ಉಳಿತಾಯ ಯೋಜನೆ (Savings Plan) ಯಲ್ಲಿ ಹಣ ಹೂಡಿಕೆ ಮಾಡಿದ್ರೆ, ಅದರಿಂದ ಸಿಗುವ ಆದಾಯ ನಮ್ಮ ಭವಿಷ್ಯಕ್ಕೆ ಸಹಾಯಕವಾಗುತ್ತದೆ. ಹೀಗೆ ಹೂಡಿಕೆ ಮಾಡಲು ಸರಿಯಾದ ಪ್ಲಾಟ್ ಫಾರ್ಮ್ (Platform) ಕೂಡ ಬೇಕಾಗುತ್ತದೆ.
ಎಲ್ಲಾ ಕಡೆ ಹೂಡಿಕೆ ಮಾಡಿದರೆ 100% ಸೇಫ್ (Safe) ಎಂದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿ (Post Office) ಯಲ್ಲಿ ಹೂಡಿಕೆ (Investment) ಮಾಡಿದರೆ ಅದರಿಂದ ಯಾವುದೇ ಹಣ ಕಳೆದುಕೊಳ್ಳುವ ಅಪಾಯ ಇರುವುದಿಲ್ಲ.
ಅದರಲ್ಲೂ ಪೋಸ್ಟ್ ಆಫೀಸ್ನಲ್ಲಿ (Post Office Scheme) ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಬೇರೆಬೇರೆ ರೀತಿಯ ಉಳಿತಾಯ ಯೋಜನೆಗಳು ಲಭ್ಯ ಇವೆ ಹಾಗಾಗಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ: (Post Office monthly Income Scheme)
ಅಂಚೆ ಕಚೇರಿಯಲ್ಲಿ ಇರುವ ಹಲವು ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ ಕೂಡ ಒಂದು. ಈ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರೂ ಜಂಟಿಯಾಗಿ ಖಾತೆ (Joint Account) ತೆರೆದು ಪ್ರತಿ ತಿಂಗಳು ಪಿಂಚಣಿ (Pension) ರೂಪದಲ್ಲಿ ಹಣ ಬರುವ ಹಾಗೆ ಮಾಡಿಕೊಳ್ಳಬಹುದು.
ಈ ಹಿಂದೆ 9 ಲಕ್ಷ ರೂಪಾಯಿಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಆದರೆ ಈಗ ಕೇಂದ್ರ ಸರ್ಕಾರ (Central Government) ಈ ಹೂಡಿಕೆಯ ಯೋಜನೆಯ ಪರಿಷ್ಕರಣೆ ಮಾಡಿದ್ದು 9 ಲಕ್ಷದಿಂದ ಹೂಡಿಕೆ ಹಣವನ್ನು 15 ಲಕ್ಷಗಳಿಗೆ ಏರಿಕೆ ಮಾಡಿದೆ.
ಇನ್ನು 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ದರವನ್ನು ಏರಿಸಿದ್ದು ಮಾತ್ರವಲ್ಲದೆ ಈ ಯೋಜನೆಗೆ ಮೊದಲು ಸಿಗುತ್ತಿದ್ದ 7.4% ಬಡ್ಡಿ ದರವನ್ನು 8.2% ಗೆ ಏರಿಕೆ ಮಾಡಲಾಗಿದೆ. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಶೀಲಿಸಲಾಗುತ್ತದೆ.
ಹೆಚ್ಚಾಗಿ ಈ ಯೋಜನೆಯಲ್ಲಿ ಬಡ್ಡಿದರ ಸ್ಥಿರವಾಗಿ ಇರುತ್ತದೆ ಹಾಗಾಗಿ ಯಾವುದೇ ತೊಂದರೆ ಇಲ್ಲದೆ ಹೆಚ್ಚು ಬಡ್ಡಿ ದರದ ಮೂಲಕ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು.
ಈ ಯೋಜನೆಯನ್ನು ಆರಂಭಿಸಲು ನೀವು ಅಂಚೆ ಕಚೇರಿಯಲ್ಲಿ ಕನಿಷ್ಠ ಸಾವಿರ ರೂಪಾಯಿಗಳ ಹೂಡಿಕೆ ಮಾಡಿ ಖಾತೆ ತೆರೆಯಬೇಕು. ನಂತರ ನೀವು 9 ರಿಂದ 15 ಲಕ್ಷ ರೂಪಾಯಿಗಳ ವರೆಗೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ.
ಐದು ವರ್ಷಗಳ ಈ ಯೋಜನೆಯಲ್ಲಿ ನೀವು ಒಂದು ವರ್ಷಗಳಿಗೆ ಹಣವನ್ನು ಹಿಂಪಡೆಯಲು ಬಯಸಿದರೆ ಅದು ಸಾಧ್ಯವಿಲ್ಲ. ವರ್ಷಗಳ ಅವಧಿ ಪೂರ್ಣಗೊಂಡ ನಂತರ ನೀವು ಅಸಲು ಹಾಗೂ ಬಡ್ಡಿ ಸೇರಿ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳುತ್ತೀರಿ ಇದನ್ನು ನೀವು ಪಿಂಚಣಿ ಆಗಿ ಬದಲಾಯಿಸಿಕೊಳ್ಳಬಹುದು
ಅಂದರೆ ಪ್ರತಿ ತಿಂಗಳು ಗಂಡ ಹೆಂಡತಿ 9000ಗಳಿಗಿಂತಲೂ ಹೆಚ್ಚಿಗೆ ಪಿಂಚಣಿ (Pension) ಪಡೆದುಕೊಳ್ಳಲು ಸಾಧ್ಯ. 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ವರ್ಷಕ್ಕೆ 1.11 ಲಕ್ಷ ರೂಪಾಯಿಗಳಷ್ಟು ಉಳಿತಾಯವಾಗುತ್ತದೆ.
ನೀವು ಪ್ರತಿ ತಿಂಗಳು 9,000ರೂ.ಗೂ ಹೆಚ್ಚಿನ ಹಣ ಪಡೆದುಕೊಳ್ಳಲು ಸಾಧ್ಯ. ಸೇಫ್ ಆಗಿರುವ ಉಳಿತಾಯ ಯೋಜನೆಯನ್ನು ನೀವು ಹುಡುಕುತ್ತಿದ್ದರೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.
Income more than 1 lakh for both husband and wife with less investment
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Income more than 1 lakh for both husband and wife with less investment