ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಿಂದ ಇಷ್ಟು ಮಾತ್ರ ಹಣ ಡ್ರಾ ಮಾಡಬಹುದು

ಹೊಸ ವರ್ಷ 2024 ಆರಂಭವಾಗಿದೆ. ಈ ಹಣಕಾಸು ವರ್ಷದಲ್ಲಿ ಹಣಕಾಸು ವ್ಯವಹಾರ (Financial transaction) ಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳ ಬದಲಾವಣೆ ಮಾಡಲಾಗಿದೆ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಖಾತೆ (bank account) ಯಿಂದ ಎಷ್ಟು ಹಣವನ್ನು ಹಿಂಪಡೆಯಬಹುದು ಎನ್ನುವುದಕ್ಕೂ ಕೂಡ ತೆರಿಗೆ ನಿಯಮಗಳು ಅನ್ವಯವಾಗುತ್ತವೆ.
ಜನರು ಉಳಿತಾಯ ಖಾತೆ (savings account) ಯನ್ನು ಹೊಂದಿರುವುದು ಸರ್ವೇಸಾಮಾನ್ಯ. ನಾವು ಬ್ಯಾಂಕ್ ಮೂಲಕ ಯಾವುದೇ ಹಣಕಾಸಿನ ವ್ಯವಹಾರ ಮಾಡುದಿದ್ದರೆ ಬ್ಯಾಂಕ್ ನಲ್ಲಿ ಕನಿಷ್ಠ ಒಂದು ಖಾತೆಯನ್ನಾದರೂ ಹೊಂದಿರಲೇಬೇಕು.
ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ; ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ
ಇನ್ನು ಬ್ಯಾಂಕ್ ಖಾತೆಯಲ್ಲಿ ಅದರಲ್ಲೂ ಉಳಿತಾಯ ಖಾತೆಯಲ್ಲಿ ಸಾಕಷ್ಟು ಜನ ತಮ್ಮ ಬಳಿ ಇರುವಷ್ಟು ಹಣವನ್ನು ಡಿಪೋಸಿಟ್ (deposit)ಇಡುತ್ತಾರೆ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುತ್ತಾರೆ.
ಆದ್ರೆ ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆ ಹಣವನ್ನು ಹಿಂಪಡೆಯುವ ಅಗತ್ಯ ಬರಬಹುದು ಆದರೆ ನೀವು ಬ್ಯಾಂಕ್ ನಲ್ಲಿ ಎಷ್ಟು ಹಣವನ್ನು ಒಂದು ಆರ್ಥಿಕ ವರ್ಷದಲ್ಲಿ ಹಿಂಪಡೆಯಬಹುದು ಎನ್ನುವುದಕ್ಕೂ ತೆರಿಗೆ ನಿಯಮಗಳು ಅನ್ವಯವಾಗುತ್ತವೆ.
ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ
ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ! (Income Tax department new rules)

ನಿಮಗೆಲ್ಲ ತಿಳಿದಿರುವ ಹಾಗೆ ಎಟಿಎಂ (ATM) ಮೂಲಕ ಹಣವನ್ನು ಹಿಂಪಡೆದರೆ ಅದಕ್ಕೆ ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ ಆದರೆ ಈಗ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ ಹಣ ಹಿಂಪಡೆದರು ಕೂಡ ಆದಾಯ ತೆರಿಗೆ ಇಲಾಖೆ ವಿಧಿಸಿದ ಮಿತಿಯಷ್ಟೇ ಹಣವನ್ನು ಹಿಂಪಡೆಯಬಹುದು.
ಚಿನ್ನದ ಬೆಲೆ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್; ಇಲ್ಲಿದೆ ಡೀಟೇಲ್ಸ್
ಎಷ್ಟು ಹಣವನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯಬಹುದು ಗೊತ್ತಾ?
