ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಬಂತು ಹೊಸ ನಿಯಮ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಹಣಕಾಸಿಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ಕಟ್ಟುನಿಟ್ಟು ಗೊಳಿಸಲಾಗಿದೆ. ಅದರಲ್ಲೂ ಕಪ್ಪು ಹಣ, ಲಂಚದ ಹಣ ಮೊದಲಾದವು ಇದೇ ಸಂದರ್ಭದಲ್ಲಿ ಹೊರಬರುವ ಸಾಧ್ಯತೆ ಇರುತ್ತದೆ.
ಹಾಗಾಗಿ ಯಾರ ಬಳಿ ಈ ಹಿಂದೆ ಎಷ್ಟು ಹಣ ಇತ್ತು ಈಗ ಎಷ್ಟು ಹಣ ಇದೆ ಎಂಬುದನ್ನು ಆದಾಯ ಇಲಾಖೆ ತನಿಖೆ (Income Tax department) ನಡೆಸುತ್ತಿದೆ. ಹಾಗಾಗಿ ನೀವು ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬೇಕು ಎಂಬುದನ್ನು ಕೂಡ ತಿಳಿದುಕೊಂಡರೆ ಸರ್ಕಾರಕ್ಕೆ ಹೆಚ್ಚುವರಿ ಟ್ಯಾಕ್ಸ್ ಕಟ್ಟುವ ಅಗತ್ಯ ಇರುವುದಿಲ್ಲ..
ಉಚಿತ ಮನೆ ಯೋಜನೆ! ಅವಾಸ್ ಯೋಜನೆಯಲ್ಲಿ ಸಿಗುತ್ತೆ ಇನ್ನೂ ಹೆಚ್ಚಿನ ಹಣ; ಅರ್ಜಿ ಸಲ್ಲಿಸಿ
ಆದಾಯ ತೆರಿಗೆ ಹೊಸ ನಿಯಮ! (Income Tax new rules)
ನೀವು ಮನೆಯಲ್ಲಿ ಎಷ್ಟು ನಗದು (Cash Limit) ಹಣವನ್ನು ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಆದಾಯ ತೆರಿಗೆಯ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
* ಆದಾಯ ತೆರಿಗೆ ನಿಯಮದ ಅನ್ವಯ ನೀವು ಮನೆಯಲ್ಲಿ ಎಷ್ಟು ಬೇಕಾದರೂ ನಗದು ಹಣ ಇಟ್ಟುಕೊಳ್ಳಬಹುದು ಆದರೆ ಆದಾಯ ತೆರಿಗೆ ಕೇಳಿದಾಗ ಅದಕ್ಕೆ ಸೂಕ್ತವಾದ ದಾಖಲೆಗಳನ್ನು ಕೊಡಬೇಕು, ಒಂದು ವೇಳೆ ನಿಮ್ಮ ಬಳಿ ದಾಖಲೆಗಳು ಇಲ್ಲ ಎಂದಾದರೆ ಆಗ ನೀವು ಇಟ್ಟುಕೊಂಡ ಹಣಕ್ಕೆ ಹೆಚ್ಚುವರಿ ಟ್ಯಾಕ್ಸ್ ಪಾವತಿ ಮಾಡಬೇಕು. ಕಾನೂನು ಬದ್ಧವಾಗಿ ನೀವು ಹಣವನ್ನು ಸಂಪಾದನೆ ಮಾಡಿದರೆ ಮತ್ತು ಅದಕ್ಕೆ ಆದಾಯ ತೆರಿಗೆ ರಿಟರ್ನ್ಸ್ (IT returns) ಪಾವತಿ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ.
ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಫಿಕ್ಸೆಡ್ ಇಟ್ಟರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
* ಇನ್ನು ದಾಖಲೆಗಳಿಲ್ಲದ ಹಣವನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ಅದಕ್ಕೆ 137 ಪರ್ಸೆಂಟ್ ನಷ್ಟು ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ.
* ಅದೇ ರೀತಿ ಬ್ಯಾಂಕ್ ನಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಅಥವಾ 50,000ಗಳನ್ನ ಒಂದೇ ಬಾರಿಗೆ ಹಿಂಪಡೆಯುವುದಾದರೆ ಅಥವಾ ಠೇವಣಿ ಇಡುವುದಾದರೆ ಆಧಾರ್ ಕಾರ್ಡ್ ಮಾತ್ರವಲ್ಲದೆ ಪ್ಯಾನ್ ಕಾರ್ಡ್ (Pan Card) ನೀಡಬೇಕು. ಜೊತೆಗೆ ಅದಕ್ಕೆ ಸಂಬಂಧಪಟ್ಟ ಟ್ಯಾಕ್ಸ್ ಪಾವತಿಸಬೇಕು. ಇಲ್ವಾದ್ರೆ ಹೆಚ್ಚುವರಿ ದಂಡ ಬೀಳುತ್ತದೆ.
ಬೀದಿ ಬದಿ ವ್ಯಾಪಾರ ಮಾಡೋರಿಗೆ ಸರ್ಕಾರವೇ ನೀಡುತ್ತೆ 50,000 ರೂಪಾಯಿ! ಬಂಪರ್ ಕೊಡುಗೆ
* ಬ್ಯಾಂಕ್ ನಲ್ಲಿ ನೀವು ಠೇವಣಿ ಇಟ್ಟ ಎರಡು ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವುದಾದರೆ ಟಿ ಡಿ ಎಸ್ ಪಾವತಿ ಮಾಡುವುದು ಕಡ್ಡಾಯ.
* ಮನೆಯಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ನಗದು ಇದೆ ಎಂದಾದರೆ ಅದಕ್ಕೆ ದಾಖಲೆಗಳಿದ್ದರೂ ಕೂಡ ನೀವು ಟ್ಯಾಕ್ಸ್ ಪಾವತಿ ಮಾಡಿಲ್ಲ ಎಂದಾದರೆ ಆ ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಹಾಗಾಗಿ ಇನ್ನು ಮುಂದೆ ನೀವು ಮನೆಯಲ್ಲಿ ನಗದು ಇಟ್ಟುಕೊಳ್ಳುವುದಾದರೆ ಅಥವಾ ಬ್ಯಾಂಕ್ ನಲ್ಲಿ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುವುದಾದರೆ ಈ ನಿಯಮಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದು ಸರಿಯಾದ ದಾಖಲೆ ಇದ್ದರೆ ನೀವು ಚಿಂತೆ ಮಾಡುವ ಅಗತ್ಯ ಇಲ್ಲ.
ರೈತರಿಗೆ ಸಿಗಲಿದೆ ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ
No more money can be kept at home, New Rule