ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ಸಿಗುತ್ತೆ 500 ರೂಪಾಯಿ! ಅರ್ಜಿ ಸಲ್ಲಿಸಿ
ನೀವು ಒಂದು ಅರ್ಜಿ ಸಲ್ಲಿಸಿದರೆ ಸಾಕು, ಕೇಂದ್ರ ಸರ್ಕಾರ ನೀಡುತ್ತೆ ನಿಮಗೆ ಪ್ರತಿದಿನ 500 ರೂ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ
ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರು ಕೂಡ ಸ್ವಾವಲಂಬನೆಯಿಂದ ಜೀವನ (independence life) ನಡೆಸಬೇಕು ಆರ್ಥಿಕವಾಗಿ ಸಬಲ (financial stability) ರಾಗಿರಬೇಕು ಎನ್ನುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ.
ಇಂದಿನ ಯುವಕರು ಕೂಡ ಯಾವುದೇ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಅದನ್ನು ಪರಿಹರಿಸಿಕೊಂಡು ತಮ್ಮ ಸ್ವಂತ ಉದ್ಯಮ (Own Business) ಆರಂಭಿಸಲು ಸರ್ಕಾರದಿಂದ ನೆರವು ಮತ್ತು ಬೆಂಬಲ ಸಿಗುತ್ತಿದೆ. ಇದಕ್ಕಾಗಿ ಮುಖ್ಯವಾಗಿ ನಾವು ಇಂದು ಈ ಲೇಖನದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯೋದು ಹೇಗೆ? ಕಾನೂನು ತಿಳಿಯಿರಿ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ! (Pradhanmantri Vishwakarma scheme)
2022, ಸಪ್ಟೆಂಬರ್ 17, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (pm Narendra Modi ji) ಅವರು ವಿಶ್ವಕರ್ಮ ಯೋಜನೆಯನ್ನು ಘೋಷಿಸಿದರು ಲಕ್ಷಾಂತರ ನೋಂದಣಿ ಆಗಿದೆ. 18 ಸಾಂಪ್ರದಾಯಿಕ ಉದ್ಯಮವನ್ನು ಮಾಡುತ್ತಿರುವ 18 ವರ್ಷದ ವಯಸ್ಸನ್ನು ನೀಡಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.
ಯಾರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು? (Who are getting this scheme benefit?)
ಚಮ್ಮಾರರು
ಕಮ್ಮಾರರು
ಕಲ್ಲು ಒಡೆಯುವವರು
ಸುತ್ತಿಗೆ (Hammer) ಮತ್ತು ಟೂಲ್ ಕಿಟ್ (Tool Kit) ತಯಾರಿಸುವವರು,
ಅಕ್ಕಸಾಲಿಗರು
ಗೊಂಬೆ ಅಥವಾ ಆಟಿಕೆ ತಯಾರಿಸುವವರು
ಮೀನುಗಾರಿಕೆಗೆ ಬೇಕಾದ ಬಲೆ ತಯಾರಿಸುವವರು
ಶಿಲ್ಪ ಕಲೆ ಕೆತ್ತನೆ ಕೆಲಸ ಮಾಡುವವರು,
ಮೇಸ್ತ್ರಿ
ದೋಣಿ ಕಟ್ಟುವವರು,
ಬುಟ್ಟಿ, ಚಾಪೆ, ಪೊರಕೆ ತಯಾರಿಸುವವರು
ಟೈಲರಿಂಗ್ ಉದ್ಯಮ ಮಾಡುವವರು
ಹೀಗೆ 18ಕ್ಕೂ ಹೆಚ್ಚಿನ ಕಸುಬು (traditional work) ಗಳನ್ನು ಮಾಡಿಕೊಂಡು ಬಂದಿರುವವರು ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಇಂತಹ ಜನರು ಇನ್ಮುಂದೆ ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇಲ್ಲ! ಇಲ್ಲಿದೆ ಮಾಹಿತಿ
ಪಿ ಎಂ ವಿಶ್ವಕರ್ಮ ಯೋಜನೆಯ ಪ್ರಮುಖ ಪ್ರಯೋಜನಗಳು! (Benefits of PM Vishwakarma scheme)
*ಯಾವುದೇ ಗ್ಯಾರೆಂಟಿ ಕೊಡದೆ ಮೂರು ಲಕ್ಷ ರೂಪಾಯಿಗಳವರೆಗಿನ ಸಾಲ (Loan) ಪಡೆಯಬಹುದು.
*ಮೊದಲು ಒಂದು ಲಕ್ಷ ರೂಪಾಯಿಗಳನ್ನು ಕೇವಲ 5% ಬಡ್ಡಿ ದರದಲ್ಲಿ ಸಾಲವಾಗಿ ನೀಡಲಾಗುತ್ತದೆ. ಇದನ್ನು ಮರುಪಾವತಿ ಮಾಡಿದ ನಂತರ ಮುಂದಿನ ಹಂತದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಪಡೆಯಬಹುದು.
*ಸಂಪ್ರದಾಯಿಕ ಕಸುಬು ಮಾಡುತ್ತಿರುವವರಿಗೆ ಕೌಶಲ್ಯ ತರಬೇತಿ (skills training) ನೀಡಲಾಗುತ್ತಿದೆ.
*ತರಬೇತಿಯ ಅವಧಿಯಲ್ಲಿ ಫಲಾನುಭವಿಗಳಿಗೆ 500 ರೂಪಾಯಿಗಳನ್ನು ಪ್ರತಿದಿನ ನೀಡಲಾಗುತ್ತದೆ.
*ಉಚಿತ ತರಬೇತಿ ಮುಗಿದ ನಂತರ 15,000 ಕಿಟ್ (tool kit) ಖರೀದಿ ಮಾಡಲು ಸಹಾಯಧನ ನೀಡಲಾಗುವುದು.
*ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡರೆ ಸರ್ಕಾರದಿಂದ ಐಡಿ ಕಾರ್ಡ್ ಸಿಗುತ್ತದೆ.
*ಈ ಕಾರ್ಡ್ ಮೂಲಕ ಯಾವುದೇ ವಸ್ತು ಪ್ರದರ್ಶನ ಅಥವಾ ಮೇಳದಲ್ಲಿ ನೀವು ನಿಮ್ಮ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ನೇರ ಪ್ರವೇಶ ಸಿಗುತ್ತದೆ.
ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿರುವವರಿಗೆ ಭರ್ಜರಿ ಸುದ್ದಿ! ಮತ್ತೊಂದು ಸೌಲಭ್ಯ
ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
https://pmvishwakarma.gov.in/ ಈ ಅಧಿಕೃತ ವೆಬ್ಸೈಟ್ಗೆ ಹೋಗಿ, ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ತರಬೇತಿಗೆ ನೋಂದಾಯಿಸಿಕೊಂಡು ನಿಮ್ಮ ವಿಶ್ವಕರ್ಮ ಐಡಿ ಪಡೆದುಕೊಳ್ಳಿ. ತರಬೇತಿಯ ಬಳಿಕ ಸಾಲ ಸೌಲಭ್ಯ ನೀಡಲಾಗುವುದು.
In this scheme of the government, you will get 500 rupees every day