ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಹಣ ತೆಗೆಯೋದು ಹೇಗೆ! ಬಂತು ಹೊಸ ನಿಯಮ

ಬ್ಯಾಂಕಿಂಗ್ ವ್ಯವಹಾರ (banking transaction) ಎನ್ನುವುದು ಸಾಮಾನ್ಯವಾಗಿದೆ. ಅಲ್ಲದೆ ನೀವು ಬ್ಯಾಂಕಿನಲ್ಲಿ ಉಳಿತಾಯ ಖಾತೆ (savings account) ಹೊಂದಿದ್ರೆ ಅದು ಹಲವು ರೀತಿಯ ಪ್ರಯೋಜನವನ್ನು ಒದಗಿಸುತ್ತದೆ.

ನೀವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡುವದಿದ್ದರೂ ಕೂಡ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಖಾತೆ ಹೊಂದಿರುವುದು ಕಡ್ಡಾಯ.

ಈಗ ಒಬ್ಬ ವ್ಯಕ್ತಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾರೆ ಎಂದು ಭಾವಿಸಿ. ಅವರ ಖಾತೆಯಲ್ಲಿ ಸಾಕಷ್ಟು ಹಣ ಇದೆ ಆದರೆ ಆ ವ್ಯಕ್ತಿ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ. ಈಗ ಅವರ ಬ್ಯಾಂಕ್ ನಲ್ಲಿ ಇರುವ ಹಣವನ್ನು ನೀವು ಹೇಗೆ ಹಿಂಪಡೆಯಬಹುದು?

ಸುಖಾಸುಮ್ಮನೆ ಅವರ ಎಟಿಎಂ ಕಾರ್ಡ್ (ATM card) ಉಜ್ಜೋದ್ರಿಂದ ಅಥವಾ ಡೆಬಿಟ್ ಕಾರ್ಡ್ (debit card) ಬಳಸುವುದರಿಂದ ನೀವು ಅವರ ಖಾತೆಯಲ್ಲಿ ಇರುವ ಎಲ್ಲಾ ಹಣ ಬಳಸಿಕೊಳ್ಳಲು ಸಾಧ್ಯವಿಲ್ಲ ಇದಕ್ಕೆ ಅದರದೇ ಆದ ನಿಯಮಗಳು ಕೂಡ ಇವೆ.

ಕಡಿಮೆ ಬಂಡವಾಳ ಹಾಕಿ ಈ ಬಿಸಿನೆಸ್ ಮಾಡಿದ್ರೆ ದಿನಕ್ಕೆ 8,000 ಆದಾಯ ಫಿಕ್ಸ್

ನಾಮಿನಿ ಆಗಿದ್ದರೆ ಬೇಗ ಹಣ ಸಿಗುತ್ತೆ!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಖಾತೆ (Bank Account) ತೆರೆದರೆ ಅಥವಾ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾಮಿನಿ ಫೆಸಿಲಿಟಿ (nominee facility) ನೀಡಲಾಗುತ್ತದೆ ಹಾಗೂ ನೀವು ನಾಮಿನಿ ಆಯ್ಕೆ ಮಾಡುವುದು ಕೂಡ ಕಡ್ಡಾಯ ಮಾಡಲಾಗಿದೆ.

ಆದರೆ ಈ ಹಿಂದೆ ನಾಮಿನಿ (you have to select your nominee) ಕಡ್ಡಾಯ ಆಗಿರಲಿಲ್ಲ. ಹಾಗಾಗಿ ಎಷ್ಟೋ ಜನ ತಮ್ಮ ಖಾತೆಯನ್ನು ನಾಮಿನಿ ಹೆಸರು ಸೂಚನೆ ಮಾಡದೆ ಖಾತೆ ತೆರೆದಿದ್ದಾರೆ. ಈ ರೀತಿ ನಾಮಿನಿ ಹೆಸರು ಸೂಚಿಸದೆ ಖಾತೆ ತೆರೆದಿದ್ದು ಆ ಖಾತೆಯಲ್ಲಿ ಹಣ ಇದ್ದರೆ ಅದರ ಪ್ರಯೋಜನ ಪಡೆದುಕೊಳ್ಳುವುದು ಬಹಳ ಕಷ್ಟ.

