ವರ್ಷದ 365 ದಿನ ರಿಚಾರ್ಜ್ ಮಾಡೋ ಅಗತ್ಯಾನೇ ಇಲ್ಲ, ಹೊಸ BNSL ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

ಇದೀಗ BSNL ತಮ್ಮ ಗ್ರಾಹಕರಿಗಾಗಿ 1 ವರ್ಷದ ಕೆಲವು ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಇವುಗಳ ವ್ಯಾಲಿಡಿಟಿ ಪೂರ್ತಿ 365 ದಿನಗಳ ಕಾಲ ಸಿಗಲಿದೆ.

Bengaluru, Karnataka, India
Edited By: Satish Raj Goravigere

ಪ್ರಸ್ತುತ ನಮ್ಮ ದೇಶದಲ್ಲಿ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್ ಗಳ (Recharge Plan) ಬೆಲೆ ಏರಿಕೆ ಮಾಡಿ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಏರ್ಟೆಲ್ (Airtel), ಜಿಯೋ (Jio), ವೊಡಾಫೋನ್ ಈ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಇದ್ದಕ್ಕಿದ್ದಂತ ಪ್ರೀಪೇಯ್ಡ್ ರೀಚಾರ್ಜ್ (Prepaid Recharge) ಪ್ಲಾನ್ ಗಳ ಬೆಲೆ ಏರಿಸಿ, ಗ್ರಾಹಕರಿಗೆ ಅಸಮಾಧಾನ ತಂದಿತ್ತು.

ಇದ್ದಕ್ಕಿದ್ದಂತೆ ಪ್ಲಾನ್ ಗಳ ಮೇಲೆ 100 ರೂಪಾಯಿ ಹೆಚ್ಚಾಗಿದ್ದಕ್ಕೆ, ಗ್ರಾಹಕರು ಆತಂಕಕ್ಕೆ ಒಳಗಾಗಿದ್ದು ಹೌದು, ಈ ಕಾರಣಕ್ಕೆ ಹೆಚ್ಚು ಜನರು BSNL ನೆಟ್ವರ್ಕ್ ಮೊರೆ ಹೋಗುತ್ತಿದ್ದಾರೆ.

New BNSL Recharge Plan Launched with 365 days validity

ಹೌದು, ಬಹಳಷ್ಟು ಜನರು ಸರ್ಕಾರದ್ದೇ ಆಗಿರುವ BSNL ಟೆಲಿಕಾಂ ನೆಟ್ವರ್ಕ್ ಮೊರೆ ಹೋಗುತ್ತಿದ್ದಾರೆ. BSNL ನಲ್ಲಿ ಬೇರೆ ನೆಟ್ವರ್ಕ್ ಗಳ ಥರ ಇಲ್ಲದೇ, ಕಡಿಮೆ ಬೆಲೆಗೆ ಒಳ್ಳೆಯ ರೀಚಾರ್ಜ್ ಪ್ಲಾನ್ ಗಳು ಲಭ್ಯವಿದೆ.

ಇವುಗಳು ಕಡಿಮೆ ಬೆಲೆಯ ಜೊತೆಗೆ, ಅತ್ಯುತ್ತಮವಾದ ರೀಚಾರ್ಜ್ ಪ್ಲಾನ್ ಗಳನ್ನು ಸಹ ಹೊಂದಿದೆ. 1 ವರ್ಷದ ವ್ಯಾಲಿಡಿಟಿ ಇರುವ ಪ್ಲಾನ್ ಗಳು ಕೂಡ, ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿರುವುದು ಅಪರೂಪ ಆಗಿದೆ..ಹಾಗಿದ್ದಲ್ಲಿ ಈ ಪ್ಲಾನ್ ಬಗ್ಗೆ ಮಾಹಿತಿ ತಿಳಿಯೋಣ..

ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ, ಇನ್ಮುಂದೆ ಪೋಸ್ಟ್ ಆಫೀಸ್‌ನಲ್ಲೇ ಸಿಗುತ್ತೆ 90 ಸಾವಿರ ಪರ್ಸನಲ್ ಲೋನ್!

1 ವರ್ಷದ BSNL ರೀಚಾರ್ಜ್ ಪ್ಲಾನ್:

