ಚೆಕ್ ಬೌನ್ಸ್ ಕೇಸ್‌ನಲ್ಲಿ ಸಿಕ್ಕಾಕ್ಕೊಂಡ್ರೆ ಜೈಲೂಟ ಗ್ಯಾರೆಂಟಿ; ಮೊದಲು ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ!
ಬ್ಯುಸಿನೆಸ್ ಮಾಡುವವರು ಈ ವಿಷಯವನ್ನು ಗಮನದಲ್ಲಿಡಿ, ಇಲ್ಲದಿದ್ದರೆ ಚೆಕ್ ಬೌನ್ಸ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು! ಮಹತ್ವದ ಮಾಹಿತಿ
Cheque Bounce : ಯಾವುದೇ ದೊಡ್ಡ ದೊಡ್ಡ ಕಂಪನಿಯ ಬ್ಯುಸಿನೆಸ್ ಹಣಕಾಸಿನ ವ್ಯವಹರಗಳು ನಡೆಯುವುದು ಚೆಕ್ ಮೂಲಕ. ಇದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ನಾವು ಚೆಕ್ ವ್ಯವಹಾರ ಮಾಡುವಾಗ ಬಹಳ ಹುಷಾರಾಗಿ ಇರಬೇಕು ಎನ್ನುವ ವಿಷಯ ಕೂಡ ನಮಗೆ ಗೊತ್ತಿರಬೇಕು.
ಚೆಕ್ ಕೊಡುವಾಗ ಮತ್ತು ಪಡೆಯುವಾಗ ಎರಡು ಸಮಯದಲ್ಲಿ ಎಚ್ಚರಿಕೆ ಇಂದ ಇದ್ದರೆ ಮಾತ್ರ, ಯಾವುದೇ ಸಮಸ್ಯೆ ಆಗದ ಹಾಗೆ ಕೆಲಸಗಳನ್ನು ಮಾಡಿಕೊಂಡು ಹೋಗಬಹುದು. ಚೆಕ್ ಕೊಡುವವರು ಮಾತ್ರ ಬಹಳ ಹುಷಾರಾಗಿ ಇರಬೇಕು.
ಬ್ಯಾಂಕ್ ವ್ಯವಹಾರ (Banking) ಮಾಡುವವರು ವಿಶೇಷವಾಗಿ ಚೆಕ್ ಕೊಡುವಾಗ ತಮ್ಮ ಅಕೌಂಟ್ ನಲ್ಲಿ (Bank Account) ಎಷ್ಟು ಹಣವಿದೆ, ಅದನ್ನು ತಿಳಿದುಕೊಂಡು ಚೆಕ್ ಕೊಡಬೇಕು. ಇಲ್ಲದಿದ್ದರೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿಕೊಳ್ಳಬಹುದು.
ಎಟಿಎಂನಲ್ಲಿ ನಕಲಿ ನೋಟು ಬರುತ್ತಾ? ಅಕಸ್ಮಾತ್ ಬಂತು ಅಂತ ಇಟ್ಕೊಳಿ, ಏನ್ ಮಾಡಬೇಕು ಗೊತ್ತಾ?
ಇದರ ಬಗ್ಗೆ ಕೂಡ ಗಮನ ಕೊಡಬೇಕಾಗುತ್ತದೆ. ನೀವು ಚೆಕ್ ಕೊಟ್ಟು, ಅದರಲ್ಲಿ ಬರೆದಿರುವಷ್ಟು ಹಣ ನಿಮ್ಮ ಅಕೌಂಟ್ ನಲ್ಲಿ ಇಲ್ಲವಾದರೆ, ಆಗ ಅದು ಚೆಕ್ ಬೌನ್ಸ್ ಪ್ರಕರಣ ಆಗುತ್ತದೆ. ಇದರಿಂದ ಚೆಕ್ ಕೊಟ್ಟವರು ಜೈಲು ಸೇರುವ ಸಂದರ್ಭ ಬರಬಹುದು, ಹಾಗೆಯೇ ಅವರ ಮೇಲೆ ದಂಡ ಕೂಡ ವಿಧಿಸಲಾಗುತ್ತದೆ. ಈ ಕಾರಣಗಳಿಂದ ನೀವು ಹುಷಾರಾಗಿ ಇರಬೇಕು..
