2000 ರೂಪಾಯಿಗಿಂತ ಹೆಚ್ಚು PhonePe ಮಾಡಿದ್ರೆ ಟ್ಯಾಕ್ಸ್! ಬಿಗ್ ನ್ಯೂಸ್ - UPI Transactions
₹2000 ಕ್ಕಿಂತ ಹೆಚ್ಚು UPI ವಹಿವಾಟಿಗೆ ಟ್ಯಾಕ್ಸ್ (GST) ಇದೆ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು. ಆದರೆ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿದೆ, ಇದು ಸಂಪೂರ್ಣ ಸುಳ್ಳು, ಜನರು ಭಯಪಡುವ ಅಗತ್ಯವಿಲ್ಲ.

- ₹2000 ಮೇಲ್ಪಟ್ಟ UPI ವಹಿವಾಟಿಗೆ ಟ್ಯಾಕ್ಸ್ ಇಲ್ಲ
- ಕೇಂದ್ರ ಸರ್ಕಾರ ನೀಡಿದ ಸ್ಪಷ್ಟನೆ
- ಈ ಬಗ್ಗೆ ಯಾವುದೇ ತೆರಿಗೆ ವಿಧಿಸುವ ಪ್ರಶ್ನೆ ಇಲ್ಲ
UPI Transactions : ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ₹2000 ಕ್ಕಿಂತ ಹೆಚ್ಚು UPI transactions ಮೇಲೆ GST ವಿಧಿಸಲಾಗುತ್ತದೆ ಎಂಬ ಸುದ್ದಿಗಳು ಭೀತಿಯನ್ನು ಹುಟ್ಟುಹಾಕಿದವು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿ, ಅವರ ಆರ್ಥಿಕ ವ್ಯವಹಾರಗಳ ಮೇಲೆ ಅವಿಶ್ವಾಸ ಹುಟ್ಟಿಸಲು ಕಾರಣವಾಯಿತು.
ಈ ಕುರಿತು ರಾಜ್ಯಸಭೆ (Rajya Sabha) ಯಲ್ಲಿಯೂ ಪ್ರಶ್ನೆ ಕೇಳಲಾಯಿತು. ಸಂಸದ ಅನಿಲ್ ಕುಮಾರ್ ಯಾದವ್ ಈ ವಿಷಯವನ್ನು ಎತ್ತಿ ಹಿಡಿದು, ಸರ್ಕಾರ ಏನು ಯೋಜಿಸುತ್ತಿದೆ ಎಂಬುದನ್ನು ತಿಳಿಯಲು ಪ್ರಶ್ನೆ ಮಾಡಿದರು. ಉತ್ತರವಾಗಿ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಸ್ಪಷ್ಟನೆ ನೀಡುತ್ತಾ, “ಇಂತಹ ಯಾವುದೇ ಟ್ಯಾಕ್ಸ್ ವಿಧಿಸುವ ಚಿಂತನೆಯೇ ಇಲ್ಲ. GST ಕುರಿತ ನಿರ್ಧಾರಗಳು ಕೇವಲ GST ಕೌನ್ಸಿಲ್ ಶಿಫಾರಸ್ಸಿನ ಮೇರೆಗೆ ಮಾತ್ರ ಸಾಧ್ಯ,” ಎಂದು ಹೇಳಿದರು.
ಇದನ್ನೂ ಓದಿ: 5 ವರ್ಷಕ್ಕೆ ₹20 ಲಕ್ಷ ಬೇಕಾ? ಪೋಸ್ಟ್ ಆಫೀಸ್ ಸ್ಕೀಮ್ ಕೊಟ್ಟಿದೆ ಅದ್ಭುತ ಅವಕಾಶ
ಹಣಕಾಸು ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ಕೂಡಾ ಇದು ಸ್ಪಷ್ಟವಾಗಿದ್ದು, “₹2000 ದಾಟಿದ UPI ವಹಿವಾಟಿಗೆ GST ವಿಧಿಸಲಾಗುತ್ತಿಲ್ಲ. ಇಂತಹ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಜನರಲ್ಲಿ ತಪ್ಪು ಅರ್ಥ ಕಲ್ಪಿಸುತ್ತಿದೆ,” ಎಂದು ಹೇಳಿದರು. GST ಕೌನ್ಸಿಲ್ ಎಂಬುದು ಸಂವಿಧಾನಬದ್ಧ ಸಂಸ್ಥೆ ಆಗಿದ್ದು, ಅದರ ಶಿಫಾರಸ್ಸಿಲ್ಲದೇ ಯಾವುದೇ ಹೊಸ ತೆರಿಗೆ ವಿಧಿಸುವ ಪ್ರಶ್ನೆಯೇ ಇಲ್ಲ.
