ಮತ್ತೊಮ್ಮೆ ಫ್ರೀ ಗ್ಯಾಸ್ ಕನೆಕ್ಷನ್ ಕೊಡಲು ಮುಂದಾದ ಸರ್ಕಾರ! ಇಲ್ಲಿದೆ ಮಾಹಿತಿ; ಈಗಲೇ ಅರ್ಜಿ ಸಲ್ಲಿಸಿ

Story Highlights

ಇದೀಗ ಈ ವರ್ಷ ಕೂಡ ಫ್ರೀ ಗ್ಯಾಸ್ ಸಿಲಿಂಡರ್ ಕನೆಕ್ಷನ್ (Free Gas Connection) ಪಡೆಯಲು ಅರ್ಜಿ ಪ್ರಕ್ರಿಯೆ ಶುರುವಾಗಿದೆ.

ನಮ್ಮ ದೇಶದಲ್ಲಿ ಎಲ್ಲಾ ವರ್ಗದ ಜನರು ಕೂಡ ಅಡುಗೆ ಮಾಡುವುದಕ್ಕೆ ಕಷ್ಟಪಡಬಾರದು, ಹಳ್ಳಿಗಳಲ್ಲಿ ಕೂಡ ಜನರು ಎಲ್.ಪಿ.ಜಿ ಸಿಲಿಂಡರ್ ಬಳಸಬೇಕು, ಹೊಗೆಯಲ್ಲಿ ಕಷ್ಟಪಡಬಾರದು ಎಂದು ಕೇಂದ್ರ ಸರ್ಕಾರವು 2018ರಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯನ್ನು ಜಾರಿಗೆ ತಂದಿತು.

ಈ ಯೋಜನೆಯ ಮೂಲಕ 8 ಕೋಟಿಗಿಂತ ಹೆಚ್ಚು ಜನರಿಗೆ ಗ್ಯಾಸ್ ಸಿಲಿಂಡರ್ (Gas Cylinder) ಸಂಪರ್ಕವನ್ನು ಒದಗಿಸಿಕೊಡಲಾಗುತ್ತಿದೆ. ಇದೀಗ ಈ ವರ್ಷ ಕೂಡ ಫ್ರೀ ಗ್ಯಾಸ್ ಸಿಲಿಂಡರ್ ಕನೆಕ್ಷನ್ (Free Gas Connection) ಪಡೆಯಲು ಅರ್ಜಿ ಪ್ರಕ್ರಿಯೆ ಶುರುವಾಗಿದೆ.

ಉಚಿತವಾಗಿ ಸಿಗಲಿದೆ ಹೊಲಿಗೆ ಯಂತ್ರ, ಆಧಾರ್ ಕಾರ್ಡ್ ಇದ್ದರೆ ಸಾಕು! ಇಂದೇ ಅರ್ಜಿ ಸಲ್ಲಿಸಿ

ಹೌದು, ಉಜ್ವಲಾ ಯೋಜನೆಯ ಮೂಲಕ ಮನೆಯ ಮಹಿಳೆಯ ಹೆಸರಿನಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯಬಹುದು. ಇದಕ್ಕಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದೇ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡದಯೇ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯಬಹುದು.

ಇದಕ್ಕಾಗಿ ನೀವು ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯವಿರುವ ದಾಖಲೆಗಳು (Documents) ಯಾವುವು? ಫ್ರೀಗ್ಯಾಸ್ ಕನೆಕ್ಷನ್ ಪಡೆಯಲು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ? ಎಲ್ಲಾ ಮಾಹಿತಿಯನ್ನು ಇಂದು ತಿಳಿಯೋಣ..