ನಾಮಿನಿ ಹೆಸ್ರು ಇದ್ರೆ ಹಣ ಹಿಂಪಡೆಯುವುದು ಹೇಗೆ?

ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ನಿಮ್ಮ ಹೆಸರನ್ನ ನಾಮಿನಿ ಆಗಿ ವ್ಯಕ್ತಿ ತೆಗೆದುಕೊಂಡಿದ್ದು ಆದ ಈಗ ಮರಣ ಹೊಂದಿದರೆ ನೀವು ಅವರು ಯಾವೆಲ್ಲ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಷ್ಟು ಹಣ ಇದೆ ಎಷ್ಟು ಹಣ ಹಿಂಪಡೆಯಬಹುದು ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುತ್ತಾರೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

Bank Accountಇನ್ನು ನೀವು ನಾಮಿನಿ ಆಗಿದ್ದರೆ ಹೆಚ್ಚು ದಾಖಲೆಗಳನ್ನು ನೀಡಬೇಕಾಗಿಲ್ಲ. ಮರಣ ಪ್ರಮಾಣ ಪತ್ರ (death certificate) ಹಾಗೂ ನಿಮ್ಮ ಆಧಾರ್ ಸಂಖ್ಯೆ (Aadhaar number) ಯನ್ನು ಕೊಟ್ರು ಸಾಕು, ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರುವ ನಿಮ್ಮ ಹೆಸರು ತೋರಿಸಿದ್ರೆ ಸುಲಭವಾಗಿ ಅವರ ಖಾತೆಯಲ್ಲಿರುವ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಹೆಂಡತಿ ಅಥವಾ ಮಕ್ಕಳೇ ಆತನ ನಾಮಿನಿ ಆಗಿರುತ್ತಾರೆ.

ಇನ್ಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡೋ ಹಾಗಿಲ್ಲ

ನಾಮಿನಿ ಇಲ್ಲದೆ ಇದ್ರೆ ಹಣ ಹಿಂಪಡೆಯುವುದು ಹೇಗೆ ?

ಇದರಲ್ಲಿ ರಿಸ್ಕ್ ಜಾಸ್ತಿ. ಇದನ್ನ ಸ್ವಲ್ಪ ಕಷ್ಟದ ಕೆಲಸ ಅಂತ ಹೇಳಬಹುದು. ಯಾರು ಬೇಕಾದರೂ ನಾಮಿನಿ ಅಂತ ಹೇಳಿಕೊಂಡು ಹೋಗಿರಬಹುದು. ಹಾಗಾಗಿ ಇಲ್ಲಿ ನಾಮಿನಿ ಪರೀಕ್ಷೆ ನಡೆಸಲಾಗುತ್ತದೆ. ನಿಮಗೂ ಮೃತ ಪಟ್ಟಿರುವ ವ್ಯಕ್ತಿಗೂ ನಿಜವಾಗಿ ಸಂಬಂಧ ಇದೆಯೇ ಎಂದು ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ.

ನಿಮ್ಮ ಆಧಾರ್ ಸಂಖ್ಯೆ, ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಆ ವ್ಯಕ್ತಿಯ ಜೊತೆಗೆ ನಿಮ್ಮ ಸಂಬಂಧ ದೃಢೀಕರಿಸುವಂತಹ ವಂಶವೃಕ್ಷ ಅಥವಾ ಇತರ ಮೂಲ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ನಂತರ ನೀವು ಪಕ್ಕ ಹೌದು, ಎಂದಾದರೆ ಮಾತ್ರ ನಿಮಗೆ ಆ ವ್ಯಕ್ತಿ ಖಾತೆಯಲ್ಲಿ ಇರುವ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಎಲ್ಲಾ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ನೀವು ಖಾತೆ ತೆರೆದರೆ ನಾಮಿನಿ ಹೆಸರನ್ನು ಸೂಚಿಸುವುದನ್ನು ಮಾತ್ರ ಮರಿಬೇಡಿ

ಸ್ವಂತ ವ್ಯಾಪಾರಕ್ಕೆ ಸಿಗುತ್ತೆ ಸಾಲ ಸೌಲಭ್ಯ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು

How to withdraw money from a Bank Account after Person Death

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories