ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದಿಂದ 1 ಲಕ್ಷದವರೆಗೆ ಸ್ಕಾಲರ್ಶಿಪ್! ಅಪ್ಲೈ ಮಾಡಿ

ವಿದ್ಯಾರ್ಥಿಗಳು ಶಿಕ್ಷಣದಿಂದ (Education) ವಂಚಿತರಾಗದೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆದುಕೊಳ್ಳಲು ಸಹಾಯ ಮಾಡಲು ಇಂತಹ ಸ್ಕಾಲರ್ಶಿಪ್ ಯೋಜನೆಗಳು ಸಹಕಾರಿಯಾಗಿದೆ

Bengaluru, Karnataka, India
Edited By: Satish Raj Goravigere

ಬೇರೆ ಬೇರೆ ಸಂಸ್ಥೆಗಳು ತಮ್ಮ ಸಿ ಎಸ್ ಆರ್ ಚಟುವಟಿಕೆಯ (CSR activities) ಅಂಗವಾಗಿ ಸ್ಕಾಲರ್ಶಿಪ್ (scholarships) ವಿತರಣೆ ಮಾಡುತ್ತವೆ. ಇದರಿಂದಾಗಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಕಾರಿಯಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಣದಿಂದ (Education) ವಂಚಿತರಾಗದೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆದುಕೊಳ್ಳಲು ಸಹಾಯ ಮಾಡಲು ಇಂತಹ ಸ್ಕಾಲರ್ಶಿಪ್ ಯೋಜನೆಗಳು ಸಹಕಾರಿಯಾಗಿದೆ ಎನ್ನಬಹುದು. ನಾವೀಗ ಹೇಳಲು ಹೊರಟಿರುವುದು ಕೋಟಕ್ ಸ್ಕಾಲರ್ಶಿಪ್ ಬಗ್ಗೆ.

15000 Education scholarship, free hostel and more benefits for such students

ಜಸ್ಟ್ 250 ಹೂಡಿಕೆ ಮಾಡಿದ್ರೆ ಸಾಕು ಪ್ರತಿ ತಿಂಗಳು ಸಿಗುತ್ತೆ 5 ಸಾವಿರ ರೂಪಾಯಿ ಪಿಂಚಣಿ

ಕೋಟಕ್ ಸ್ಕಾಲರ್ಶಿಪ್ 2024! (Kotak scholarship 2024)

ಹೌದು, ಕೋಟಕ್ ಬ್ಯಾಂಕ್ (Kotak Bank) ಕೂಡ ಸ್ಕಾಲರ್ಶಿಪ್ ಅನ್ನು ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ, 9 ರಿಂದ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪದವಿ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು 50,000 ಗಳಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು.

ಸಿಗುವ ಮೊತ್ತ ಎಷ್ಟು?

9ನೇ ತರಗತಿಯಿಂದ 12ನೇ ತರಗತಿಯ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 50,000 ಸಹಾಯ ಸಹಾಯಧನ.
ಸಾಮಾನ್ಯ ಮತ್ತು ವೃತ್ತಿಪರ ಪದವಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಸಹಾಯಧನ.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕಡ್ಡಾಯ ಸೂಚನೆ!

ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು ಇಂತಿವೆ!

Education Scholarship* ಆಧಾರ್ ಕಾರ್ಡ್
* ಕಾಲೇಜ್ ಅಥವಾ ಸ್ಕೂಲ್ ಪ್ರವೇಶ ಪುರಾವೆ
* 10 ಮತ್ತು 12ನೇ ತರಗತಿಯ ಮಾರ್ಕ್ಸ್ ಕಾರ್ಡ್
* 9ನೇ ತರಗತಿಯವರಾಗಿದ್ದರೆ ಎಂಟನೇ ತರಗತಿಯ ಮಾರ್ಕ್ಸ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ರೇಷನ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಬ್ಯಾಂಕ್ ಖಾತೆಯ ವಿವರ
* ವಿಕಲಚೇತನ ಸರ್ಟಿಫಿಕೇಟ್

ಎಸ್‌ಬಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಇದ್ದೋರಿಗೆ ಭರ್ಜರಿ ಕೊಡುಗೆ! ಸಿಹಿ ಸುದ್ದಿ

ಯಾರಿಗೆ ಸಿಗುತ್ತೆ ಸ್ಕಾಲರ್ಶಿಪ್?

* ಸ್ಕಾಲರ್ಶಿಪ್ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ

* 9 ರಿಂದ 12ನೇ ತರಗತಿ ಹಾಗೂ ವೃತ್ತಿಪರ ಪದವಿ ಕೋರ್ಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು

* ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55 ಪರ್ಸೆಂಟ್ ಅಂಕ ಪಡೆದಿರಬೇಕು

* ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3,20,000ಗಳಿಗಿಂತ ಕಡಿಮೆ ಇರಬೇಕು

* ಕೋಟಕ್ ಸೆಕ್ಯೂರಿಟಿಸ್ ಅಥವಾ ಅಂಗ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವವರ ಮಕ್ಕಳಿಗೆ ಈ ಸ್ಕಾಲರ್ಶಿಪ್ ಅಪ್ಲೈ ಆಗುವುದಿಲ್ಲ.

ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಬಂತು ಹೊಸ ನಿಯಮ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2024. ಕೋಟಕ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.buddy4study.com/register?url=%2Fpage%2Fkotak-suraksha-scholarship-program&&cuid=page/kotak-suraksha-scholarship-program

Such students will get a scholarship of 50 thousand to 1 lakh