ಹೋಮ್ ಲೋನ್, ಕಾರ್ ಲೋನ್ ಸೇರಿದಂತೆ ಯಾವುದೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಭರ್ಜರಿ ಸುದ್ದಿ

Gas Cylinderಫ್ರೀ ಗ್ಯಾಸ್ ಪಡೆಯಲು ಬೇಕಾಗಿರುವ ಅರ್ಹತೆ

*ಭಾರತ ದೇಶಕ್ಕೆ ಸೇರಿದ ಪ್ರಜೆಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
*18 ವರ್ಷ ತುಂಬಿರುವ ಯಾರೇ ಇದ್ದರು ಅರ್ಜಿ ಸಲ್ಲಿಸಬಹುದು
*ಅರ್ಜಿ ಹಾಕುವ ಮಹಿಳೆಗೆ ಪಿಎಮ್ ಉಜ್ವಲಾ ಯೋಜನೆಯ ಅಡಿಯಲ್ಲಿ ಸಾಲ ಸಿಗುತ್ತದೆ
*ಮಹಿಳೆಯ ಹತ್ತಿರ ರೇಷನ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳು ಇರಬೇಕು

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಇದು ಗೋಲ್ಡನ್ ಸುದ್ದಿ! ಇಲ್ಲಿದೆ ಫುಲ್ ಡೀಟೇಲ್ಸ್

ಅಗತ್ಯವಿರುವ ದಾಖಲೆಗಳು

*ರೇಷನ್ ಕಾರ್ಡ್ (Ration Card)
*ಆಧಾರ್ ಕಾರ್ಡ್ (Aadhaar Card)
*ಐಡಿ ಪ್ರೂಫ್
*ಸ್ವಯಂ ದೃಢೀಕರಣ ಪತ್ರ
*ಅಡ್ರೆಸ್ ಪ್ರೂಫ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ಪಾಸ್ ಪೋರ್ಟ್ ಸೈಜ್ ಫೋಟೋ

Free gas connectionಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾಹಿತಿ

*ಮೊದಲು ಇಂಧನ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
*ಹೋಮ್ ಪೇಜ್ ನಲ್ಲೇ 2024 ಉಚಿತ ಗ್ಯಾಸ್ ಸಂಪರ್ಕ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ
* ಮೊದಲಿಗೆ ನಿಮ್ಮ ಅರ್ಹತೆಯ ಬಗ್ಗೆ ಮಾಹಿತಿ ಭರ್ತಿ ಮಾಡಿ
* ಬಳಿಕ ಅಪ್ಲಿಕೇಶನ್ ಪೇಜ್ ಓಪನ್ ಆಗುತ್ತದೆ, ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
*ಬಳಿಕ ಅಪ್ಲಿಕೇಶನ್ ಸಬ್ಮಿಟ್ ಮಾಡಿ. ಈ ರೀತಿಯಾಗಿ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿ ಸ್ವಲ್ಪ ದಿನಕ್ಕೆ ನಿಮ್ಮ ಮನೆಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಸಿಗುತ್ತದೆ.

ಸೈಟ್ ಖರೀದಿ ಮಾಡೋ ಪ್ಲಾನ್ ಇದ್ಯಾ? ಈ ಬ್ಯಾಂಕುಗಳು ನೀಡುತ್ತಿವೆ ಕಡಿಮೆ ಬಡ್ಡಿಗೆ ಲೋನ್

2024 ಫ್ರೀಗ್ಯಾಸ್ ಪಟ್ಟಿ ಚೆಕ್ ಮಾಡುವ ಬಗೆ

*ಮೊದಲು pmuy.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ
*ಹೋಮ್ ಪೇಜ್ ನಲ್ಲಿ ಉಚಿತ ಗ್ಯಾಸ್ ಸಂಪರ್ಕ್ 2024 ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ನಂತರ ಬರುವ ಪೇಜ್ ನಲ್ಲಿ ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ, ಅವೆಲ್ಲವನ್ನೂ ಫಿಲ್ ಮಾಡಿ.
*ನಂತರ ಸಬ್ಮಿಟ್ ಮಾಡಿ, ಬಳಿಕ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.

Once again the government has come forward to provide free gas connection

Related Stories