ರೀಲ್ಸ್ ಮಾಡಿ ಹಣ ಗಳಿಸೋ ಚಾನ್ಸ್, ಸರ್ಕಾರವೇ ಕೊಡುತ್ತೆ ದುಡ್ಡು! ಹೊಸ ಯೋಜನೆ - Make Reels and Earn

ಡಿಜಿಟಲ್ ಇಂಡಿಯಾ ಹತ್ತು ವರ್ಷದ ಪ್ರಯಾಣಕ್ಕೆ ಸರ್ಕಾರ "ರೀಲ್ ಕಾಂಟೆಸ್ಟ್" ಘೋಷಿಸಿದೆ. ಕ್ರಿಯೇಟಿವ್ ವಿಡಿಯೋ ರೀಲ್ಸ್ ಮೂಲಕ ₹15,000 ರಿವಾರ್ಡ್ ಗೆಲ್ಲುವ ಅವಕಾಶ ನೀಡಲಾಗಿದೆ.

  • “A Decade of Digital India” ರೀಲ್ ಸ್ಪರ್ಧೆ ಘೋಷಣೆ
  • 30 ರಿಂದ 60 ಸೆಕೆಂಡ್ ನಡುವೆ Reel ಮಾಡಿ ಹಣ ಸಂಪಾದನೆ ಮಾಡಿ
  • ₹15,000 ಬಹುಮಾನ ಗೆಲ್ಲುವ ಅವಕಾಶ, ಆನ್‌ಲೈನ್‌ ಮೂಲಕ ಅರ್ಜಿ

ಸರ್ಕಾರದಿಂದ Reel Contest! ನಿಮ್ಮ ಕ್ರಿಯೇಟಿವಿಟಿಗೆ ಬಹುಮಾನ

ರೀಲ್ (reel) ತಯಾರಿಸಲು ಇಷ್ಟವಿದೆಯಾ? ಅದನ್ನು ಈಗ ಸರ್ಕಾರದ contest ನಲ್ಲಿ ಭಾಗವಹಿಸಿ ಹಣ ಸಂಪಾದನೆಗೂ ಬಳಸಿಕೊಳ್ಳಬಹುದು. ಡಿಜಿಟಲ್ ಇಂಡಿಯಾ (Digital India) ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರ “A Decade of Digital India – Reel Contest” ಘೋಷಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ನಿಮಗೆ 30 ರಿಂದ 60 ಸೆಕೆಂಡಿನ ವಿಡಿಯೋ ರೀಲ್ ಮಾಡಬೇಕು. ವಿಷಯ ಎಂಥಾದರೂ ಇರಬಹುದು – ಡಿಜಿಟಲ್ ಇಂಡಿಯಾ ನಿಮ್ಮ ಜೀವನದಲ್ಲಿ ತಂದ ಬದಲಾವಣೆಗಳ ಕುರಿತಾಗಿ: ಶಿಕ್ಷಣ, ಆರೋಗ್ಯ, ವ್ಯವಹಾರ, ಸರ್ಕಾರಿ ಸೇವೆಗಳು ಅಥವಾ ಗ್ರಾಮೀಣ ಅಭಿವೃದ್ಧಿ ಎಲ್ಲವೂ ಸೇರಬಹುದು. ಇದನ್ನು ನೀವು ಕನ್ನಡ, ಹಿಂದಿ, ಇಂಗ್ಲಿಷ್ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿ ಮಾಡಬಹುದು.

ಇದನ್ನೂ ಓದಿ: ಸರಿಯಾದ ಮೊಬೈಲ್ ಸಂಖ್ಯೆ ನೀಡದ ರೈತರಿಗೆ ಪಿಎಂ ಕಿಸಾನ್ ಹಣ ಸಿಗೋಲ್ಲ

ಈ ಸ್ಪರ್ಧೆ ಎಲ್ಲಾ ಭಾರತೀಯ ನಾಗರಿಕರಿಗೆ ತೆರೆಯಲಾಗಿದ್ದು, ವೈಯಕ್ತಿಕವಾಗಿ ಅಥವಾ ತಂಡದಾಗಿ ಭಾಗವಹಿಸಬಹುದು. ನೀವು reels ಮಾಡಲು ಆಸಕ್ತರಾಗಿದ್ದರೆ, ಇದು ಒಂದು ಸ್ಮಾರ್ಟ್ ಅವಕಾಶ.

ಅರ್ಜಿ ಸಲ್ಲಿಸಲು ಮೊದಲು Reel ಅನ್ನು ಸಿದ್ಧಪಡಿಸಿ. ಅದರೊಂದಿಗೆ voice-over ಅಥವಾ background sound ಇದ್ದರೆ ಇನ್ನೂ ಉತ್ತಮ. ನಂತರ MyGov.in ನಲ್ಲಿ ಲಭ್ಯವಿರುವ ಆನ್‌ಲೈನ್ ಫಾರ್ಮ್ (form) ಅನ್ನು ಭರ್ತಿ ಮಾಡಿ. ರೀಲ್ ಅನ್ನು ನೇರವಾಗಿ ಅಪ್ಲೋಡ್ ಮಾಡಬಹುದು ಅಥವಾ Google Drive ಲಿಂಕ್‌ನ್ನು ನೀಡಬಹುದು.

ಇದನ್ನೂ ಓದಿ: ಬರೋಬ್ಬರಿ ₹9,999 ಡಿಸ್ಕೌಂಟ್! ಹೊಸ ದರದಲ್ಲಿ ಸ್ಯಾಮ್ಸಂಗ್ 5G ಫೋನ್

Government Reels Contest

ವಿಜೇತರಿಗೆ ನಗದು ಬಹುಮಾನ ಬಹಳ ಆಕರ್ಷಕವಾಗಿದೆ. 10 ಜನ ಟಾಪ್ ಕ್ರಿಯೇಟರ್‌ಗಳಿಗೆ ₹15,000, 25 ಜನರಿಗೆ ₹10,000 ಮತ್ತು ಇನ್ನೂ 50 ಜನರಿಗೆ ₹5,000 ನೀಡಲಾಗುತ್ತದೆ. ಇದಲ್ಲದೆ ನಿಮ್ಮ ರೀಲ್‌ಗಳು ಸರ್ಕಾರದ ಅಧಿಕೃತ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಹಾಗೂ MyGov ನ್ಯೂಸ್‌ಲೆಟರ್‌ಗಳಲ್ಲಿ ಪ್ರಕಟಗೊಳ್ಳುತ್ತವೆ.

ಇದನ್ನೂ ಓದಿ: 2ನೇ ಮದುವೆ ಆದ ಮಹಿಳೆಗೆ ಮೊದಲ ಗಂಡನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಕೋರ್ಟ್ ತೀರ್ಪು

ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆ ದಿನಾಂಕ ಆಗಸ್ಟ್ 1, 2025. ಹೀಗಾಗಿ ತಡ ಮಾಡದೇ ನಿಮ್ಮ entry ಅನ್ನು ಸಲ್ಲಿಸಿ.

ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.

Make Reels and Earn 15,000 in Govt Contest

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories