Story Highlights
Bank Minimum Balance : ಉಳಿತಾಯ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ನಿರ್ವಹಣೆಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಆರ್ಬಿಐ
Bank Minimum Balance : ನೀವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (savings account) ಹೊಂದಿದ್ದರೆ ಆ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ ಈ ಸುದ್ದಿ ನಿಮಗಾಗಿ.
ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ನಂತರ ಅದರಲ್ಲಿ ಹಣಕಾಸಿನ ವ್ಯವಹಾರ (financial transaction) ಮಾಡಬೇಕು ಜೊತೆಗೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು. ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ (minimum balance maintenance) ಮಾಡುವುದೇ ಇಲ್ಲ. ಈ ರೀತಿಯಾದಾಗ ಬ್ಯಾಂಕ್ ಹೆಚ್ಚುವರಿ ದಂಡವನ್ನು ಕೂಡ ವಿಧಿಸಬಹುದು.
ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ
ಆರ್ ಬಿ ಐ (RBI) ಇದೀಗ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿದೆ. ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡದೆ ಇದ್ದರೆ ಬ್ಯಾಂಕ್ ಗಳು ದಂಡ ವಿಧಿಸುತ್ತವೆ. ಕೆಲವು ಬ್ಯಾಂಕುಗಳು ವಾರ್ಷಿಕ ಪೆನಾಲ್ಟಿ (penalty) ಹಾಕಿದರೆ ಇನ್ನು ಕೆಲವು ಬ್ಯಾಂಕ್ಗಳು ಬೇರೆ ಬೇರೆ ರೀತಿಯ ಬೇರೆ ಬೇರೆ ಅವಧಿಯ ಪೆನಾಲ್ಟಿ ಹಾಕಬಹುದು. ಈಗ ಆರ್ ಬಿ ಐ ಮಿನಿಮಮ್ ಬ್ಯಾಲೆನ್ಸ್ ಕುರಿತಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಉಳಿತಾಯ ಖಾತೆ ಹೊಂದಿರುವವರಿಗೆ ಆರ್ ಬಿ ಐ ಹೊಸ ನಿಯಮ!
ಉಳಿತಾಯ ಖಾತೆಯಲ್ಲಿ ಬೇರೆ ಬೇರೆ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡುವುದಕ್ಕೆ ಬೇರೆ ಬೇರೆ ರೀತಿಯ ರೂಲ್ಸ್ ಅನ್ನು ಇಟ್ಟಿದೆ. ಕೆಲವು ಬ್ಯಾಂಕ್ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಕನಿಷ್ಠ 500 ರೂಪಾಯಿಗಳು ಇದ್ದರೆ ಇನ್ನು ಕೆಲವು ಬ್ಯಾಂಕ್ಗಳಲ್ಲಿ ಹತ್ತು ಸಾವಿರ ರೂಪಾಯಿಗಳವರೆಗೂ ಇರುತ್ತದೆ.
ಹಾಗಾಗಿ ಗ್ರಾಹಕರಿಗೆ ಆರ್ಥಿಕವಾಗಿ ಹೊರೆ ಆಗುತ್ತಿರುವ ಈ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಸಂಬಂಧಪಟ್ಟ ಹಾಗೆ ಆರ್ ಬಿ ಐ ತನ್ನ ಹೊಸ ಸುತ್ತೋಲೆಯನ್ನು ಹೊರಡಿಸಿದೆ ಈ ಸುತ್ತೋಲೆಯ ಪ್ರಕಾರ ಯಾವುದೇ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಅನ್ನು ಉಳಿತಾಯ ಖಾತೆಯಲ್ಲಿ ಹೊಂದಿಲ್ಲದೆ ಇದ್ದರೆ ಅಂತವರಿಗೆ ಹೆಚ್ಚುವರಿ ದಂಡ ವಿಧಿಸುವಂತಿಲ್ಲ ಎಂದು ತಿಳಿಸಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆಯ ಗಡುವು! 30 ದಿನ ಮಾತ್ರ ಅವಕಾಶ
ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆಯ ನಿಯಮದಲ್ಲಿ ಬದಲಾವಣೆ!