ಈಗಾಗಲೇ ಹಲವಾರು ಜನರು ದಿನನಿತ್ಯದ ಖರೀದಿಗಳಿಗಾಗಿ, ಪಾನ್ ಅಂಗಡಿ, ತರಕಾರಿ ಖರೀದಿ ಅಥವಾ ಆನ್ಲೈನ್ ಪೇಮೆಂಟ್ಗಾಗಿ UPI system ಅನ್ನು ಬಳಸುತ್ತಿದ್ದಾರೆ. ಇದರ ಸಹಾಯದಿಂದ ನೇರ ಹಣದ ವ್ಯವಹಾರದಿಂದ ದೂರವಿದ್ದು, ನಗದು ರಹಿತ ಆರ್ಥಿಕತೆ ಕಡೆಗೆ ದೇಶ ಸಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಬ್ಯಾಂಕ್ ಖಾತೆಗೆ ಉಚಿತ ₹6 ಲಕ್ಷ! ಮೋದಿ ಸರ್ಕಾರದಿಂದ ಸರ್ಪ್ರೈಸ್
ಪ್ರಸ್ತುತ ವ್ಯವಹಾರಗಳಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ (P2P) ಅಥವಾ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ UPI transfers ಗೆ ಯಾವುದೇ GST ವಿಧಿಸಲಾಗುತ್ತಿಲ್ಲ. ಯಾವ ಮೊತ್ತವೇ ಆದರೂ, ಟ್ಯಾಕ್ಸ್ ಇಲ್ಲ, ಎನ್ನಲಾಗಿದೆ.
ಇದೆಲ್ಲದರ ನಡುವೆ, ಸರ್ಕಾರದ ಸ್ಪಷ್ಟನೆ ಮತ್ತು ತಕ್ಷಣದ ಪ್ರತಿಕ್ರಿಯೆ ಜನರಲ್ಲಿ ಬಿಗ್ ರಿಲೀಫ್ ನೀಡಿದೆ. ಕೆಲವೆ ದಿನಗಳ ಹಿಂದೆ ಎದ್ದ ಭೀತಿಯ ಬಿರುಗಾಳಿ ಈಗ ನಿಧಾನವಾಗಿ ಶಮನವಾಗುತ್ತಿದೆ. ಡಿಜಿಟಲ್ ಪಾವತಿಯನ್ನು (digital payments) ಉತ್ತೇಜಿಸಲು ಸರ್ಕಾರ ಯತ್ನಿಸುತ್ತಿರುವ ಸಂದರ್ಭದಲ್ಲಿ, ಟ್ಯಾಕ್ಸ್ ಎಂಬ ಸುಳ್ಳು ಸುದ್ದಿಗಳಿಂದ ಜನರು ದೂರವಿರುವುದು ಅವಶ್ಯಕ.
ಇದನ್ನೂ ಓದಿ: ಬರಿ ₹2 ರೂಪಾಯಿ ಖರ್ಚು, 130ಕಿಮೀ ಮೈಲೇಜ್! ಕಮ್ಮಿ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್
ಇನ್ನೂ ಹೆಚ್ಚಿನ ಸ್ಪಷ್ಟತೆಗಾಗಿ – ಯಾವುದೇ ಹೊಸ ತೆರಿಗೆ ತರಲು, GST ಕೌನ್ಸಿಲ್ನಲ್ಲಿ ಚರ್ಚೆಯಾಗಬೇಕಾಗುತ್ತದೆ. ಅಂತಹ ಚರ್ಚೆಯೇ ಇಲ್ಲದ ಹಿನ್ನೆಲೆಯಲ್ಲಿ, ಜನತೆ ಇದನ್ನು ಗಂಭೀರವಾಗಿ ಪರಿಗಣಿಸಬಾರದು, ಎನ್ನಾಲಾಗಿದೆ.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
No GST on UPI Over 2000, Govt Clears Confusion




