ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯೋದು ಹೇಗೆ? ಕಾನೂನು ತಿಳಿಯಿರಿ

ತಂದೆ ಆಸ್ತಿಯನ್ನು ಗಂಡು ಮಕ್ಕಳ ಹೆಸರಿಗೆ ಬರೆದುಬಿಟ್ಟರೆ ಹೆಣ್ಣು ಮಕ್ಕಳು ಆ ಆಸ್ತಿಯಲ್ಲಿ ಪಾಲು ಹೊಂದಲು ಸಾಧ್ಯವಿದೆಯೇ?

Bengaluru, Karnataka, India
Edited By: Satish Raj Goravigere

ನಮ್ಮ ದೇಶದಲ್ಲಿ ಆಸ್ತಿ ವಿವಾದ (property issues) ದಿನವು ನಡೆಯುತ್ತಲೇ ಇರುತ್ತದೆ. ಲಕ್ಷಾಂತರ ಆಸ್ತಿ ವಿವಾದಕ್ಕೆ ಸಂಬಂಧಪಟ್ಟ ಕೇಸ್ ಗಳು ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇವೆ.

ಆಸ್ತಿ ಸಂಬಂಧಪಟ್ಟ ಜಗಳ ವೈಮನಸ್ಸು, ಮನಸ್ತಾಪ, ಎಲ್ಲವೂ ತುಸು ಜಾಸ್ತಿ ಎಂದೇ ಹೇಳಬಹುದು. ಇದೇ ಕಾರಣಕ್ಕೆ ಎಷ್ಟು ಅಣ್ಣತಮ್ಮಂದಿರು ಕೂಡ ದಾಯಾದಿಗಳಾಗಿ ಪರಿವರ್ತನೆ ಆಗಿದ್ದು ಇದೆ ಸಾವು ನೋವುಗಳು ಸಂಭವಿಸಿದ್ದು ಆಗಿದೆ. ಆದರೆ ಈಗ ಸರ್ಕಾರದ ಕೆಲವು ಉಪಕ್ರಮಗಳಿಂದಾಗಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

Property Rights

ಇಂತಹ ಜನರು ಇನ್ಮುಂದೆ ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇಲ್ಲ! ಇಲ್ಲಿದೆ ಮಾಹಿತಿ

ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು! (Daughter’s right in father’s property)

ಕೆಲವು ವರ್ಷಗಳ ಹಿಂದೆ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಹಕ್ಕು ಕೂಡ ಇರಲಿಲ್ಲ. ಅದರಲ್ಲೂ ಮದುವೆಯಾದ ಹೆಣ್ಣಂತೂ ಕೊಟ್ಟ ಹೆಣ್ಣು ಹೊರಗೆ ಎನ್ನುವಂತೆ ಆಕೆಗೆ ತಂದೆ ಮನೆಯಿಂದ ಬಿಡಿಗಾಸನ್ನು ಕೂಡ ಕೊಡುತ್ತಿರಲಿಲ್ಲ. ಆದರೆ 2005ರಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ ಆಗುತ್ತದೆ.

ಅಂದಿನಿಂದ ಮಹಿಳೆಯರಿಗೂ ಕೂಡ ತಂದೆಯ ಆಸ್ತಿಯಲ್ಲಿ ಸಮಾನವಾದ ಹಕ್ಕನ್ನು ಘೋಷಣೆ ಮಾಡಲಾಗಿದೆ. ಮನೆಯಲ್ಲಿ ಇರುವ ಗಂಡು ಮಕ್ಕಳು ತಂದೆ ಆಸ್ತಿಯಲ್ಲಿ ಎಷ್ಟು ಹಕ್ಕುದಾರರೋ ಹೆಣ್ಣು ಮಗು ಕೂಡ ಅಷ್ಟೇ ಹಕ್ಕನ್ನು ಪಡೆದಿರುತ್ತದೆ.

ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿರುವವರಿಗೆ ಭರ್ಜರಿ ಸುದ್ದಿ! ಮತ್ತೊಂದು ಸೌಲಭ್ಯ

Property documentsತಂದೆಯೇ ಗಂಡು ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡಿಟ್ಟರೆ ಅಥವಾ ತನ್ನ ಸ್ವಯಾರ್ಜಿತ ಆಸ್ತಿಯನ್ನು ಗಂಡು ಮಕ್ಕಳ ಹೆಸರಿಗೆ ಉಯಿಲು ಮಾಡಿಸಿ ಇಟ್ಟರೆ ಹೆಣ್ಣು ಮಕ್ಕಳಿಗೆ ಅದರಿಂದ ಪಾಲು ಪಡೆದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿರಬಹುದು ಇದಕ್ಕೆ ಇಲ್ಲಿದೆ ಉತ್ತರ.

