Story Highlights
Fixed Deposit : ಗಳಿಸಿದ ಹಣವನ್ನು ಮ್ಯೂಚುವಲ್ ಫಂಡ್ (Mutual Fund), ಬ್ಯಾಂಕ್ ಎಫ್ ಡಿ (Bank FD), ಅಂಚೆ ಕಚೇರಿ, ಸ್ಟಾಕ್ ಮಾರ್ಕೆಟ್ ಹೀಗೆ ಬೇರೆ ಬೇರೆ ಕಡೆ ಹೂಡಿಕೆ ಮಾಡಬಹುದು
Fixed Deposit : ಈಗ ದುಡಿಯುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ ಬಹುತೇಕ ಎಲ್ಲರೂ ಹಣಕಾಸಿನ ವ್ಯವಹಾರ ನಡೆಸುತ್ತಾರೆ. ನೀವು ಹಣ ಗಳಿಸಿದರೆ ಮಾತ್ರ ಸಾಲದು, ಅದನ್ನ ಹೇಗೆ ಉಳಿತಾಯ (savings) ಮಾಡಬೇಕು ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕು. ಈಗ ದುಡಿದ ಹಣವನ್ನು ಹೀಗೆ ಖರ್ಚು ಮಾಡುತ್ತಾ ಹೋದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಗಳಿಸಿದ ಹಣವನ್ನು ಮ್ಯೂಚುವಲ್ ಫಂಡ್ (Mutual Fund), ಬ್ಯಾಂಕ್ ಎಫ್ ಡಿ (Bank FD), ಅಂಚೆ ಕಚೇರಿ, ಸ್ಟಾಕ್ ಮಾರ್ಕೆಟ್ ಹೀಗೆ ಬೇರೆ ಬೇರೆ ಕಡೆ ಹೂಡಿಕೆ ಮಾಡಬಹುದು, ಮ್ಯೂಚುವಲ್ ಫಂಡ್ ಮತ್ತು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಎಲ್ಲ ಸಮಯದಲ್ಲಿ ಆದಾಯ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಅಲ್ಲಿ ಮಾರುಕಟ್ಟೆಯ ಅಪಾಯ ಇದ್ದಿದ್ದೇ. ನಿಮಗೆ ಈ ಸಮಸ್ಯೆ ಬೇಡ ಎಂದಾದರೆ ಬ್ಯಾಂಕುಗಳಲ್ಲಿ ಅಥವಾ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಬೀದಿ ಬದಿ ವ್ಯಾಪಾರ ಮಾಡೋರಿಗೆ ಸರ್ಕಾರವೇ ನೀಡುತ್ತೆ 50,000 ರೂಪಾಯಿ! ಬಂಪರ್ ಕೊಡುಗೆ
ಎಫ್ ಡಿ ಹೂಡಿಕೆಗೆ ಎಸ್ ಬಿ ಐ ಕೊಡುತ್ತೆ ಉತ್ತಮ ಬಡ್ಡಿ ದರ! (SBI FD)
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಎಫ್‌ಡಿ ಮೇಲೆ ಉತ್ತಮ ಬಡ್ಡಿ ದರವನ್ನು ನಿಗದಿಪಡಿಸಿದೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಕೆಲವು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಏಪ್ರಿಲ್ ಒಂದು 2024 ಹೊಸ ಹಣಕಾಸು ವರ್ಷ ಆರಂಭವಾಗಿದ್ದು ಎಸ್‌ಬಿಐ ತನ್ನ ಬಡ್ಡಿ ದರವನ್ನು ಕೂಡ ಹೆಚ್ಚಿಸಿದೆ.
ಎಸ್ ಬಿ ಐ 5ಲಕ್ಷ ಠೇವಣಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ಈ ವರ್ಷ 6.50% ನಷ್ಟು ಎಫ್ ಡಿ ಬಡ್ಡಿ (Fixed Deposit) ದರವನ್ನು ನಿಗದಿಪಡಿಸಿದೆ ಅಂದರೆ ಐದು ವರ್ಷಗಳ ಕಾಲ ನೀವು ಹೂಡಿಕೆ ಮಾಡುವ 5 ಲಕ್ಷಕ್ಕೆ 6,90,209ಗಳನ್ನು ರಿಟರ್ನ್ ಪಡೆಯುತ್ತೀರಿ. ಅಂದರೆ ನಿಮಗೆ ಕೊಟ್ಟು 1,90, 209 ರೂಪಾಯಿಗಳು ಹೂಡಿಕೆಯ ಮೇಲೆ ಹೆಚ್ಚುವರಿ ರಿಟರ್ನ್ ಆಗಿ ಸಿಗುತ್ತದೆ.
ರೈತರಿಗೆ ಸಿಗಲಿದೆ ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ
ಹಿರಿಯ ನಾಗರಿಕರಿಗೆ ಸಿಗುತ್ತೆ ಹೆಚ್ಚಿನ ಬಡ್ಡಿ!
ಈ ಮೇಲೆ ತಿಳಿಸಿದ ಲೆಕ್ಕಾಚಾರ ಸಾಮಾನ್ಯ ಗ್ರಾಹಕರಿಗೆ ಆಗಿದ್ದರೆ ಹಿರಿಯ ನಾಗರಿಕರ ಠೇವಣಿಗೆ 7.50% ನಷ್ಟು ಬಡ್ಡಿ ನಿಗದಿಪಡಿಸಲಾಗಿದೆ. ಅಂದರೆ 5 ಲಕ್ಷಗಳನ್ನು ಐದು ವರ್ಷಗಳ ಅವಧಿಗೆ ಎಫ್ ಡಿ ಠೇವಣಿ ಮಾಡಿದರೆ 7,24,974 ರೂಪಾಯಿಗಳನ್ನು ರಿಟರ್ನ್ ಪಡೆಯಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಈ ರೀತಿ ಚೆಕ್ ಮಾಡಿಕೊಳ್ಳಿ
ಅಲ್ಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರ ಠೇವಣಿಗೆ ಉತ್ತಮ ಬಡ್ಡಿ ದರ ನೀಡುತ್ತಿದ್ದು 2,24,974 ರೂಪಾಯಿಗಳನ್ನು ಬಡ್ಡಿ ಆಗಿಯೇ ಪಡೆಯಬಹುದು. ಹಾಗಾಗಿ ನೀವು ಠೇವಣಿ ಇಡಲು ಉತ್ತಮ ಬ್ಯಾಂಕ್ ಯಾವುದು ಎಂದು ಯೋಚಿಸುತ್ತಿದ್ದರೆ ಎಸ್ ಬಿ ಐ ಉತ್ತಮ ಆಯ್ಕೆಯಾಗಿದೆ ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಎಸ್ ಬಿ ಐ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ.
Do you know how much profit you get if you keep 5 lakh fixed in State Bank account