*ಇದೀಗ BSNL ತಮ್ಮ ಗ್ರಾಹಕರಿಗಾಗಿ 1 ವರ್ಷದ ಕೆಲವು ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಇವುಗಳ ವ್ಯಾಲಿಡಿಟಿ ಪೂರ್ತಿ 365 ದಿನಗಳ ಕಾಲ ಸಿಗಲಿದೆ. ಇದು 1999 ರೂಪಾಯಿಗಳ ರೀಚಾರ್ಜ್ ಪ್ಲಾನ್ ಆಗಿದ್ದು, ಇದರಲ್ಲಿ ಇಡೀ ಒಂದು ವರ್ಷಗಳ ಕಾಲ ಯಾವುದೇ ನೆಟ್ವರ್ಕ್ ಗೆ ಅನಿಯಮಿತವಾಗಿ ಕಾಲ್ ಮಾಡಬಹುದು.. ಹಾಗೆಯೇ OTT ಚಂದಾದಾರಿಕೆ ಸಿಗುತ್ತದೆ. ಅದರ ಜೊತೆಗೆ 600 GB ಡೇಟಾ ಕೂಡ ಸಿಗುತ್ತದೆ. ಇದಿಷ್ಟು ₹1999 ರೂಪಾಯಿಗಳ ಪ್ಲಾನ್ ನಲ್ಲಿ ಲಭ್ಯವಿದ್ದು, ಆಸಕ್ತಿ ಇರುವವರು ರೀಚಾರ್ಜ್ ಮಾಡಿಸಿಕೊಳ್ಳಬಹುದು.

*ಮತ್ತೊಂದು ಪ್ಲಾನ್ 1499 ರೂಪಾಯಿಗಳ ರೀಚಾರ್ಜ್ ಪ್ಲಾನ್ ಆಗಿದೆ. ಇದರಲ್ಲಿ ದಿನಕ್ಕೆ 100 ಉಚಿತ ಎಸ್.ಎಂ.ಎಸ್, ಅನಿಯಮಿತ ಕರೆಗಳು ಸಿಗುತ್ತದೆ. ಜೊತೆಗೆ 24 Gb ಡೇಟಾ ಸಿಗುತ್ತದೆ. ಡೇಟಾ ಲಿಮಿಟ್ ಮುಗಿದ ನಂತರ 40kbps ಸ್ಪೀಡ್ ನಲ್ಲಿ ಡೇಟಾ ಬಳಕೆ ಮಾಡಬಹುದು.

ಇದು 366 ದಿನಗಳ ಪ್ರೀಪೇಯ್ಡ್ ಯೋಜನೆ ಆಗಿದೆ. ಹೆಚ್ಚಾಗಿ ಡೇಟಾ ಬಳಕೆ ಮಾಡದೇ ಇರುವವರಿಗೆ ಇದು ಒಳ್ಳೆಯ ಯೋಜನೆ ಆಗಿದೆ..ಈ ಪ್ಲಾನ್ ಅನ್ನು ಕೂಡ ಆಸಕ್ತಿ ಇರುವವರು ರೀಚಾರ್ಜ್ ಮಾಡಿಸಿಕೊಳ್ಳಬಹುದು..

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಇಎಂಐ ಕಟ್ಟಲಾಗದವರಿಗೆ ಬಂಪರ್ ಸುದ್ದಿ! ನೆಮ್ಮದಿಯ ವಿಚಾರ

*ಮತ್ತೊಂದು ಪ್ಲಾನ್ 2999 ರೂಪಾಯಿಯ ರೀಚಾರ್ಜ್ ಪ್ಲಾನ್ ಆಗಿದೆ. ಇದು ಪೂರ್ತಿ ಒಂದು ವರ್ಷ 365 ದಿನಗಳ ಕಾಲ ಸೇವೆ ಕೊಡುವಂಥ ಪ್ರೀಪೇಯ್ಡ್ ಪ್ಲಾನ್ ಆಗಿದೆ. ಈ ಒಂದು ಪ್ಲಾನ್ ನಲ್ಲಿ ಜನರಿಗೆ ದಿನಕ್ಕೆ 3GB ಡೇಟಾ ಸಿಗುತ್ತದೆ, ಹಾಗೆಯೇ ಪ್ರತಿದಿನ 100 ಉಚಿತ SMS ಸಿಗುತ್ತದೆ, ಹಾಗೆಯೇ ಎಲ್ಲಾ ನೆಟ್ವರ್ಕ್ ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಿಗುತ್ತದೆ. ದಿನದ 3Gb ಡೇಟಾ ಮುಗಿದರೆ, 40 kbps ಸ್ಪೀಡ್ ನಲ್ಲಿ ಇಂಟರ್ನೆಟ್ ವರ್ಕ್ ಆಗುತ್ತದೆ. ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

*2399 ರೂಪಾಯಿಗಳ ಮತ್ತೊಂದು ರೀಚಾರ್ಜ್ ಪ್ಲಾನ್ ಅನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ನಿಮಗೆ 1 ವರ್ಷದ ವ್ಯಾಲಿಡಿಟಿ ಸಿಗುತ್ತದೆ, ದಿನಕ್ಕೆ 2Gb ಡೇಟಾ, ಅನಿಯಮಿತ ಕರೆಗಳು, ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳ ಸೌಲಭ್ಯ ಸಿಗುತ್ತದೆ. ಗ್ರಾಹಕರು ಈ ರೀಚಾರ್ಜ್ ಪ್ಲಾನ್ ಗಳ ಸೌಲಭ್ಯ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಂಪರ್ ಸುದ್ದಿ, ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಡಬಲ್ ಲಾಭ!

New BNSL Recharge Plan Launched with 365 days validity