ಯಾವುದೇ ಸರ್ಕಾರವಿರಲಿ ಅದರ ಉದ್ದೇಶ ಜನ ಕಲ್ಯಾಣವೇ ಆಗಿರುತ್ತದೆ. ರಾಜ್ಯ ಸರ್ಕಾರ (state government) ವಿರಲಿ, ಕೇಂದ್ರ ಸರ್ಕಾರ (Central government) ವಿರಲಿ, ಮೂಲಭೂತ ಅವಶ್ಯಕತೆಯನ್ನು ಪೂರೈಸುವುದು ಅವುಗಳ ಕರ್ತವ್ಯವಾಗಿದೆ.
ಮೂಲಭೂತ ಅಗತ್ಯತೆಗಳಲ್ಲಿ ವಸತಿ ಕೂಡ ಒಂದಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ಕೊಟ್ಯಂತರ ಜನರು ವಾಸಿಸಲು ಒಂದು ಸ್ವಂತ ಮನೆ (own house) ಇಲ್ಲದೆ ಪರದಾಡುತ್ತಿದ್ದಾರೆ.
ಇಂತವರಿಗೆ ಸೂರು ಒದಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಬಾರಿ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ವಸತಿ ಯೋಜನೆ (housing scheme) ಯ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಿದೆ.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಭರ್ಜರಿ ಸುದ್ದಿ
ಬಾಡಿಗೆ ಮನೆ (rented house) ಗಳಲ್ಲಿ ಹಾಗೂ ಸ್ಲಂ ಗಳಲ್ಲಿ ವಾಸಿಸುವ ಜನರಿಗೆ ಮನೆ ಕಟ್ಟಿಕೊಡಲು ಈ ಬಾರಿ ಮಂಡಿಸಿದ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಈ ಉಪಕ್ರಮದ ಕುರಿತು ಬೆಳವಣಿಗೆಗಳು ಈಗಾಗಲೇ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.
ಯೋಜಿತ ವಸತಿ ಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯದ ಮಾನದಂಡಗಳು ಮುಖ್ಯವಾಗುತ್ತದೆ. ಜೊತೆಗೆ ಯಾವ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಹಾಗೂ ಯಾವ ಪ್ರಕಾರದ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸರ್ಕಾರವೇ ನಿರ್ಧಾರ ಮಾಡುತ್ತದೆ.
ಕೇಂದ್ರ ಸರ್ಕಾರದ ವಸತಿ ಹಾಗು ನಗರ ವ್ಯವಹಾರಗಳ ಸಚಿವಾಲಯವು ಇದರ ನಿಯಮಗಳನ್ನು ಅಂತಿಮಗೊಳಿಸಿದ ನಂತರ ಅದನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಆಗ ಈ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ.
ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವುದರಿಂದ ಆದಾಯ ಮಟ್ಟಗಳು, ವಸತಿ ಯೋಜನೆ ಪ್ರಕಾರಗಳು, ಬೌಗೋಳಿಕ ಸ್ಥಳಗಳನ್ನು ಅವಲೋಕಿಸಿ ಎಷ್ಟು ಹಣ ಬೇಕಾಗುತ್ತದೆ ಎಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ರೈತರಿಗಾಗಿ ಇದು ಅತ್ಯುತ್ತಮ ಯೋಜನೆ; ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ ಹಣ!
ಫೆ.1ರಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala sitaraman) ಅವರು ಈ ವರ್ಷದ ಮಧ್ಯಂತರ ಬಜೆಟ್ (budget) ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ಬಾಡಿಗೆ ಮನೆಗಳು, ಕೊಳಗೇರಿಗಳು, ಸ್ಲಂಗಳಲ್ಲಿ ವಾಸಿಸುವ ಜನರಿಗೆ ಸೂರು ನಿರ್ಮಾಣ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ.
ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಿರಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿ. ಹಾಗಾಗಿ ಇಂತಹವರಿಗೆ ಮನೆಗಳನ್ನು ನೀಡುವುದು ಅಥವಾ ಮನೆ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ
ಈ ಘೋಷಣೆಯು ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ (pradhanmantri aawas Yojana – rural) ಹಾಗೂ ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ (pradhanmantri aawas Yojana – city) ಎಲ್ಲವನ್ನು ಒಳಗೊಂಡಿರುವ ಯೋಜನೆಯಾಗಿದೆ. ಹಾಗಾಗಿ ಇದಕ್ಕೆ ವಸತಿ ಮಿಷನ್ ಎಂದು ಹೆಸರಿಡಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ದೇಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್, ನಿರ್ಮಾಣ, ಪ್ಲಾಟ್ ಅಭಿವೃದ್ಧಿ ಕ್ಷೇತ್ರಗಳ ಬೆಳವಣಿಗೆಯನ್ನು ಇದು ಉತ್ತೇಜಿಸುತ್ತದೆ ಎಂದು ಉದ್ಯಮಿ ಪುಷ್ಪೇಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬ ಖ್ಯಾತ ಉದ್ಯಮಿ ಅನುಜ್ ಪುರಿ, ಮಧ್ಯಮ ವರ್ಗದವರಿಗೆ ವಸತಿ ಯೋಜನೆಯು ಸುಲಭವಾಗಿ ಪುನರಾಭಿವೃದ್ಧಿಗಾಗಿ ಕೊಳಗೇರಿಯಂತಹ ಅತಿಕ್ರಮಣ ಪ್ರದೇಶಗಳನ್ನು ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್! ಹೊಸ ಉಳಿತಾಯ ಯೋಜನೆ
New Housing Scheme From the government, Here is the Details
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.