ಯಾವುದೇ ವ್ಯಕ್ತಿ ಕೊಟ್ಟಿರುವ ಚೆಕ್ ಬೌನ್ಸ್ (Cheque Bounce) ಆದರೆ, ಆತನನ್ನು ನೇರವಾಗಿ ಬಂಧಿಸುವ ಹಾಗಿಲ್ಲ, ಮೊದಲಿಗೆ ಕಾನೂನಾತ್ಮಕವಾಗಿ ನೋಟಿಸ್ ಕಳಿಸಿಕೊಡಬೇಕು, ಆ ವ್ಯಕ್ತಿ ಅದಕ್ಕೆ 15 ದಿನಗಳ ಒಳಗೆ ಉತ್ತರ ಕೊಡಬೇಕು, ಒಂದು ವೇಳೆ ಯಾವುದೇ ಉತ್ತರ ಬರದೇ ಹೋದರೆ, ಆಗ 1881ರ Negotiable Instrument Act ನ ಅನುಸಾರ ಆ ವ್ಯಕೃಯ ವಿರುದ್ಧ ಕೇಸ್ ದಾಖಲಿಸಬಹುದು.
ಈ ಕೇಸ್ ಸೆಕ್ಷನ್ 148 ಅಡಿಗೆ ಬರಲಿದ್ದು, ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯನ್ನು ಅರೆಸ್ಟ್ ಮಾಡಬಹುದು. ಆತನಿಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಯನ್ನು ಕೂಡ ಕೊಡಲಾಗುತ್ತದೆ.
2014ಕ್ಕಿಂತ ಮುಂಚೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ವಿಳಾಸ ಪುರಾವೆಗೆ ಹೊಸ ದಾಖಲೆಗಳು
ಚೆಕ್ ಬೌನ್ಸ್ ಆದರೆ ಆ ವ್ಯಕ್ತಿ ಚೆಕ್ ನಲ್ಲಿ ಬರೆದಿರುವ ಹಣ ಕಟ್ಟಿಕೊಡುವುದರ ಜೊತೆಗೆ ₹800 ರೂಪಾಯಿಗಳನ್ನು ದಂಡ ಕಟ್ಟಬೇಕಾಗುತ್ತದೆ. ಅದರ 2 ಅಥವಾ 3 ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಲಾಗುತ್ತದೆ. ಇಲ್ಲಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ಕೊಟ್ಟ ವ್ಯಕ್ತಿಗೂ ಕೆಲವು ಹಕ್ಕುಗಳಿವೆ, ಅವುಗಳ ಬಗ್ಗೆ ಕೂಡ ತಿಳಿದಿರಬೇಕು.
ಚೆಕ್ ಬೌನ್ಸ್ ಕೇಸ್ 7 ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೇ ಆಗಿದ್ದರೆ, ಅದಕ್ಕಾಗಿ ಜಾಮೀನು ಸಿಗುತ್ತದೆ. ಈ ರೀತಿ ಮಾಡಿಕೊಂಡಾಗ, ಕೊನೆಗೆ ಕೋರ್ಟ್ ನಲಿ ತೀರ್ಪು ಕೊಡುವವರೆಗೂ ಆ ವ್ಯಕ್ತಿ ಜೈಲಿಗೆ ಹೋಗುವುದಿಲ್ಲ.
ಕ್ರಿಮಿನಲ್ ಕೋಡ್ 389 (3) ಈ ಅಡಿಯಲ್ಲಿ ಚೆಕ್ ಬೌನ್ಸ್ ಆಗಿರುವ ವ್ಯಕ್ತಿಯ ಪೂರ್ತಿ ವಿಚಾರಣೆ ನಡೆಸಿ, ಆ ವ್ಯಕ್ತಿ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಇಂಥ ಸಮಸ್ಯೆಗಳಲ್ಲಿ ಬೀಳಬಾರದು ಎಂದರೆ, ಚೆಕ್ ಕೊಡುವಾಗ ತುಂಬಾ ಹುಷಾರಾಗಿರಿ. ಆಗ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಹಾಗೆಯೇ ನೀವು ನೆಮ್ಮದಿಯಾಗಿ ಕೂಡ ಇರಬಹುದು.
Keep these tips in mind, you may have to go to jail in Cheque Bounce Case