ಬ್ಯಾಂಕ್‌ನಲ್ಲಿ 35,000 ಹಣ ಎಫ್‌ಡಿ ಇಟ್ರೆ, ಎಷ್ಟು ರಿಟರ್ನ್ ಸಿಗುತ್ತೆ? ಇಲ್ಲಿದೆ 35 ತಿಂಗಳ ಯೋಜನೆ

Story Highlights

Fixed Deposit : HDFC ಬ್ಯಾಂಕ್ ಇದೀಗ ಹೊಸದೊಂದು FD ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯು ಹೂಡಿಕೆ ಮಾಡುವವರಿಗೆ ಒಳ್ಳೆಯ ಆಯ್ಕೆ ಆಗಿದೆ.

Fixed Deposit : ಹಣ ಉಳಿತಾಯ ಮಾಡಿ, ಒಳ್ಳೆಯ ರಿಟರ್ನ್ಸ್ ಪಡೆದುಕೊಳ್ಳಬೇಕು ಎಂದುಕೊಂಡಿದ್ದರೆ, ಸ್ಟಾಕ್ ಮಾರ್ಕೆಟ್, ಶೇರ್ ಮಾರ್ಕೆಟ್ ಇಂಥ ಆಯ್ಕೆಗಳು ಬಹಳಷ್ಟಿದೆ, ಆದರೆ ಇವುಗಳು ಅಷ್ಟೊಂದು ಸುರಕ್ಷಿತವು ಅಲ್ಲ, ಹಾಗಾಗಿ ಹೆಚ್ಚಿನ ಜನರು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ನೀವು ಹೂಡಿಕೆ ಮಾಡುವ ಹಣ ಸೇಫ್ ಆಗಿರಬೇಕು, ಜೊತೆಗೆ ಒಳ್ಳೆಯ ರಿಟರ್ನ್ಸ್ ಕೂಡ ಬರಬೇಕು ಎಂದರೆ, ಅದಕ್ಕಾಗಿ ಬ್ಯಾಂಕ್ ಗಳಲ್ಲಿ FD ಮಾಡುವುದು ಒಳ್ಳೆಯದು. ಇಂಥದ್ದೇ ಒಂದು FD ಪ್ಲಾನ್ ಬಗ್ಗೆ ನಿಮಗೆ ತಿಳಿಸಲಿದ್ದೇವೆ..

ಇಂದು ನಿಮಗೆ HDFC ಬ್ಯಾಂಕ್ ನಲ್ಲಿ ಲಭ್ಯವಿರುವ FD ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ಜನರಿಗೆ ಅನುಕೂಲ ಆಗಬೇಕು ಎನ್ನುವ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು, HDFC ಬ್ಯಾಂಕ್ ಇದೀಗ ಹೊಸದೊಂದು FD ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯು ಹೂಡಿಕೆ ಮಾಡುವವರಿಗೆ ಒಳ್ಳೆಯ ಆಯ್ಕೆ ಆಗಿದೆ.

ಏರ್‌ಟೆಲ್ ಸಿಮ್ ಬಳಕೆ ಮಾಡ್ತಾ ಇದ್ದೀರಾ? ಆಗಾದ್ರೆ ನಿಮಗೆ ಸಿಗುತ್ತೆ ₹9 ಲಕ್ಷ ತನಕ ಸಾಲ! ಬಂಪರ್ ಕೊಡುಗೆ

ಇದು 35 ತಿಂಗಳ FD ಹೂಡಿಕೆಯ ಯೋಜನೆ ಆಗಿದೆ, ಅಂದರೆ 2 ವರ್ಷ 11 ತಿಂಗಳ ಹೂಡಿಕೆಯ ಯೋಜನೆ ಆಗಿದ್ದು, ಇಲ್ಲಿ ಹೂಡಿಕೆ ಮಾಡಿದರೆ, ಸಾಮಾನ್ಯ ಗ್ರಾಹಕರಿಗೆ 7.35% ಬಡ್ಡಿದರ, ಹಾಗೆಯೇ ಹಿರಿಯ ನಾಗರೀಕರಿಗೆ 7.85% ಬಡ್ಡಿದರ ಸಿಗುತ್ತದೆ.

