ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಅವರುಗಳ ಶಿಕ್ಷಣದ ಖರ್ಚಿಗೆ ಆರ್ಥಿಕ ಸಹಾಯ ಮಾಡುವುದಕ್ಕಾಗಿ ಸರ್ಕಾರವು ಸ್ಕಾಲರ್ಶಿಪ್ (Education scholarship) ನೀಡುತ್ತಿದೆ. ಇದೀಗ ಡಿಪ್ಲೊಮಾ, ಐಟಿಐ, ಪಿಯುಸಿ ಹಾಗೂ ಎಲ್ಲಾ ಥರದ ಡಿಗ್ರಿ ಕೋರ್ಸ್ ಗಳನ್ನು ಮಾಡುತ್ತಿರುವವರಿಗೆ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..
ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಪಡೆಯುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಆಗಿದ್ದು, ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಶುರುವಾಗಿದೆ, ಕೊನೆಯ ದಿನಾಂಕ ಮುಗಿಯುವುದರ ಒಳಗೆ ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಎಲ್ಲಿ? ಹೇಗೆ ಅರ್ಜಿ ಸಲ್ಲಿಸಬೇಕು? ಯಾವೆಲ್ಲಾ ದಾಖಲೆಗಳು ಬೇಕು? ಈ ಎಲ್ಲಾ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ನೋಡಿ..
ನಿಮ್ಮತ್ರ 10 ಸಾವಿರ ಇದ್ದದ್ದೇ ಆದ್ರೆ ಈ ಬ್ಯುಸಿನೆಸ್ ಆರಂಭಿಸಿ, ತಿಂಗಳಿಗೆ 50 ಸಾವಿರ ಲಾಭ ಫಿಕ್ಸ್
ಅಗತ್ಯವಿರುವ ದಾಖಲೆಗಳು;
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ..
*10ನೇ ತರಗತಿ ಮಾರ್ಕ್ಸ್ ಕಾರ್ಡ್
*ಹಿಂದಿನ ವರ್ಷದ ಶಿಕ್ಷಣದ ಮಾರ್ಕ್ಸ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಕುಟುಂಬದ ಇನ್ಕಮ್ ಸರ್ಟಿಫಿಕೇಟ್
*ವಿದ್ಯಾರ್ಥಿಯ ಆಧಾರ್ ಕಾರ್ಡ್
*ತಂದೆ ತಾಯಿಯ ಆಧಾರ್ ಕಾರ್ಡ್
*ಫೋನ್ ನಂಬರ್ ಹಾಗೂ ಓಟಿಪಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಮೊದಲಿಗೆ https://ssp.postmatric.karnataka.gov.in/2425_sa/signin.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಹೋಮ್ ಪೇಜ್ ನಲ್ಲಿ ಹೊಸದಾಗಿ ಅಕೌಂಟ್ ಓಪನ್ ಮಾಡುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
*ಈಗಾಗಲೇ ನಿಮ್ಮ ಅಕೌಂಟ್ ಇದ್ದರೆ, ಲಾಗಿನ್ ಆಪ್ಶನ್ ಕ್ಲಿಕ್ ಮಾಡಿ, ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
*ಇಲ್ಲಿ ನೀವು ಲಾಗಿನ್ ಐಡಿ ಅಥವಾ User Id, ಪಾಸ್ವರ್ಡ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಲಾಗಿನ್ ಮಾಡಿ.
*ನಂತರ ಅಪ್ಲಿಕೇಶನ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಎಲ್ಲಾ ಪರ್ಸನಲ್ ಡೀಟೇಲ್ಸ್ ಹಾಕಿ, ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ, Submit ಆಪ್ಶನ್ ಕ್ಲಿಕ್ ಮಾಡಿ. ಇದಿಷ್ಟು ಮಾಡಿದರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.
ಬ್ಯಾಂಕ್ ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ವಾ? ಯಾವ ಬ್ಯಾಂಕ್ ಎಷ್ಟು ದಂಡ ವಿಧಿಸುತ್ತೆ ಗೊತ್ತಾ?
ಯಾರು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು:
ಈಗ ಯಾರೆಲ್ಲಾ ಡಿಗ್ರಿ ಓದುತ್ತಿದ್ದೀರೋ ಅವರೆಲ್ಲರೂ ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು 1902 ಈ ನಂಬರ್ ಗೆ ಕರೆ ಮಾಡಬಹುದು. ಇದರಿಂದ ಅರ್ಜಿ ಸಲ್ಲಿಸಬಹುದು. https://ssp.postmatric.karnataka.gov.in/homepage.aspx ಇದು ಅಧಿಕೃತ ವೆಬ್ಸೈಟ್ ಆಗಿದೆ. ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಉಪಯೋಗ ಪಡೆದುಕೊಳ್ಳಬಹುದು.
Opportunity to apply online for Education scholarship for the year 2024-25
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.