ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ

Story Highlights

Home Loan : 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಗೃಹ ಸಾಲ ಬೇಕೆ? ಈ ಬ್ಯಾಂಕುಗಳು ನಿಮ್ಮ ನೆರವಿಗೆ ಬರುತ್ತವೆ, ಇಲ್ಲಿದೆ ಮಾಹಿತಿ

Home Loan : ಸ್ವಂತ ಮನೆ (Own House) ಹೊಂದುವುದು ಹಲವಾರು ಮಂದಿಯ ಅಥವಾ ಸಾಮಾನ್ಯವಾಗಿ ಎಲ್ಲರ ದೊಡ್ಡ ಕನಸಾಗಿರುತ್ತದೆ. ಜೀವನದಲ್ಲಿ ಮನೆ ಖರೀದಿ ಅಥವಾ ಗೃಹ ನಿರ್ಮಾಣ ಎನ್ನುವುದು ಒಂದು ದೊಡ್ಡ ಸಾಧನೆ ಎಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡಿರುತ್ತಾರೆ.

ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆ ಹೀಗೆಯೇ ಇರಬೇಕು ಎಂಬ ಕಲ್ಪನೆ ಇರುತ್ತದೆ, ಅದೇ ಪ್ರಕಾರ ಮನೆ ಕಟ್ಟಿ ಅದರಲ್ಲಿ ವಾಸಿಸುವ ಸಾರ್ಥಕತೆಯೇ ಬೇರೆ.
ಮನೆ ಕಟ್ಟುವುದು ಅಥವಾ ಮನೆ ಖರೀದಿ ಎಂದ ಕೂಡಲೇ ಎಲ್ಲರೂ ಬ್ಯಾಂಕುಗಳ (Bank) ಮೊರೆ ಹೋಗುವುದು ಸಾಮಾನ್ಯ.

ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ

ಯಾರ ಬಳಿಯೂ ತಮ್ಮ ಕನಸಿನ ಮನೆಯನ್ನು ಒಂದೇ ಬಾರಿ ಹಣ ನೀಡಿ ಖರೀದಿಸುವಷ್ಟು ಹಣ ಸೇವ್ ಆಗಿರುವುದಿಲ್ಲ. ಇದರಿಂದಾಗಿ ಬ್ಯಾಂಕುಗಳಿಂದ ನೆರವು ಪಡೆದು ಮನೆ ಖರೀದಿ ಅಥವಾ ಮನೆ ಕಟ್ಟುವುದು ಸಾಮಾನ್ಯ ವಿಷಯವಾಗಿದೆ.

ಸಣ್ಣ ಮೊತ್ತದ ಸಾಲ (Loan) ಎಂದಾದಲ್ಲಿ ಹಲವಾರು ಬ್ಯಾಂಕುಗಳು ಸಾಲ (Bank Loan) ನೀಡಲು ಮುಂದಾಗುತ್ತಿರುತ್ತವೆ, ಆದರೆ 50 ಲಕ್ಷಗಳಿಗಿಂತ ಮೇಲಿನ ಸಾಲ ಬೇಕಾಗಿದ್ದಲ್ಲಿ ಯಾವ ಬ್ಯಾಂಕ್ ಉತ್ತಮವಾಗಿರುತ್ತದೆ ಹಾಗೂ ಎಲ್ಲಿ ಯಾವ ರೀತಿಯ ಬಡ್ಡಿಯ ದರಗಳು ಇರುತ್ತವೆ ಎಂಬುದನ್ನು ಇಂದು ನೋಡೋಣ.

ಈ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೂ ಸಿಗುತ್ತೆ 11 ಸಾವಿರ ರೂಪಾಯಿ ಎಜುಕೇಶನ್ ಸ್ಕಾಲರ್ಶಿಪ್!

Home Loanಐಸಿಐಸಿಐ ಬ್ಯಾಂಕ್ – ICICI Bank

50 ಲಕ್ಷಗಳ ಮೇಲಿನ ಗೃಹ ಸಾಲಕ್ಕೆ (Home Loan) ಐಸಿಐಸಿಐ ಬ್ಯಾಂಕ್ ಒಂದು ಉತ್ತಮ ಆಯ್ಕೆಯಾಗಿದೆ. ಸಾಲದ ಮೊತ್ತವು 35 ಲಕ್ಷ ಮತ್ತು 75 ಲಕ್ಷಗಳ ನಡುವೆ ಇದ್ದಾಗ ಈ ಬ್ಯಾಂಕ್ ಸಂಬಳ ಪಡೆಯುವ ವ್ಯಕ್ತಿಗಳಿಗೆ 9.5 ರಿಂದ 9.8 ಶೇಕಡಾ ಬಡ್ಡಿ ದರದಲ್ಲಿ ಹಾಗೂ ಸ್ವಯಂ ಉದ್ಯೋಗಿಗಳಿಗೆ 9.65 ರಿಂದ 9.95 ಶೇಕಡಾ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದೇ ಸಾಲದ ಮೊತ್ತವು 75 ಲಕ್ಷಕ್ಕಿಂತ ಹೆಚ್ಚಾದಲ್ಲಿ ಬಡ್ಡಿ ದರ ಸ್ವಲ್ಪ ಹೆಚ್ಚಾಗುತ್ತದೆ. ಸಂಬಳ ಪಡೆಯುವ ವ್ಯಕ್ತಿಗಳಿಗೆ 9.6 ರಿಂದ 9.9 ಮತ್ತು ಸ್ವಯಂ ಉದ್ಯೋಗಿಗಳಿಗೆ 9.75 ರಿಂದ 10.05 ಶೇಕಡ ಬಡ್ಡಿ ನೀಡಲಾಗುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ – HDFC Bank

