ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ

Story Highlights

Personal Loan : ಯಾವ ಬ್ಯಾಂಕು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

Personal Loan : ಅನಿವಾರ್ಯ ಸಂದರ್ಭ (emergency time) ದಲ್ಲಿ ನಾವು ನೆರೆಹೊರೆಯವರ ಬಳಿ ಕೇಳಿ ಅಥವಾ ನಮ್ಮ ಸ್ನೇಹಿತರಿಗೂ ಸಂಬಂಧಗಳಿಗೂ ಫೋನ್ ಮಾಡಿ ಹಣ ಕೇಳುವಷ್ಟರಲ್ಲಿ ಬ್ಯಾಂಕ್ನಿಂದ ಸುಲಭವಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಅಷ್ಟರಮಟ್ಟಿಗೆ ನಾವು ಡಿಜಿಟಲ್ (digital) ಆಗಿ ಮುಂದುವರೆದಿದ್ದೇವೆ ಎಂದು ಹೇಳಬಹುದು ಯಾಕೆಂದರೆ ನೀವು ಈಗ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು ಮೊದಲಿನಂತೆ ಬ್ಯಾಂಕಿಗೆ ಅಲೆದಾಡಬೇಕಿಲ್ಲ ಬ್ಯಾಂಕ್ ನ ಕೆಲವು ನಿಯಮಗಳಿಗೆ ನೀವು ಬದ್ಧರಾಗಿದ್ದರೆ ಕೆಲವೇ ಕ್ಷಣಗಳಲ್ಲಿ ಮೊಬೈಲ್ ನಲ್ಲಿಯೇ ಆರ್ಥಿಕ ಸಹಾಯ ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆಯ ಗಡುವು! 30 ದಿನ ಮಾತ್ರ ಅವಕಾಶ

ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ನಾವು ತುರ್ತುಪರಿಸ್ಥಿತಿಯಲ್ಲಿ ತೆಗೆದುಕೊಳ್ಳುತ್ತೇವೆ. ಎಷ್ಟೇ ದುಡಿದರು ತಿಂಗಳ ಕೊನೆಯಲ್ಲಿ ಆ ಹಣ ಸಾಕಾಗುವುದಿಲ್ಲ ಎಂದು ಅನಿಸುತ್ತೆ ಅದರಲ್ಲೂ ಆಕಸ್ಮಿಕ ಖರ್ಚುಗಳು ಬಂದಾಗ ಜೆಬಿ ನಲ್ಲಿ ಹಣ ಇಲ್ಲದೆ ಇದ್ರೆ ಹೇಗೆ? ಇದಕ್ಕಾಗಿ ಬ್ಯಾಂಕ್ನಿಂದ ಸುಲಭವಾಗಿ ವೈಯಕ್ತಿಕ ಸಾಲ (personal loan) ವನ್ನು ಪಡೆದುಕೊಳ್ಳಬಹುದು.

ಆರ್‌ಬಿಐ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಅನ್ನು unsecure loan ಎಂದು ಪರಿಗಣಿಸಿದೆ. ಅಂದ್ರೆ ಯಾವುದೇ ಗ್ಯಾರೆಂಟಿ ಇಲ್ಲದೆ ವೈಯಕ್ತಿಕ ಸಾಲವನ್ನು ಬ್ಯಾಂಕ್ ಗ್ರಾಹಕನಿಗೆ ನೀಡುತ್ತದೆ. ಇದರಿಂದ ಆ ವ್ಯಕ್ತಿ ಹಣ ಹಿಂತಿರುಗಿಸದೆ ಹೋದರೆ ಬ್ಯಾಂಕ್ಗೆ ದೊಡ್ಡ ನಷ್ಟ ಉಂಟಾಗಬಹುದು ಹಾಗಾಗಿ ಸಾಮಾನ್ಯವಾಗಿ ಬ್ಯಾಂಕುಗಳು ಹೆಚ್ಚು ಬಡ್ಡಿದರವನ್ನು ವಿಧಿಸುತ್ತವೆ.

ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಿಂದ ಇಷ್ಟು ಮಾತ್ರ ಹಣ ಡ್ರಾ ಮಾಡಬಹುದು

Personal loanಬ್ಯಾಂಕ್ ನಲ್ಲಿ ಸಿಗುತ್ತೆ ಕಡಿಮೆ ಬಡ್ಡಿದರಕ್ಕೆ ವೈಯಕ್ತಿಕ ಸಾಲ! (interest rate personal loan)

* ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಂಡರೆ ನಿಗದಿಪಡಿಸಲಾಗಿರುವ ಬಡ್ಡಿ ದರ 10.75% ನಿಂದ 24% ವರೆಗೆ ಇರುತ್ತದೆ.

*ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲಕ್ಕೆ 10.65% ನಿಂದ 16% ವರೆಗಿನ ಬಡ್ಡಿ ವಿಧಿಸಿದೆ.

*ಎಸ್ ಬಿ ಐ ನ ಗ್ರಾಹಕರು ನೀವಾಗಿದ್ದರೆ 11.50% ಇಂದ 11.9%ವರೆಗಿನ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಬಹುದು.

*ಕೋಟಕ್ ಮಹಿಂದ್ರ ಬ್ಯಾಂಕ್ ತನ್ನ ಗ್ರಾಹಕರಿಗೆ 10.99 ಪರ್ಸೆಂಟ್ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ.

*IndusInd Bank ವೈಯಕ್ತಿಕ ಸಾಲದ ಮೇಲೆ 10.26%ನಿಂದ 26% ನಷ್ಟು ಬಡ್ಡಿ ವಿಧಿಸುತ್ತದೆ.

ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ; ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ

ಆಕ್ಸಿಸ್ ಬ್ಯಾಂಕ್ ನಲ್ಲಿ ನೀವು ಸಾಲ ತೆಗೆದುಕೊಳ್ಳುವುದಾದರೆ 10.65% ನಿಂದ 25% ವರೆಗೆ ಬಡ್ಡಿದರ ನಿಗದಿಪಡಿಸಲಾಗಿದೆ.

*ಪಂಜಾಬ್ ನ್ಯಾಷನಲ್ ಬ್ಯಾಂಕ್ 11.40% ಇಂದ 12.75% ವರೆಗೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ.

ಇನ್ನೂ ಬ್ಯಾಂಕ್ ಆಫ್ ಬರೋಡ ಹೆಚ್ಚು ಪ್ರಚಲಿತದಲ್ಲಿ ಇರುವ ಬ್ಯಾಂಕ್ ಆಗಿದ್ದು, ಇಲ್ಲಿ ಪಡೆದುಕೊಳ್ಳುವ ವೈಯಕ್ತಿಕ ಸಾಲಕ್ಕೆ 11.40% ಇಂದ 18.75% ವರೆಗೆ ಮೀಸಲಿಡಲಾಗಿದೆ.

*11.35 ರಿಂದ 12.45% ಬಡ್ಡಿ ದರದಲ್ಲಿ ಯೂನಿಯನ್ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.

*ಗ್ರಾಹಕ ಸ್ನೇಹಿ ಆಗಿರುವ ಐಡಿಬಿಐ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ, 10.50% ನಿಂದ 13.25% ಬಡ್ಡಿ ದರವನ್ನು ಪಾವತಿಸಬೇಕು.

ಇವಿಷ್ಟು ಪ್ರಮುಖ ಬ್ಯಾಂಕ್ಗಳಲ್ಲಿ ವೈಯಕ್ತಿಕ ಸಾಲಕ್ಕೆ ವಿಧಿಸಲಾಗಿರುವ ಬಡ್ಡಿ ದರಗಳಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಬ್ಯಾಂಕ್ ಗೆ ನೇರವಾಗಿ ಭೇಟಿ ನೀಡಿ ಅಥವಾ ಬ್ಯಾಂಕ್ ಗಳ ವೆಬ್ಸೈಟ್ನಲ್ಲಿ ಮಾಹಿತಿ ಪಡೆದುಕೊಳ್ಳಿ.

ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ

Personal loans are available at low interest rates in these banks