ನಮಗೆಲ್ಲ ತಿಳಿದಿರುವಂತೆ ಪ್ಲಾಸ್ಟಿಕ್ ಈಗ ಬ್ಯಾನ್ (no plastic usage) ಆಗಿದೆ, ನಾವು ಸುಲಭವಾಗಿ ಈಗ ಮೊದಲಿನಂತೆ ಪ್ಲಾಸ್ಟಿಕ್ ಕವರ್ (plastic cover) ಗಳನ್ನ ಎಲ್ಲಾ ಕಡೆ ಕಾಣಲು ಸಾಧ್ಯವಿಲ್ಲ
ಸಣ್ಣ ಪುಟ್ಟ ಅಂಗಡಿಗಳಿಗೆ ಹೋಗಿ ಹಾಲು, ಹಣ್ಣು, ತರಕಾರಿ, ಹೂವು ಇವುಗಳನ್ನ ತೊಗೊಂಡು ಒಂದು ಕವರ್ ಕೊಡಿ ಅಂತ ಕೇಳ್ತಿದ್ವಿ ಆದರೆ ಈಗ ಹಾಗೆ ಆಗುವುದಿಲ್ಲ, ಕೆಲವರು ನಿಯಮವನ್ನು ಮುರಿದು ಈಗಲೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಅದು ಬೇರೆ ವಿಷಯ, ಆದರೆ ಸರ್ಕಾರ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಹೇರಿದ್ದು ನಿಜ.
ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ
ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧವನ್ನು ಹೇರಲಾಗಿದೆ. ಆದರೆ ನಮಗೆ ಪ್ಲಾಸ್ಟಿಕ್ ಬದಲಿಗೆ ಅಲ್ಟರ್ನೇಟಿವ್ (alternative) ವ್ಯವಸ್ಥೆ ಬೇಕು ಅಲ್ವಾ. ಸಾಕಷ್ಟು ವರ್ಷಗಳಿಂದ ಪ್ಲಾಸ್ಟಿಕ್ ಹಾನಿಕಾರಕ ಅಂತ ಗೊತ್ತಿದ್ರೂ ಕೂಡ ಬಳಸಿಕೊಂಡು ಬಂದಿದ್ದೇವೆ ಅಂದಮೇಲೆ ಆ ಜಾಗಕ್ಕೆ ಬೇರೆ ಒಂದು ಆಲ್ಟರ್ನೇಟಿವ್ (plastic substitute) ವ್ಯವಸ್ಥೆ ಆಗಬೇಕು, ಅದೇನಪ್ಪ ಅಂತ ನೋಡೋದಾದ್ರೆ ಬಟ್ಟೆ ಬ್ಯಾಗ್ ಅಥವಾ ಕಾಗದದ ಬ್ಯಾಗ್.
ಸಾಮಾನ್ಯವಾಗಿ ಅಂಗಡಿಗಳಲ್ಲಿಯೂ ಕೂಡ ಮನೆಯಿಂದ ಬ್ಯಾಗ್ ತೆಗೆದುಕೊಂಡು ಬನ್ನಿ ಅಂತ ಬೋರ್ಡ್ ಹಾಕಿರುವುದನ್ನು ಕಾಣಬಹುದು, ಅಂದ್ರೆ ನೀವು ಬಟ್ಟೆ ಬ್ಯಾಗ್ ಅಥವಾ ಕಾಗದ ಬ್ಯಾಗ್ ಅನ್ನು ಮನೆಯಿಂದ ಕೊಂಡೊಯ್ದು ವಸ್ತುಗಳನ್ನು ಖರೀದಿ ಮಾಡಿ ಅದರಲ್ಲಿ ಹಾಕಿಕೊಂಡು ಬರಬಹುದು. ಇದನ್ನ ಪ್ರತಿಯೊಬ್ಬರೂ ಪಾಲನೆ ಮಾಡಿದರೆ ನೀವು ಮಾತ್ರ ಇದನ್ನೇ ಅಡ್ವಾಂಟೇಜ್ ಆಗಿ ತೊಗೊಂಡು ನಿಮ್ಮದೇ ಆಗಿರುವ ಬಿಸಿನೆಸ್ (Own Business) ಆರಂಭಿಸಬಹುದು..
ಸ್ವಂತ ವ್ಯಾಪಾರಕ್ಕೆ ಸಿಗುತ್ತೆ ಸಾಲ ಸೌಲಭ್ಯ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು
ಬಟ್ಟೆ ಬ್ಯಾಗ್ ಬಿಸಿನೆಸ್
ಒಂದು ಸಣ್ಣ ಜಾಗದಲ್ಲಿ ಒಂದು ಆರಂಭಿಕ ಮಷೀನ್ ಇಟ್ಕೊಂಡು ನೀವು ಕಾಗದ ಅಥವಾ ಬಟ್ಟೆಯ ಮೂಲಕ ಬ್ಯಾಗ್ ತಯಾರಿಸಬಹುದು, ಇದು ನಿಮಗೆ ಹೆಚ್ಚು ಖರ್ಚಾಗದೇ ಹಾಗೂ ಉತ್ತಮ ಲಾಭ ತಂದುಕೊಡುವ ಒಂದು ಬಿಸಿನೆಸ್ ಆಗಿದೆ.
