ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವಂತಿಲ್ಲ! ಹೊಸ ರೂಲ್ಸ್ ತಿಳಿಯಿರಿ
ಬ್ಯಾಂಕ್ ನಲ್ಲಿ ನಿಮ್ಮದೇ ಉಳಿತಾಯ ಖಾತೆ (Bank savings account) ಯಲ್ಲಿ ಹಣವನ್ನು ಇಡುವುದಕ್ಕೂ ಮಿತಿ ವಿಧಿಸಲಾಗಿದೆ. ಅದೇ ರೀತಿ ನೀವು ಮನೆಯಲ್ಲಿ ಹಣ ಇಟ್ಟುಕೊಳ್ಳುವುದಕ್ಕೂಆದಾಯ ತೆರಿಗೆ ಇಲಾಖೆ ಮಿತಿ (Income Tax department limitation) ಯನ್ನು ವಿಧಿಸಿದೆ.
ನೀವು ಈ ಲಿಮಿಟ್ ಮೀರಿ ಅಧಿಕ ಹಣವನ್ನು ಡಿಪಾಸಿಟ್ ಇಟ್ಟರೆ ಅದಕ್ಕೆ ಹೆಚ್ಚುವರಿ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಎಷ್ಟು ಹಣ ನಿಮ್ಮ ಬಳಿ ಇಟ್ಟುಕೊಂಡರೆ ಸೇಫ್ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ!
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು! ಇಲ್ಲಿದೆ ಬಿಗ್ ಅಪ್ಡೇಟ್
ಇಂದು ಸಾಮಾನ್ಯವಾಗಿ ನಾವು ಆನ್ಲೈನ್ ಮೂಲಕವೇ ಹಣಕಾಸಿನ ವ್ಯವಹಾರವನ್ನು (online money transaction) ಮಾಡುತ್ತೇವೆ. ಹಾಗಾಗಿ ಯಾರು ಕೂಡ ನಗದು ಹಣವನ್ನು ಇಟ್ಟುಕೊಳ್ಳುವುದು ಕಡಿಮೆ. ಬ್ಯಾಂಕ ಖಾತೆಯಲ್ಲಿ ಹಣವನ್ನ ಇಟ್ಟು ಅದರ ಮೂಲಕ ಆನ್ಲೈನ್ ವಹಿವಾಟು ನಡೆಸುತ್ತೇವೆ ಆದರೆ ಕೆಲವೊಂದು ತುರ್ತು ಪರಿಸ್ಥಿತಿಗೆ ಬೇಕಾಗುತ್ತೆ ಎನ್ನುವ ಕಾರಣಕ್ಕೆ ಸಾಕಷ್ಟು ಜನ ಮನೆಯಲ್ಲಿ ಒಂದಿಷ್ಟು ಹಣವನ್ನು ಇಟ್ಟುಕೊಂಡಿರುತ್ತಾರೆ.
ಹಾಗಾದ್ರೆ ಮನೆಯಲ್ಲಿ ಎಷ್ಟು ಹಣವನ್ನು ನೀವು ಇಟ್ಟುಕೊಂಡಿರಬಹುದು ಎನ್ನುವುದಕ್ಕೆ ಆದಾಯ ತೆರಿಗೆ ಇಲಾಖೆ ಏನು ನಿಯಮವನ್ನ ಘೋಷಿಸಿದೆ ಎಂಬುದನ್ನು ನೋಡೋಣ.
ನಗದು ಹಣ ಇರಿಸಿಕೊಳ್ಳುವುದಕ್ಕೆ ಇಲ್ಲ ಮಿತಿ!