ಬ್ಯಾಂಕ್ ಖಾತೆಯಿಂದ ನಾವು ಇಟ್ಟು ಎಲ್ಲ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು ಅಥವಾ ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಹಣವನ್ನು ಬೇಕಾದರೂ ಮಾಡಬಹುದು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಹಾಗೇನಾದ್ರೂ ನೀವು ಆದಾಯ ತೆರಿಗೆ ಇಲಾಖೆಯ ಈ ನಿಯಮ ತಿಳಿದುಕೊಳ್ಳದೆ ಹಣಕಾಸಿನ ವ್ಯವಹಾರ ಮಾಡಿದ್ರೆ ಮುಂದೆ ಸಮಸ್ಯೆ ಉಂಟಾಗಬಹುದು.
ಆದಾಯ ತೆರಿಗೆ ಕಾಯಿದೆ ಸೆಕ್ಷನ್ 194N ಅಡಿಯಲ್ಲಿ ಒಬ್ಬ ವ್ಯಕ್ತಿ ಒಂದು ಆರ್ಥಿಕ ವರ್ಷ (financial year) ದಲ್ಲಿ 20 ಲಕ್ಷ ರೂಪಾಯಿಗಳ ವರೆಗೆ ಹಿಂಬಡೆಯಬಹುದು. ಇದಕ್ಕಿಂತಲೂ ಹೆಚ್ಚಿನ ಹಣವನ್ನು ಮಾಡಿದರೆ ಅದಕ್ಕೆ ಟಿ ಡಿ ಎಸ್ ಪಾವತಿಸಬೇಕು.
ಹಳೆ ಮನೆ ರಿಪೇರಿಗೂ ಸಿಗುತ್ತೆ ಲೋನ್! ಟಾಪ್-ಅಪ್ ಹೋಮ್ ಲೋನ್ ಬಗ್ಗೆ ತಿಳಿಯಿರಿ
ಈ ನಿಯಮ ಯಾರಿಗೆ ಅನ್ವಯವಾಗುತ್ತದೆ?
ಆದಾಯ ತೆರಿಗೆ ಇಲಾಖೆಯ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಸತತವಾಗಿ ಮೂರು ವರ್ಷಗಳಿಂದ ಯಾರು ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) ಸಲ್ಲಿಸಿಲ್ಲವೋ ಅಂತವರಿಗೆ ಮಾತ್ರ ಅನ್ವಯವಾಗುತ್ತದೆ.
ಆದರೆ ಐಟಿಆರ್ ಅನ್ನ ಪ್ರತಿ ವರ್ಷ ಸರಿಯಾಗಿ ಪಾವತಿ ಮಾಡುವವರಿಗೆ ಹೆಚ್ಚಿನ ಬೆನಿಫಿಟ್ ಇದೆ. ಸರಿಯಾಗಿ ಐಟಿಆರ್ ರಿಟರ್ನ್ ಸಲ್ಲಿಸುವವರು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಹಾಗೂ ಸಹಕಾರಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಒಂದು ವರ್ಷದಲ್ಲಿ ಒಂದು ಕೋಟಿ ರೂಪಾಯಿಗಳ ವರೆಗೆ ಹಣವನ್ನು ಹಿಂಪಡೆಯಬಹುದು.
ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡೋಕು ಮುನ್ನ ತಿಳಿದಿರಬೇಕಾದ ವಿಚಾರಗಳಿವು
ಎಷ್ಟು ಟಿಡಿಎಸ್ ಪಾವತಿಸಬೇಕು?
ಇನ್ನು ಐಟಿಆರ್ ಅನ್ನು ಮೂರು ವರ್ಷದಿಂದ ಪಾವತಿ ಮಾಡದೆ ಇರುವವರು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಒಂದು ಆರ್ಥಿಕ ವರ್ಷದಲ್ಲಿ ಹಿಂಪಡೆದುಕೊಂಡಾಗ 2% TDS ಪಾವತಿ ಮಾಡಬೇಕು. ಅದೇ ರೀತಿ ಒಂದು ಕೋಟಿ ರೂಪಾಯಿಗಳನ್ನು ಹಿಂಪಡೆದರೆ 5% ನಷ್ಟು ಟಿಡಿಎಸ್ ಕಟ್ ಆಗುತ್ತದೆ.
Henceforth you can withdraw only this amount from your bank account



