Business News

ಈ ಪೋಸ್ಟ್ ಆಫೀಸ್ ಸ್ಕೀಮ್ ಹೂಡಿಕೆಯಲ್ಲಿ ಹಣ ಒನ್ ಟು ಡಬಲ್ ಆಗಿ ನಿಮ್ಮ ಕೈಸೇರುತ್ತೆ

Savings Scheme : ಕೇವಲ ಸಾವಿರ ರೂಪಾಯಿಗಳಿಂದ ಉಳಿತಾಯ (savings) ಆರಂಭಿಸಿ ಕೆಲವೇ ವರ್ಷಗಳಲ್ಲಿ ಕೈ ತುಂಬಾ ಆದಾಯ ಗಳಿಸುವ ಯೋಜನೆಯ ಬಗ್ಗೆ ನಿಮಗೆ ಗೊತ್ತಾ? ಇಲ್ಲಿ ಯಾವುದೇ ಮಾರುಕಟ್ಟೆಯ ಅಪಾಯವು (market risk) ಇಲ್ಲ. ಹಣ ಕಳೆದುಕೊಳ್ಳುವ ಭಯವು ಇಲ್ಲ, ನೀವು ಹೂಡಿಕೆ ಮಾಡಿದ ಹಣ ದುಪ್ಪಟ್ಟಾಗಿ ಕೈ ಸೇರುತ್ತೆ!

ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಹೂಡಿಕೆ (post office savings scheme) ಮಾಡಲು ಬಯಸುತ್ತಾರೆ. ಅಂಚೆ ಕಚೇರಿಯಲ್ಲಿ ಅತ್ಯುತ್ತಮವಾದ ಸಾಕಷ್ಟು ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದೆ.

from now on you can get 90 thousand personal loan at the post office

ರೈತರಿಗೆ ಗುಡ್ ನ್ಯೂಸ್! ಟ್ರ್ಯಾಕ್ಟರ್ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ, 50% ಸಬ್ಸಿಡಿ

ಇಲ್ಲಿ ನಿಮ್ಮ ಹಣವು ಸೇಫ್! ಜೊತೆಗೆ ಹೆಚ್ಚು ಬಡ್ಡಿದರವನ್ನು ಕೂಡ ಉಳಿತಾಯ ಠೇವಣಿಗೆ ಪಡೆದುಕೊಳ್ಳಬಹುದು. ಅಂತಹ ಅಂಚೆ ಕಚೇರಿ ಯೋಜನೆಗಳಲ್ಲಿ ಕಿಸಾನ್ ವಿಕಾಸ ಪತ್ರ ಯೋಜನೆ ಕೂಡ ಒಂದು!

ಕಿಸಾನ್ ವಿಕಾಸ ಪತ್ರ ಯೋಜನೆ! (Kisan Vikas Patra scheme)

ದೇಶಾದ್ಯಂತ ಸುಮಾರು 1.5 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಯಲ್ಲಿ ಈ ಯೋಜನೆ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಕಿಸಾನ್ ವಿಕಾಸ ಪತ್ರ ಯೋಜನೆ ಪಡೆದು ಅದರಲ್ಲಿ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅತಿ ಕಡಿಮೆ ಹೂಡಿಕೆ ಮಾಡಿದ್ರು ಹೆಚ್ಚು ಲಾಭವನ್ನು ಪಡೆಯಬಹುದಾದ ಯೋಜನೆ ಇದು.

ಸರ್ಕಾರದಿಂದ ಬಡವರಿಗೆ ಉಚಿತ ಮನೆಗಳು ಮಂಜೂರು! ಹೊಸ ಪಟ್ಟಿ ಬಿಡುಗಡೆ

ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಹೂಡಿಕೆ ಹೇಗೆ? (How to invest in KVP)

Post office Schemeಇದು 10 ವರ್ಷ 4 ತಿಂಗಳ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10 ವರ್ಷಗಳ ನಂತರ ನಿಮ್ಮ ಹಣ ಡಬಲ್ ಆಗುತ್ತೆ. 6.9% ಬಡ್ಡಿ ದರವನ್ನು ವಾರ್ಷಿಕವಾಗಿ ನೀಡಲಾಗುವುದು.

ಈ ಯೋಜನೆಯಲ್ಲಿ ಕನಿಷ್ಠ 1,000 ಗಳಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ಮಿತಿ ಇಲ್ಲ. ಆದರೆ ನಿಮ್ಮ ಹೂಡಿಕೆಯ ಮೊತ್ತ ಪೂರ್ಣ ಪ್ರಮಾಣದ ಮೊತ್ತ ಆಗಿರಬೇಕು. ಉದಾಹರಣೆಗೆ 1,000rs, 10,000rs, 20,000 rs, 50,000rs ಒಂದು ಲಕ್ಷ ಹೀಗೆ.

3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್

ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಖಾತೆ ತೆರೆದು ಹೂಡಿಕೆ ಆರಂಭಿಸಬಹುದು. ಮೂರು ಜನ ಸೇರಿ ಜಂಟಿ ಖಾತೆ ತೆರೆಯಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.

ಆದರೆ ಗಾರ್ಡಿಯನ್ ಆಗಿ ಪಾಲಕರು ಖಾತೆ ನಡೆಸಬೇಕು. ತುರ್ತು ಹಣದ ಅಗತ್ಯ ಇದ್ದಲ್ಲಿ 30 ತಿಂಗಳ ನಂತರ ಹೂಡಿಕೆ ಹಣವನ್ನು ಹಿಂಪಡೆಯಲು ಅವಕಾಶವಿದೆ. ಮೆಚುರಿಟಿ ಸಮಯ ಮುಗಿದ ನಂತರ ದೇಶದ ಯಾವುದೇ ಅಂಚೆ ಕಛೇರಿಯಲ್ಲಿ ನೀವು ಹಣ ಹಿಂಪಡೆಯುವ ಸೌಲಭ್ಯವಿದೆ.

ಉಳಿತಾಯ ಠೇವಣಿ ಆರಂಭಿಸಿದ ವ್ಯಕ್ತಿ ಮರಣ ಹೊಂದಿದರೆ ನಾಮಿನಿಗೆ ಹಣವನ್ನು ಹಿಂತಿರುಗಿಸಲಾಗುತ್ತದೆ. ಒಂದು ಲಕ್ಷ ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಯಲ್ಲಿ ಅಂದರೆ 10 ವರ್ಷದ ನಾಲ್ಕು ತಿಂಗಳುಗಳಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಅವಧಿಗೂ ಮುನ್ನವೇ ಹಣ ಹಿಂಪಡೆದರೆ ಈ ಸೌಲಭ್ಯ ಇಲ್ಲ.

ಸ್ವಂತ ವ್ಯಾಪಾರಕ್ಕೆ ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 50 ಸಾವಿರ ತನಕ ಸಾಲ! ಪಡೆದುಕೊಳ್ಳಿ

In this post office scheme investment, your money will be doubled

Our Whatsapp Channel is Live Now 👇

Whatsapp Channel

Related Stories