ತಂದೆ ಆಸ್ತಿಯ ಬಗ್ಗೆ ಏನನ್ನುತ್ತದೆ ಕಾನೂನು!

ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಯ ನಂತರ ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಆಸ್ತಿಯಲ್ಲಿ ಸಮಾನವಾದ ಕಾನೂನಿನಲ್ಲಿ ತಿಳಿಸಲಾಗಿದೆ. ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳು ತಮ್ಮ ಸಹೋದರಿಗೆ ಆಸ್ತಿ ನೀಡಲು ಹಿಂಜರಿದರೆ ಆಕೆ ಕಾನೂನಿನ ಮೂಲಕ ತನ್ನ ಪಾಲಿನ ಆಸ್ತಿಯನ್ನು ಪಡೆದುಕೊಳ್ಳಬಹುದು

ಬಡವರಿಗೆ ಮನೆ ಕಟ್ಟಿಕೊಡಲು ಮುಂದಾದ ಸರ್ಕಾರ! ವಸತಿ ಯೋಜನೆಯ ಸ್ವಂತ ಸೂರು

ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಕೇವಲ ಗಂಡು ಮಕ್ಕಳಿಗೆ ಮಾತ್ರ ವಿಲ್ (will) ಬರೆದಿಟ್ಟು ಮೃತಪಟ್ಟಿದ್ದರೆ ಅಥವಾ ಜೀವಂತ ಇರುವಾಗಲೇ ತನ್ನ ಪುತ್ರರ ಹೆಸರಿಗೆ ವಿಲ್ ಮಾಡಿಸಿಟ್ಟಿದ್ದರೆ, ಆಗ ಕಾನೂನಿನ ಪ್ರಕಾರ ಆಕೆ ಯಾರನ್ನು ಪ್ರಶ್ನೆ ಮಾಡುವಂತೆ ಇಲ್ಲ.

ಅದೇ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆ ಎಲ್ಲಾ ಆಸ್ತಿಯನ್ನು ಗಂಡು ಮಕ್ಕಳಿಗೆ ಬರೆದಿಟ್ಟರೆ ಆಗ ಕಾನೂನು ಅವರನ್ನು ಪ್ರಶ್ನೆ ಮಾಡಬಹುದು ಹಾಗೂ ಹೆಣ್ಣು ಮಗುವಿಗೂ ಸಮಾನವಾಗಿ ಪಾಲು ಹಂಚಿಕೆ ಮಾಡುವಂತೆ ಕೇಳಬಹುದು.

ಆಸ್ತಿ ಹಂಚಿಕೆ ವಿಚಾರದಲ್ಲಿ, ಕಾನೂನು ಬದ್ದ ಉತ್ತರಾಧಿಕಾರಿಗೆ ಉಯಿಲಿನಲ್ಲಿ ವಂಚನೆ ಆದರೆ ಅಂತಹ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಉಯಿಲಿನಿಂದ ಅಂತಹ ವ್ಯಕ್ತಿಯನ್ನು ಯಾಕೆ ಹೊರಗೆ ಇಡಲಾಗಿದೆ ಎನ್ನುವ ಕಾರಣವನ್ನು ಸ್ಪಷ್ಟವಾಗಿ ಕಾನೂನಿಗೆ ತಿಳಿಸಬೇಕಾಗುತ್ತದೆ.

ಇಂತಹ ಕಾನೂನು ಹೋರಾಟದಲ್ಲಿ ಉತ್ತರಾಧಿಕಾರಿಗಳಿಗೆ ಉಯಿಲಿನ ಪ್ರಕಾರ ಆಸ್ತಿ ವಿತರಣೆ ಆಗದೆ ಇದ್ದಾಗ ಅಥವಾ ಗಂಡು ಮಕ್ಕಳಿಗೆ ಮಾತ್ರ ಆಸ್ತಿ ಭಾಗ ಮಾಡಿದರೆ ಹೆಣ್ಣು ಮಕ್ಕಳು ತಮ್ಮ ಆಸ್ತಿ ಹಕ್ಕನ್ನು ಕೇಳಬಹುದು.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ

How do daughters get share in father’s property, Know the law