ಎಚ್ ಡಿ ಎಫ್ ಸಿ ಬ್ಯಾಂಕ್ ಕೂಡ ಈ ಮೊತ್ತದ ಸಾಲವನ್ನು ನೀಡುತ್ತದೆ ಇಲ್ಲಿ ಬಡ್ಡಿ ದರಗಳು 8.9 ರಿಂದ 9.6 ರ ನಡುವೆ ಇರುತ್ತವೆ. ಇನ್ನು ಇವರ ಬಳಿ ಸಿಗುವ ವಿಶೇಷ ಗೃಹ ಸಾಲದ ಬಡ್ಡಿದರವು 8.55 ರಿಂದ 9.1 ಶೇಕಡ ತನಕ ಇರುತ್ತದೆ.

ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಎಸ್ ಬಿ ಐ ಗೃಹ ಸಾಲ – State Bank Of India

State Bank Of Indiaದೇಶದ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇಷ್ಟು ದೊಡ್ಡ ಮೊತ್ತದ ಸಾಲವನ್ನು ನೀಡುತ್ತದೆ. ಇಲ್ಲಿ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗಿರುತ್ತದೆ. ಇಲ್ಲಿ ಸಾಲದಾರರು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಇದ್ದಾಗ 9.15 ಶೇಕಡದಿಂದ 9.55 ಶೇಕಡದಷ್ಟು ಬಡ್ಡಿಯ ದರದಲ್ಲಿ ಸಾಲಗಳನ್ನು ಪಡೆಯಬಹುದು.

ಇನ್ನು ಕ್ರೆಡಿಟ್ ಸ್ಕೋರ್ (Credit Score) 700 ರಿಂದ 749ರ ನಡುವೆ ಇದ್ದಾಗ ಬಡ್ಡಿಯ ದರಗಳು 9.35 ಯಿಂದ 9.75 ಆಗಿರುತ್ತದೆ. 650 ರಿಂದ 699ರ ಕ್ರೆಡಿಟ್ ಸ್ಕೋರ್ ಇದ್ದವರಿಗೆ ಬದಲಾಗುತ್ತದೆ ಇಲ್ಲಿ ಬಡ್ಡಿ ದರಗಳು 9.45 ರಿಂದ 9.85 ಆಗಿರುತ್ತದೆ. ಇದಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರಿದ್ದಾಗ ಬಡ್ಡಿ ದರಗಳು 9.65 ರಿಂದ 10.05% ಆಗಿರುತ್ತದೆ.

ಯಾರಿಗೆ ಸಿಕ್ಕಿದೆ ಈ ವರ್ಷದ ಗ್ಯಾಸ್ ಸಬ್ಸಿಡಿ, ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ – Punjab National Bank

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ದೊಡ್ಡಮಟ್ಟದ ಸಾಲಗಾರರಿಗೆ ಅದರಲ್ಲೂ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದವರಿಗೆ ಬಹಳ ಉತ್ತಮ ಬಡ್ಡಿ ದರಗಳನ್ನು ನೀಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 800 ಕ್ಕಿಂತ ಹೆಚ್ಚಾಗಿದ್ದಲ್ಲಿ 30 ಲಕ್ಷದ ಮೇಲಿನ ಎಲ್ಲಾ ಸಾಲಗಳಿಗೆ ಇಲ್ಲಿ 8.4ರ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

ಕ್ರೆಡಿಟ್ ಸ್ಕೋರ್ (CIBIL Score) 750ಕ್ಕಿಂತ ಹೆಚ್ಚಿದ್ದರೆ ಸಾಲದ ಬಡ್ಡಿದರ 9.45 ಆಗಿರುತ್ತದೆ. 700 ರಿಂದ 749 ಕ್ರೆಡಿಟ್ ಸ್ಕೋರ್ ಹೊಂದಿದವರಿಗೆ ಬಡ್ಡಿದರ 9.9 ಶೇಕಡ ಆಗಿರುತ್ತದೆ ಇದಕ್ಕಿಂತ ಕಮ್ಮಿ ಬಡ್ಡಿ ಕ್ರೆಡಿಟ್ ಸ್ಕೋರ್ ಇದ್ದರೆ ಬಡ್ಡಿ ದರವು 11 ಶೇಕಡ ಆಗಿರುತ್ತದೆ.

ಮನೆ ಕಟ್ಟುವ ಬಡವರಿಗೆ ಕೇಂದ್ರದಿಂದ ಸಿಗಲಿದೆ 30 ಲಕ್ಷ ರೂಪಾಯಿ! ಇಲ್ಲಿದೆ ಮಾಹಿತಿ

ಬ್ಯಾಂಕ್ ಆಫ್ ಬರೋಡಾ – Bank Of Baroda

ಇನ್ನು ಬ್ಯಾಂಕ್ ಆಫ್ ಬರೋಡಾದ ಬಗ್ಗೆ ಹೇಳುವುದಾದರೆ ಇಲ್ಲಿಯೂ ಕೂಡ ನಿಮಗೆ 50 ಲಕ್ಷಕ್ಕಿಂತ ಹೆಚ್ಚಿನ ಮತದ ಸಾಲದ ಸೌಲಭ್ಯ ಸಿಗುತ್ತದೆ ಇಲ್ಲಿ ಬಡ್ಡಿಯ ದರಗಳು 8.4 ಶೇಕಡದಿಂದ 10.6% ಬದಲಾಗುತ್ತದೆ.

Low interest home loans up to 50 lakhs are available in these banks