ಆರ್ ಬಿ ಐ 2014 ನವೆಂಬರ್ 20ರಲ್ಲಿಯೇ ಈ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಇದರ ಬಗ್ಗೆ ಯಾರು ಹೆಚ್ಚಾಗಿ ಗಮನ ವಹಿಸಿಲ್ಲ ಎನ್ನುವ ಕಾರಣಕ್ಕೆ ಮತ್ತೆ ಈಗ ಬ್ಯಾಂಕ್ ಹಾಗೂ ಗ್ರಾಹಕರ ಗಮನಕ್ಕೆ ಮಿನಿಮಮ್ ಬ್ಯಾಲೆನ್ಸ್ ಪ್ರಸ್ತಾವನೆಯನ್ನು ಹೊರಡಿಸಲಾಗಿದೆ.
ಬ್ಯಾಂಕ್ ಗಳು ಗ್ರಾಹಕರಿಗೆ ಅವರ ಖಾತೆಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಆಗುತ್ತಿಲ್ಲ ಎಂದಾದರೆ ತಕ್ಷಣ ಗ್ರಾಹಕರ ಗಮನಕ್ಕೆ ತರಬೇಕು. ಅದೇ ರೀತಿಯಾಗಿ ಶುಲ್ಕ ವಿಧಿಸಿದರೆ ಅವುಗಳ ಬಗ್ಗೆಯೂ ಮಾಹಿತಿ ನೀಡಬೇಕು. ಗ್ರಾಹಕರಿಗೆ ಗೊತ್ತಿಲ್ಲದೆ ಇರುವ ಹಾಗೆ ಯಾವುದೇ ರೀತಿಯ ದಂಡ ಅಥವಾ ಶುಲ್ಕ ವಿಧಿಸುವಂತಿಲ್ಲ.
ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಿಂದ ಇಷ್ಟು ಮಾತ್ರ ಹಣ ಡ್ರಾ ಮಾಡಬಹುದು
ಬ್ಯಾಂಕ್ ನ ಈ ನಿಯಮ ನಿಮಗೂ ತಿಳಿದಿರಲಿ
ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ಮಿನಿಮಮ್ ಬ್ಯಾಲೆನ್ಸ್ ಮೆಂಟೇನೆನ್ಸ್ ಮಾಡುವುದು ಕಡ್ಡಾಯವಾಗಿದೆ. ಆದರೆ ಒಂದು ವೇಳೆ ನೀವು ಈ ರೀತಿ ನಿರ್ವಹಣೆ ಮಾಡದೇ ಇದ್ದರೆ ನಿಮ್ಮ ಖಾತೆ – ಬ್ಯಾಲೆನ್ಸ್ (minus balance) ಅನ್ನು ತಲುಪುತ್ತದೆ.
ಒಂದು ವೇಳೆ ನೀವು ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಿದರೆ ತಕ್ಷಣ ಅದು ದಂಡಕ್ಕೆ ಜಮಾ ಮಾಡಲಾಗುತ್ತದೆ. ಇನ್ನು ಹೆಚ್ಚಿನ ಮೊತ್ತವನ್ನು ನೀವು ಬ್ಯಾಂಕ್ ಖಾತೆಯಲ್ಲಿ ಇರಿಸಿದರೆ ಆಗ ದಂಡದ ಮೊತ್ತ ಕಡಿತಗೊಳಿಸಿ ಉಳಿದ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ಹೀಗಾಗಿ ಬ್ಯಾಂಕ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಸುಖ ಸುಮ್ಮನೆ ಹೆಚ್ಚುವರಿ ದಂಡವನ್ನು ಪಾವತಿಸಬೇಕು.
ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನು ಹೊಂದಿದ್ದು ನೀವು ಉಳಿತಾಯ ಖಾತೆ ಆರಂಭಿಸುವುದಕ್ಕೂ ಮೊದಲು ಬ್ಯಾಂಕನ್ನು ನಿಯಮ ತಿಳಿದುಕೊಂಡು ಖಾತೆ ಆರಂಭಿಸುವುದು ಹೆಚ್ಚು ಆರ್ಥಿಕವಾಗಿ ಪ್ರಯೋಜನಕಾರಿ ಆಗಲಿದೆ.
ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ
Big Update for Keeping minimum balance in your bank account