ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆಯ ಗಡುವು! 30 ದಿನ ಮಾತ್ರ ಅವಕಾಶ
ಆಧಾರ್ ಕಾರ್ಡ್ ಬಗ್ಗೆ ಎಚ್ಚರಿಕೆ ನೀಡಿದ UIDAI; ಈ ಕೆಲಸ ಮಾಡಲು ಕೇವಲ ಒಂದು ತಿಂಗಳು ಅವಕಾಶ!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI, ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಕೂಡ ಆಧಾರ್ ಕಾರ್ಡ್ (Aadhaar Card) ವಿತರಿಸಿದ ಪ್ರಮುಖ ಗುರುತಿನ ದಾಖಲೆ ಆಗಿದ್ದು ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಇನ್ನು ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಯುಐಡಿಎಐ ಕಾಲಕಾಲಕ್ಕೆ ತಕ್ಕಂತೆ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತದೆ ಆದರೆ ಸಾಕಷ್ಟು ಜನ ಈ ನಿಯಮಗಳನ್ನು ಪಾಲಿಸುವುದಿಲ್ಲ. ಆಧಾರ್ ಪ್ರಾಧಿಕಾರ ತಿಳಿಸಿರುವ ಹೊಸ ನಿಯಮವನ್ನು ಪಾಲನೆ ಮಾಡದೆ ಇದ್ದರೆ ಮುಂದೆ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ.
ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಿಂದ ಇಷ್ಟು ಮಾತ್ರ ಹಣ ಡ್ರಾ ಮಾಡಬಹುದು
ಆಧಾರ್ ಕಾರ್ಡ್ ಹೊಸ ನಿಯಮ!
ಆಧಾರ್ ಕಾರ್ಡ್ ಅನ್ನು ಪಡೆದುಕೊಂಡು ಹತ್ತು ವರ್ಷ ಕಳೆದರೂ ಕೂಡ ಆಧಾರ್ ಕಾರ್ಡ್ ನ ನವೀಕರಣ (Aadhaar Card update) ಮಾಡಿಕೊಳ್ಳದೆ ಇದ್ದರೆ ತಕ್ಷಣ ಅದರ ನವೀಕರಣ ಮಾಡಿಸಿಕೊಳ್ಳಿ ಎಂದು ಸರ್ಕಾರ ಈಗಾಗಲೇ ತಿಳಿಸಿದೆ.
ನಿಮ್ಮ ಆಧಾರ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ ಮೊದಲಾದ ಮಾಹಿತಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಥವಾ ನವೀಕರಿಸಿಕೊಳ್ಳಲು ಅವಕಾಶ ಇದೆ. ಈಗಾಗಲೇ ಸಾಕಷ್ಟು ಬಾರಿ ನವೀಕರಣದ ಬಗ್ಗೆ ಮಾಹಿತಿ ನೀಡಿದ್ದರೂ ಕೂಡ ಸಾಕಷ್ಟು ಜನ ಇದರ ಬಗ್ಗೆ ಗಮನವಹಿಸಿಲ್ಲ. ಇದೀಗ ಅದರ ನವೀಕರಣಕ್ಕೆ ಕೊನೆಯ ಸೂಚನೆಯನ್ನು ಯುಐಡಿಎಐ ನೀಡಿದೆ.
ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ; ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ
ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗೆ ಅವಕಾಶ! (Aadhaar Card free update)
ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಲು ಡಿಸೆಂಬರ್ 14, 2023 ಕೊನೆಯ ದಿನಾಂಕ ಎಂದು ತಿಳಿಸಲಾಗಿತ್ತು. ಆದರೆ ಜನರ ಬೇಡಿಕೆಯ ಮೇರೆಗೆ ಸರ್ಕಾರ ಈ ಗಡುವನ್ನು ವಿಸ್ತರಿಸಿದೆ. ಇದೀಗ ಮಾರ್ಚ್ 14 2024ರ ವರೆಗೆ ಅವಕಾಶ ನೀಡಲಾಗಿದೆ. ಅಂದರೆ ಇನ್ನೂ ಒಂದು ತಿಂಗಳ ಕಾಲಾವಕಾಶ ಇದ್ದು ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆ ಅಥವಾ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ
ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಸರ್ಕಾರ!
ನಾವು ಗಡುವು ವಿಸ್ತರಣೆ ಮಾಡಿದಷ್ಟು ಸಮಯ ನವೀಕರಣ ಮಾಡಿಕೊಳ್ಳಲು ಹಿಂದೇಟು ಹಾಕುತ್ತಲೇ ಇರುತ್ತೇವೆ. ಇನ್ನು ಸಮಯ ಇದೆ ಅಲ್ವಾ ಅಂತ ಸುಮ್ಮನಾಗುತ್ತೇವೆ. ಆದರೆ ಆಧಾರ್ ಕಾರ್ಡ್ ನವೀಕರಣ ವಿಚಾರದಲ್ಲಿ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು ಇನ್ನು 30 ದಿನಗಳಲ್ಲಿ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದರೆ, ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಹಾಗಾಗಿ ಸರ್ಕಾರ ಈಗ ನೀಡಿರುವ ಕೊನೆಯ ದಿನಾಂಕದ ಪ್ರಕಾರ, ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಿ, ಇಲ್ಲವಾದರೆ ಮುಂದೆ ಆಧಾರ್ ಕಾರ್ಡ್ ಅಪ್ಡೇಟ್ಗಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವುದು ನೆನಪಿರಲಿ.
Last Date to Update Aadhaar Card, do this in 30 days