ಬಿಸಿನೆಸ್ ಆರಂಭಿಸುವುದು ಹೇಗೆ? (Start cloth or paper bag business)
ಆರಂಭದಲ್ಲಿ ಬಟ್ಟೆ ಅಥವಾ ಕಾಗದ ಕತ್ತರಿಸುವುದಕ್ಕೆ ಒಂದು ಮಷೀನ್ ಹಾಗೂ ಅಂಟು ಇಷ್ಟೇ ಬೇಕಾಗಿರೋದು ನೀವು ಇಂಡಿಯಾ ಮಾರ್ಟ್ ನಲ್ಲಿ ಈ ವಸ್ತುಗಳನ್ನು ಖರೀದಿ ಮಾಡಬಹುದು. ಇನ್ನು ರಾ ಮೆಟೀರಿಯಲ್ (raw materials) ಕಾಗದ ಅಥವಾ ಬಟ್ಟೆ ಸ್ವಲ್ಪ ಇನ್ವೆಸ್ಟ್ ಮಾಡಬೇಕಾಗುತ್ತೆ. ಇಷ್ಟು ಬಿಟ್ಟರೆ ಬೇರೆ ಹೆಚ್ಚುವರಿ ಖರ್ಚು ಇಲ್ಲ. ನಿಮ್ಮ ಮನೆಯ ಕರೆಂಟ್ ನಲ್ಲಿಯೇ ಈ ಮಷೀನ್ ಕೂಡ ರನ್ ಆಗುತ್ತೆ.
ನಿಮಗೆ ಒಂದು ಬಟ್ಟೆ ಬ್ಯಾಗ್ ತಯಾರಿಸುವುದಕ್ಕೆ 10 ರಿಂದ 12 ರೂಪಾಯಿ ಖರ್ಚಾಗುತ್ತೆ ಇದನ್ನ ನೀವು 40 ರೂಪಾಯಿಗಳಿಗೆ ಮಾರಾಟ ಮಾಡಬಹುದು. ಅಲ್ಲಿಗೆ ಪ್ರತಿದಿನ ಹೆಚ್ಚು ಬ್ಯಾಗ್ ರೆಡಿ ಮಾಡಿದ್ರೆ ನಿಮಗೆ ಹೆಚ್ಚು ಲಾಭ ಸಿಗುತ್ತದೆ.
ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ.! ಮಹಿಳೆ ಮತ್ತು ಪುರುಷರಿಗೂ ಸಿಗುತ್ತೆ ಬೆನಿಫಿಟ್
ಮಾರ್ಕೆಟಿಂಗ್ ಮುಖ್ಯ!
ಬಟ್ಟೆ ಬ್ಯಾಕು ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ ಜನ ಖರೀದಿ ಮಾಡಲೇಬೇಕು ಆದರೆ ನೀವು social media ಬಳಸಿಕೊಂಡು ಉತ್ತಮ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಬಹುದು. ಅಥವಾ ದೊಡ್ಡ ದೊಡ್ಡ ಮಾಲ್ ಹಾಗೂ ಅಂಗಡಿಗಳಲ್ಲಿ ಬಟ್ಟೆ ಬ್ಯಾಗ್ ಖರೀದಿ ಮಾಡಲು ಬಲ್ಕ್ ಆರ್ಡರ್ ತೆಗೆದುಕೊಳ್ಳಬಹುದು. ಇದರಲ್ಲೂ ಕೂಡ ನೀವು ಹಣ ಸಂಪಾದನೆ ಮಾಡಬಹುದು.
ಹಾಗಾದ್ರೆ ಮತ್ತೆ ಯಾಕೆ ತಡ ನೀವು ಗ್ರಹಿಣಿಯರಾಗಿದ್ರೆ ಅಥವಾ ಜಾಬ್ ಗೆ ಹೋಗ್ತಾ ಇರೋರು ಆಗಿದ್ದರೂ ಕೂಡ ನಿಮ್ಮ ಮನೆಯಲ್ಲಿಯೇ ಇದೊಂದು ಪುಟ್ಟ ಮಷೀನ್ ಇಟ್ಕೊಂಡು ಬ್ಯಾಗ್ ತಯಾರಿಸುವ ಬಿಸಿನೆಸ್ ಶುರು ಮಾಡೇ ಬಿಡಿ.
ಹೊಸ ಸ್ಕೀಮ್! ವಿದ್ಯುತ್ ಬಿಲ್ ಕಟ್ಟೋದೆ ಬೇಡ; ವಿದ್ಯುತ್ ಉತ್ಪಾದಿಸಿ ಹಣವನ್ನು ಕೂಡ ಗಳಿಸಿ
8,000 fixed income per day if you do this business with less investment
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.