ ನಿಮ್ಮ ಪ್ರಯೋಜನಕ್ಕೆ ಬರುತ್ತದೆ. ಹಾಗಾದ್ರೆ ಯಾವ ರೀತಿ ಉಳಿತಾಯ ಮಾಡಬೇಕು? ಪ್ರತಿ ವರ್ಷ ಎಷ್ಟು ಹಣ ಪಡೆಯಲು ಎಷ್ಟು ಹಣ ಹೂಡಿಕೆ ಮಾಡಬೇಕು? ಎನ್ನುವ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ವಿವರ.
ಒಬ್ಬ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ ಎನ್ನುವುದರ ಆಧಾರದ ಮೇಲೆ ತಿಂಗಳ ಪಿಂಚಣಿ ನಿರ್ಧಾರವಾಗುತ್ತದೆ. ಆತನ ಪತ್ನಿಗೆ ಪಿಂಚಣಿ ಹಣ ನೀಡಲಾಗುವುದು. ಭಾರತೀಯ ಪಿಂಚಣಿ ನಿಧಿಗಳ ನಿಯಂತ್ರಣ ಪ್ರಾಧಿಕಾರ ಈ ಯೋಜನೆಯನ್ನು ನಿರ್ವಹಿಸುತ್ತಿದ್ದು 5000ಗಳನ್ನು ಪಿಂಚಣಿಯಾಗಿ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ನೋಡೋಣ.
ಎಸ್‌ಬಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಇದ್ದೋರಿಗೆ ಭರ್ಜರಿ ಕೊಡುಗೆ! ಸಿಹಿ ಸುದ್ದಿ
210 ರೂಪಾಯಿ ಠೇವಣಿ ಇಟ್ರೆ ಸಾಕು!
ಹೌದು, ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಕೇವಲ 210 ರೂಪಾಯಿಗಳನ್ನು ಪ್ರತಿ ತಿಂಗಳು ಠೇವಣಿ ಇಡುತ್ತಾ ಬಂದರೆ 60 ವರ್ಷಗಳ ಬಳಿಕ 5000 ಪಿಂಚಣಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ. ಅಂದ್ರೆ ಪ್ರತಿದಿನ ಕೇವಲ ರೂ.7 ಗಳನ್ನು ಅಷ್ಟೇ ನೀವು ಉಳಿತಾಯ ಮಾಡಿದರೆ ಸಾಕು ಪ್ರತಿ ತಿಂಗಳು ಪಿಂಚಣಿ ಬರೋದು ಖಾತ್ರಿ ಆಗುತ್ತೆ.
18 ವರ್ಷದಲ್ಲಿ ನೀವು ಅಟಲ್ ಪಿಂಚಣಿ ಯೋಜನೆಗೆ ಹೂಡಿಕೆ ಮಾಡಲು ಆರಂಭಿಸಿದರೆ, ಪ್ರತಿ ತಿಂಗಳು 210ಗಳನ್ನು ಪಾವತಿ ಮಾಡಬೇಕು ಅಂದರೆ ಮೂರು ತಿಂಗಳಿಗೆ 626, ಆರು ತಿಂಗಳಿಗೆ 1,239 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು. ಇನ್ನು ನೀವು ಪ್ರತಿ ತಿಂಗಳು ಕೇವಲ ಸಾವಿರ ರೂಪಾಯಿ ಪಿಂಚಣಿ ಬಂದರೆ ಸಾಕು ಅಂದುಕೊಂಡರೆ 18ನೇ ವಯಸ್ಸಿನಲ್ಲಿ ಹೂಡಿಕೆ ಸ್ಟಾರ್ಟ್ ಮಾಡಿದ್ರೆ, ಪ್ರತಿ ತಿಂಗಳು ಕೇವಲ 42 ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಡಿ.
ಉಚಿತ ಮನೆ ಯೋಜನೆ! ಅವಾಸ್ ಯೋಜನೆಯಲ್ಲಿ ಸಿಗುತ್ತೆ ಇನ್ನೂ ಹೆಚ್ಚಿನ ಹಣ; ಅರ್ಜಿ ಸಲ್ಲಿಸಿ
ಯಾರೆಲ್ಲಾ ಯೋಜನೆಯ ಪ್ರಯೋಜನ ಪಡೆಯಬಹುದು!
* ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಭಾರತೀಯ ನಾಗರಿಕರಾಗಿರಬೇಕು
* 18 ರಿಂದ 40 ವರ್ಷದ ಒಳಗಿನವರಾಗಿರಬೇಕು
* ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು
* ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ ಖಾತೆಯ ವಿವರ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಡಬೇಕು
ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಫಿಕ್ಸೆಡ್ ಇಟ್ಟರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸುವುದು ಹೇಗೆ?
ಅಟಲ್ ಪಿಂಚಣಿ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಎ ಪಿ ವೈ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಿ ಬೇಕಾಗಿರುವ ದಾಖಲೆ ಮತ್ತು ಮಾಹಿತಿಯನ್ನು ನೀಡಿದರೆ ನಿಮ್ಮ ಎಪಿವೈ ಖಾತೆ ಆರಂಭವಾಗುತ್ತದೆ. ನೀವು ಬ್ಯಾಂಕ್ ಖಾತೆಯಿಂದ ನೇರವಾಗಿ ಮಾಡಬಹುದು.
ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಅಟಲ್ ಪಿಂಚಣಿ ಯೋಜನೆಯ ಫಾರ್ಮ್ ಅನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಡೆದು ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.
ನಿವೃತ್ತಿಯ ನಂತರ ಬದುಕು ಕಟ್ಟಿಕೊಳ್ಳಲು ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಟಲ್ ಪಿಂಚಣಿ ಯೋಜನೆ ಅತ್ಯುತ್ತಮ ಆಯ್ಕೆ ಆಗಿದೆ. ಹಾಗಾಗಿ ಸಣ್ಣ ವಯಸ್ಸಿನಿಂದಲೇ ಈ ಯೋಜನೆಗೆ ಹೂಡಿಕೆ ಮಾಡಲು ಆರಂಭಿಸಿದೆ 60 ವರ್ಷಗಳ ನಂತರ ಪಿಂಚಣಿ ಹಣ ನಿಮ್ಮ ಖಾತೆಗೆ (Bank Account) ತಲುಪುತ್ತದೆ.
If you invest just 250, you will get a pension of 5 thousand rupees every month
Our Whatsapp Channel is Live Now 👇