ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ₹9000 ರೂಪಾಯಿ!

Story Highlights

Post Office Monthly Income Scheme (POMIS) ಇದು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಉತ್ತಮವಾದ ಸ್ಕೀಮ್ ಆಗಿದೆ.

ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ನ ಹೂಡಿಕೆ ಉತ್ತಮವಾದ ಆಯ್ಕೆ ಆಗಿದೆ. ಇದು ಸರ್ಕಾರಕ್ಕೆ ಸೇರಿದ ಇಲಾಖೆ ಆಗಿರುವುದರಿಂದ ಇದರಲ್ಲಿ ನೀವು ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿ ಇರುತ್ತದೆ.

ಹಾಗೆಯೇ ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡುವ ಮೊತ್ತಕ್ಕೆ, ಉತ್ತಮವಾದ ಬಡ್ಡಿದರ ಸಿಗುತ್ತದೆ. ಇಲ್ಲಿ ಎಲ್ಲಾ ವಯೋಮಿತಿಯವರು ಹೂಡಿಕೆ ಮಾಡುವುದಕ್ಕೆ ಉತ್ತಮವಾದ ಯೋಜನೆಗಳ ಆಯ್ಕೆಯಿದ್ದು, ಅವುಗಳಲ್ಲಿ ಮಾಸಿಕ ಆದಾಯ ಯೋಜನೆಗಳು ಕೂಡ ಇದೆ.

Post Office Monthly Income Scheme (POMIS) ಇದು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಉತ್ತಮವಾದ ಸ್ಕೀಮ್ ಆಗಿದೆ. ಈ ಒಂದು ಯೋಜನೆಯಲ್ಲಿ ದಂಪತಿಗಳು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಕೂಡ ₹9000 ರೂಪಾಯಿ ಆದಾಯ ಪಡೆಯಬಹುದು. ಇದು ಒಳ್ಳೆಯ ರಿಟರ್ನ್ಸ್ ಕೊಡುವಂಥ ಯೋಜನೆ ಆಗಿದ್ದು, ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ..

ಸ್ಟೇಟ್ ಬ್ಯಾಂಕಿನಲ್ಲಿ 10 ಸಾವಿರ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಒನ್ ಟು ಡಬಲ್ ಆದಾಯ

POMIS:

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯು (Savings Scheme) ಉತ್ತಮವಾದ ಲಾಭ ನೀಡುವಂಥ ಯೋಜನೆ ಆಗಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರು ಸೇರಿ ಉಳಿತಾಯ ಮಾಡಿದರೆ, ತಿಂಗಳಿಗೆ ₹9000 ರೂಪಾಯಿಗಳನ್ನು ಆದಾಯವಾಗಿ ಪಡೆಯಬಹುದು.

ಇದರಲ್ಲಿ ಗಂಡ ಹೆಂಡತಿ ಇಬ್ಬರು ಕೂಡ ಜೊತೆಯಾಗಿ ಜಂಟಿ ಖಾತೆ ತೆರೆಯಬೇಕಾಗುತ್ತದೆ. ಅಥವಾ ಒಬ್ಬೊಬ್ಬರೇ ಏಕ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಇದರಿಂದ ಪ್ರತಿ ತಿಂಗಳು ಉತ್ತಮವಾದ ಲಾಭ ಸಿಗುತ್ತದೆ. ಗಂಡ ಹೆಂಡತಿಗೆ ಪೆನ್ಶನ್ (Pension) ರೂಪದಲ್ಲಿ ಪ್ರತಿ ತಿಂಗಳು ಹಣ ಸಿಗುವ ಹಾಗೆ ಮಾಡುವ ಯೋಜನೆ ಇದಾಗಿದೆ.

ಬ್ಯಾಂಕಿನಲ್ಲಿ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಲೆಕ್ಕಾಚಾರ

Post Office Schemeದಂಪತಿಗಳಿಗೆ ಪ್ರತಿ ತಿಂಗಳು ₹9000!

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಯ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರು ಕೂಡ ಖಾತೆ ತೆರೆದು, ₹15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಮೊತ್ತಕ್ಕೆ 7.4% ಬಡ್ಡಿ ಬರುತ್ತದೆ ಎಂದು ಅಂದುಕೊಂಡರು ಕೂಡ, ವರ್ಷಕ್ಕೆ ₹1,11,000 ರೂಪಾಯಿಗಳು ವಾರ್ಷಿಕ ಬಡ್ಡಿ ಸಿಗುತ್ತದೆ.

ಈ ಬಡ್ಡಿ ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರಿ ಎನ್ನುವುದರ ಮೇಲೆ ನಿರ್ಧಾರ ಆಗಿದ್ದು, ಪ್ರತಿ ತಿಂಗಳು ಈ ಹಣವನ್ನು ಡಿವೈಡ್ ಮಾಡಿದರೆ, ತಿಂಗಳಿಗೆ ₹9250 ರೂಪಾಯಿ ಆದಾಯ ನಿಮಗೆ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ!

ಒಬ್ಬರು, ಇಬ್ಬರು ಅಥವಾ ಮೂವರು ಸೇರಿ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಬರುವ ಬಡ್ಡಿ ಮತ್ತು ಆದಾಯವನ್ನು ಎಲ್ಲಾ ಖಾತೆದಾರರಿಗೂ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.

ನೀವು ಹೂಡಿಕೆ ಮಾಡಿದ ಸಮಯದಿಂದ ಹಣವನ್ನು ವಾಪಸ್ ಪಡೆಯಲು ಬಯಸಿದರೆ, 1 ವರ್ಷದ ನಂತರ ಪಡೆಯಬಹುದು. 1 ರಿಂದ 3 ವರ್ಷಗಳ ಅವಧಿಯಲ್ಲಿ ಹಣವನ್ನು ವಾಪಸ್ ಪಡೆದರೆ, ಇನ್ವೆಸ್ಟ್ ಮಾಡಿರುವ ಮೊತ್ತದಲ್ಲಿ 2% ಕಡಿತಗೊಳಿಸಿ ಇನ್ನುಳಿದ ಮೊತ್ತವನ್ನು ಕೊಡಲಾಗುತ್ತದೆ.

3 ವರ್ಷಗಳ ನಂತರ ವಾಪಸ್ ಪಡೆದರೆ ಇನ್ವೆಸ್ಟ್ ಮಾಡಿರುವ ಮೊತ್ತದಲ್ಲಿ 1% ಹಣವನ್ನು ಕಡಿತಗೊಳಿಸಿ, ಇನ್ನುಳಿದ ಮೊತ್ತವನ್ನು ಕೊಡಲಾಗುತ್ತದೆ.

In this post office scheme both husband and wife will get 9000 rupees every month

Related Stories