ಈ 35 ತಿಂಗಳ ಅವಧಿಯ FD ಯೋಜನೆಯಲ್ಲಿ, 3.50 ಲಕ್ಷ ರೂಪಾಯಿಗಳನ್ನು ನೀವು ಹೂಡಿಕೆ ಮಾಡಿದರೆ, ಅದರಿಂದ ಎಷ್ಟು ಲಾಭ ಬರುತ್ತದೆ ಎಂದು ನೋಡುವುದಾದರೆ, HDFC ಯೋಜನೆಯ ಅನುಸಾರ 2 ವರ್ಷ 11 ತಿಂಗಳ ಅವಧಿಗೆ 3.50 ಲಕ್ಷ ಹೂಡಿಕೆ ಮಾಡಿದರೆ, 7.35% ಬಡ್ಡಿದರದಲ್ಲಿ ಅವಧಿಯ ಮುಕ್ತಾಯದ ವೇಳೆಗೆ ₹4,32,769 ರೂಪಾಯಿ ನಿಮ್ಮದಾಗುತ್ತದೆ.

ಇಲ್ಲಿ ನಿಮಗೆ ₹82,769 ರೂಪಾಯಿ ಹಣ ಬಡ್ಡಿ ರೀತಿಯಲ್ಲಿ ಸಿಗಲಿದೆ. ಇನ್ನು ಹಿರಿಯ ನಾಗರೀಕರಿಗೆ ಎಷ್ಟು ಬಡ್ಡಿ ಸಿಗುತ್ತದೆ ಎಂದರೆ, ಅವರಿಗೆ 7.85% ಬಡ್ಡಿ ಅನುಸಾರ, ₹89,007 ರೂಪಾಯಿ ಬಡ್ಡಿ ಸಿಗಲಿದ್ದು, ರಿಟರ್ನ್ಸ್ ವೇಳೆ ₹4,39,007 ರೂಪಾಯಿ ರಿಟರ್ನ್ಸ್ ಬರುತ್ತದೆ.

ಇದಷ್ಟೇ ಅಲ್ಲದೇ, HDFC ಇದೀಗ 55 ತಿಂಗಳ ಮತ್ತೊಂದು FD ಯೋಜನೆಯನ್ನು ಸಹ ಜಾರಿಗೆ ತಂದಿದೆ. ಇದರಲ್ಲಿ ಸಾಮಾನ್ಯ ಜನರಿಗೆ 7.40% ಬಡ್ಡಿ ಸಿಗುತ್ತದೆ. ಇನ್ನು 90 ದಿನಗಳ ಅವಧಿ ಇಂದ 6 ತಿಂಗಳ ಅವಧಿಯ FD ಯೋಜನೆಗೆ 4.50% ಬಡ್ಡಿ ಸಿಗುತ್ತದೆ.

ಅಕಸ್ಮಾತ್ ಪೆಟ್ರೋಲ್ ಕಾರ್ ಗೆ ಡೀಸೆಲ್ ಹಾಕಿದ್ರೆ ಏನಾಗುತ್ತೆ ಗೊತ್ತಾ? ನೀವು ಅಂದುಕೊಂಡಿರೋದು ತಪ್ಪು

6 ತಿಂಗಳ ಅವಧಿ ಇಂದ 9 ತಿಂಗಳ ಅವಧಿಗೆ 5.75% ಬಡ್ಡಿ ಸಿಗುತ್ತದೆ. 9 ತಿಂಗಳ ಅವಧಿ ಇಂದ 1 ವರ್ಷದ ಅವಧಿಗೆ 6% ಬಡ್ಡಿ ಸಿಗುತ್ತದೆ. 1 ವರ್ಷದ ಅವಧಿ ಇಂದ 15 ತಿಂಗಳ ಅವಧಿಯ FD ಯೋಜನೆಗೆ 6.25% ಬಡ್ಡಿ ಸಿಗುತ್ತದೆ.

ಇನ್ನು ಹೆಚ್ಚಿನ ಅವಧಿ ಅಂದರೆ 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯ FD ಯೋಜನೆಯ ಮೇಲೆ 7% ಬಡ್ಡಿದರ ಸಿಗಲಿದೆ. ಈ ಬ್ಯಾಂಕ್ ನಲ್ಲಿ ಬಡ್ಡಿ ಲೆಕ್ಕಾಚಾರ ನಡೆಯುವುದು ಎಷ್ಟು ದಿನಗಳ ಕಾಲಕ್ಕೆ ಠೇವಣಿ ಇಡಲಾಗುತ್ತದೆ ಎನ್ನುವುದರ ಮೇಲೆ ಆಗಿರುತ್ತದೆ. ಹಾಗಾಗಿ ವರ್ಷಕ್ಕೆ 365 ದಿನಗಳು ಅಥವಾ 366 ದಿನಗಳ ಅವಧಿಯ ಅನುಸಾರ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಈ ರೀತಿಯಲ್ಲಿ ನೀವು HDFC ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

if you Fixed Deposit 35,000 in the bank, how much return will you get

Related Stories