Business News

ಉಚಿತ ಮನೆ ಯೋಜನೆ! ಅವಾಸ್ ಯೋಜನೆಯಲ್ಲಿ ಸಿಗುತ್ತೆ ಇನ್ನೂ ಹೆಚ್ಚಿನ ಹಣ; ಅರ್ಜಿ ಸಲ್ಲಿಸಿ

ನೀವು ಬಾಡಿಗೆ ಮನೆಯಲ್ಲಿ ಅಥವಾ ಅನಧಿಕೃತ ಸ್ಥಳದಲ್ಲಿ ವಾಸ ಮಾಡುತ್ತಿದ್ದೀರಾ ? ನಿಮಗೂ ನಿಮ್ಮದೇ ಆದ ಮನೆ ಕಟ್ಟಿಕೊಳ್ಳುವ ಕನಸು ಇದೆಯಾ? ಇದು ನನಸು ಮಾಡಿಕೊಳ್ಳುವ ಸಮಯ ಈಗ ಹತ್ತಿರ ಬಂದಿದೆ.

ಹಣ ಇಲ್ಲದವರು ಕೂಡ ಸ್ವಂತ ಮನೆ ಕಾಣಬೇಕು ಎನ್ನುವ ಕನಸು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರಿಗೂ ಇದೆ, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಯನ್ನು ಜಾರಿಗೆ ತಂದಿದ್ದಾರೆ.

PM Awas Yojana

ಈಗಾಗಲೇ ಲಕ್ಷಾಂತರ ಕುಟುಂಬಗಳು ಸ್ವಂತ ಸೂರು ಪಡೆದುಕೊಳ್ಳಲು ಸಾಧ್ಯವಾಗಿದೆ. 2025ರ ಹೊತ್ತಿಗೆ ಒಂದು ಕೋಟಿ ಸ್ವಂತ ಮನೆ (Home Loan) ನಿರ್ಮಾಣ ಮಾಡುವ ಕನಸು ಈ ಯೋಜನೆಯದು.

ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಫಿಕ್ಸೆಡ್ ಇಟ್ಟರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

2015 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಲ್ಲಿ ಬಡ ಕುಟುಂಬದವರು ಮಾತ್ರವಲ್ಲದೆ ಮಧ್ಯಮ ವರ್ಗದ ಕುಟುಂಬದವರು ಕೂಡ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಈ ಯೋಜನೆ ಇನ್ನೊಂದು ವಿಶೇಷತೆ ಅಂದ್ರೆ ನೀವು ಎಷ್ಟೇ ಗೃಹ ಸಾಲ (Home loan) ತೆಗೆದುಕೊಂಡಿರುವ ಸರ್ಕಾರ ನಿಗದಿತ ಪ್ರಮಾಣದ ಸಬ್ಸಿಡಿ (subsidy ) ನೀಡುತ್ತದೆ. ಹಾಗಾಗಿ ನಿಮ್ಮ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ಪಡೆದು ಸ್ವಲ್ಪ ಮಟ್ಟಿಗೆ ಹಣಕಾಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.

ಯಾರು ಅರ್ಹರು?

* 18 ವರ್ಷ ಮೇಲ್ಪಟ್ಟವರಾಗಿರಬೇಕು
* ಭಾರತೀಯ ನಾಗರಿಕರಾಗಿರಬೇಕು
* ಈಗಾಗಲೇ ಶಾಶ್ವತ ಮನೆ ಹೊಂದಿದ್ದರೆ ಆವಾಸ್ ಯೋಜನೆಯ ಪ್ರಯೋಜನ ಸಿಗುವುದಿಲ್ಲ
* ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ
* ಯಾವುದೇ ಸರ್ಕಾರಿ ನೌಕರಿಯಲ್ಲಿ ಇಲ್ಲದ ಬಡತನ ರೇಖೆಗಿಂತ ಕೆಳಗಿನವರು ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ನಿಮ್ಮ ಆದಾಯದ ಮಿತಿಯನ್ನು ನೋಡಿ ಅದರ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು.
* ಗೃಹ ಸಾಲವನ್ನು (Home Loan) ತೆಗೆದುಕೊಳ್ಳುವಾಗ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಮೆನ್ಷನ್ ಮಾಡಿದರೆ ನೇರವಾಗಿ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬರುತ್ತದೆ.

ಬೀದಿ ಬದಿ ವ್ಯಾಪಾರ ಮಾಡೋರಿಗೆ ಸರ್ಕಾರವೇ ನೀಡುತ್ತೆ 50,000 ರೂಪಾಯಿ! ಬಂಪರ್ ಕೊಡುಗೆ

Free Housing Schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್
ಗುರುತಿನ ಚೀಟಿ
ರೇಷನ್ ಕಾರ್ಡ್
ಅಡ್ರೆಸ್ ಪ್ರೂಫ್
ವೋಟರ್ ಐಡಿ
ಆದಾಯ ಪ್ರಮಾಣ ಪತ್ರ
ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಬ್ಯಾಂಕ ಖಾತೆಯ ವಿವರ

ರೈತರಿಗೆ ಸಿಗಲಿದೆ ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ

ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎನ್ನುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಆದಾಯ ಎಷ್ಟು ಮತ್ತು ಎಷ್ಟು ಸಬ್ಸಿಡಿ ಪಡೆದುಕೊಳ್ಳಲು ಇಚ್ಛಿಸುತ್ತಿರಿ ಎನ್ನುವ ಆಯ್ಕೆ ಮಾಡಿ ನಂತರ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ. ಬಳಿಕ ಅಗತ್ಯ ಇರುವ ದಾಖಲೆಗಳನ್ನು ನೀಡಬೇಕು. ನೀವು ಕೊಡುವುದಾದರೆ ಸರಿಯಾಗಿ ಇದ್ದರೆ ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮಾ ಆಗುತ್ತದೆ.

ಅದೇ ರೀತಿ ಆಫ್ಲೈನ್ ಅಲ್ಲಿ ನೀವು ಯಾವುದೇ ಬ್ಯಾಂಕ್ಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ಅರ್ಜಿ ಸಲ್ಲಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣಕಾಸಿನ ನೆರವು ಪಡೆದುಕೊಳ್ಳಲು ಸಾಧ್ಯವಿದೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಈ ರೀತಿ ಚೆಕ್ ಮಾಡಿಕೊಳ್ಳಿ

Free housing Scheme, in aawas scheme You will get even more money

Our Whatsapp Channel is Live Now 👇

Whatsapp Channel

Related Stories