ನೀವು ಮನೆಯಲ್ಲಿ ಎಷ್ಟೋ ಹಣವನ್ನು ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಸರ್ಕಾರ ಯಾವುದೇ ಮಿತಿ ವಿಧಿಸಿಲ್ಲ. ಎಷ್ಟು ಹಣವನ್ನು ಬೇಕಾದರೂ ಮನೆಯಲ್ಲಿ ಇರಿಸಿಕೊಳ್ಳಬಹುದು. ಆದರೆ ನೀವು ಇರಿಸಿಕೊಂಡ ಪ್ರತಿಯೊಂದು ರೂಪಾಯಿಗಳಿಗೂ ಕೂಡ ಸರಿಯಾದ ಕಾನೂನಾತ್ಮಕವಾದ ರಶೀದಿ ಹೊಂದಿರಬೇಕು
ಅಂದರೆ ನ್ಯಾಯಯುತವಾಗಿ ದುಡಿದ ಹಣವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಮನೆಯಲ್ಲಿ ಇರಿಸಿಕೊಳ್ಳಬಹುದು ಯಾವುದೇ ಆದಾಯ ಇಲಾಖೆಯ ಅಧಿಕಾರಿ ನಿಮ್ಮ ಬಳಿ ಈ ಹಣಕ್ಕೆ ದಾಖಲೆಯನ್ನು ಕೇಳಿದರೆ ಅದನ್ನು ನೀವು ತಕ್ಷಣ ಒದಗಿಸುವಂತೆ ಇರಬೇಕು, ಒಂದು ವೇಳೆ ಕಾನೂನಾತ್ಮಕವಾಗಿ ನಿಮ್ಮ ಬಳಿ ದಾಖಲೆಗಳು ಇಲ್ಲದೆ ಇದ್ದರೆ ಅಂತಹ ಹಣವನ್ನು ಸರ್ಕಾರ ಅಥವಾ ಆದಾಯ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬಹುದು ಹಾಗೂ ಹೆಚ್ಚಿನ ದಂಡವನ್ನು ವಿಧಿಸಬಹುದು.
ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ
ದಾಖಲೆಗಳು ಇಲ್ಲದೆ ಇರುವ ಹಣಕ್ಕೆ ಎಷ್ಟು ದಂಡ ಪಾವತಿಸಬೇಕು?
ನಿಮ್ಮ ಬಳಿ ಇರುವ ಹಣಕ್ಕೆ ದಾಖಲೆ ಇಲ್ಲದೆ ಇದ್ದರೆ ಆದಾಯ ತೆರಿಗೆ ನೀವು ಹೆಚ್ಚಿನ ಟ್ಯಾಕ್ಸ್ (ITR filing) ಪಾವತಿ ಮಾಡಬೇಕು. ಅದರಲ್ಲೂ ನಿಮ್ಮಿಂದ ಎಷ್ಟು ಹಣವನ್ನು ಹಿಂಪಡೆದಿರುತ್ತಾರೋ ಅದರ 137% ನಷ್ಟು ಅಧಿಕ ಹಣವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಅದೇ ರೀತಿ ನೀವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು ಒಂದು ವರ್ಷಕ್ಕೆ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವುದು ಅಥವಾ ಠೇವಣಿ ಮಾಡಿದರೆ ಒಂದು ಸಲಕ್ಕೆ 50,000ಗಳನ್ನು ಹಿಂಪಡೆದರೆ ನೀವು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ.
ಬ್ಯಾಂಕ್ ನಲ್ಲಿ (Bank) ಎರಡು ಕೋಟಿಗಿಂತ ಅಧಿಕ ಹಣವನ್ನು ವಹಿವಾಟು ಮಾಡಿದರೆ ಟಿಡಿಎಸ್ ಪಾವತಿಸಬೇಕು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆಯ ಗಡುವು! 30 ದಿನ ಮಾತ್ರ ಅವಕಾಶ
30 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆಸ್ತಿ ಖರೀದಿ ಮತ್ತು ಮಾರಾಟ ಮಾಡಿದರೆ ತನಿಖಾ ಸಂಸ್ಥೆಯ ರೆಡಾರ್ ಅಡಿಯಲ್ಲಿ ಬರಬೇಕು.
ಇನ್ನು ಒಂದು ದಿನದಲ್ಲಿ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನಗದು ಹಣವನ್ನು ಪಡೆದುಕೊಳ್ಳುವಂತಿಲ್ಲ.
ಈ ಎಲ್ಲಾ ಮಿತಿಗಳು ಹಾಗೂ ನಿಮ್ಮ ಬಳಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎನ್ನುವ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡರೆ ಆದಾಯ ತೆರಿಗೆ ಇಲಾಖೆಯಿಂದ ಬೀಳಬಹುದಾದ ಹೆಚ್ಚುವರಿ ತೆರಿಗೆಯನ್ನು ಅಥವಾ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.
money than this cannot be kept at home, Know the Rules