ಇಂತಹ ಪೋಸ್ಟ್ ಆಫೀಸ್ ಖಾತೆಗಳು ಕ್ಯಾನ್ಸಲ್! 15 ದಿನಗಳು ಮಾತ್ರ ಗಡುವು
ಪೋಸ್ಟ್ ಆಫೀಸ್ ಖಾತೆಗಳನ್ನು ಸುರಕ್ಷಿತವಾಗಿಡಲು, ಮೆಚ್ಯೂರಿಟಿ ನಂತರವೂ ಉಳಿತಾಯದ ಪ್ಲಾನ್ಗಳನ್ನು ನವೀಕರಿಸದಿದ್ದರೆ ಆ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ಈ ನಿಯಮ ಇತ್ತೀಚೆಗೆ ಜಾರಿಯಾಗಿದೆ.

- ಮೆಚ್ಯೂರಿಟಿ ನಂತರ 3 ವರ್ಷಗಳೊಳಗೆ ಖಾತೆ ಕ್ಲೋಸ್ ಅಥವಾ ಎಕ್ಸ್ಟೆಂಡ್ ಮಾಡದಿದ್ದರೆ ಫ್ರೀಜ್
- PPF, NSC, KVP ಸೇರಿದಂತೆ ಹಲವು ಹಳೆಯ ಖಾತೆಗಳ ಮೇಲೆ ಪರಿಣಾಮ
- ಫ್ರೀಜ್ ಆದ ಖಾತೆ ಪುನಃ ಸಕ್ರಿಯಗೊಳಿಸಲು KYC ಹಾಗೂ ಅರ್ಜಿ ಅಗತ್ಯ
ಭಾರತೀಯ ಅಂಚೆ ಇಲಾಖೆ (Post Office Department) ಕಠಿಣ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಪೋಸ್ಟ್ ಆಫೀಸ್ (Post Office) ಖಾತೆಗಳನ್ನು ಮೆಚ್ಯೂರಿಟಿಯ ನಂತರ 3 ವರ್ಷಗಳೊಳಗೆ ನವೀಕರಿಸದಿದ್ದರೆ ಅಥವಾ ಕ್ಲೋಸ್ ಮಾಡದಿದ್ದರೆ, ಅವುಗಳನ್ನು ಫ್ರೀಜ್ (freeze) ಮಾಡಲಾಗುತ್ತದೆ.
ಈ ನಿಯಮ ಪ್ರಕಾರ, ಜನವರಿ 1 ಮತ್ತು ಜುಲೈ 1 ರಂದು ವರ್ಷಕ್ಕೆ ಎರಡು ಬಾರಿ ಖಾತೆಗಳ ಪರಿಶೀಲನೆ ನಡೆಯುತ್ತದೆ. 3 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು 15 ದಿನಗಳೊಳಗೆ ಫ್ರೀಜ್ ಮಾಡಲಾಗುತ್ತದೆ. ಈ ಕ್ರಮವು 2025 ಜುಲೈ 15ರಿಂದ ಜಾರಿಗೆ ಬಂದಿದೆ.
ಇದನ್ನೂ ಓದಿ: ತಕ್ಷಣ ₹2000 ರೂಪಾಯಿ ಬೇಕಾ? ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಅಷ್ಟೇ ಸಾಕು
ಯಾವ ಖಾತೆಗಳಿಗೆ ಅನ್ವಯವಾಗುತ್ತದೆ?
Public Provident Fund (PPF), Senior Citizen Savings Scheme (SCSS), National Savings Certificate (NSC), Kisan Vikas Patra (KVP), Post Office Monthly Income Scheme (MIS), Time Deposit (TD), Recurring Deposit (RD) ಹೀಗೆ ಹಲವು ಖಾತೆಗಳ ಮೇಲೆ ಈ ನಿಯಮ ಅನ್ವಯವಾಗುತ್ತದೆ.
ಈ ಪ್ಲಾನ್ಗಳ ಮೆಚ್ಯೂರಿಟಿ ದಿನಾಂಕದ ನಂತರವೂ ಖಾತೆ ನಿರ್ಲಕ್ಷಿಸಿದರೆ ಇದು ಪರಿಣಾಮ ಬೀರುತ್ತದೆ.
ಫ್ರೀಜ್ ಆದ ಖಾತೆ – ಸಮಸ್ಯೆಗಳು ಏನು?
ಇಂತಹ ಫ್ರೀಜ್ ಆದ ಖಾತೆಯಲ್ಲಿ ಯಾವುದೇ ಹಣವನ್ನೂ ಡಿಪಾಜಿಟ್ ಮಾಡಲಾಗದು, ವಿತ್ಡ್ರಾ ಕೂಡ ಸಾಧ್ಯವಿಲ್ಲ. ಖಾತೆಗಳಲ್ಲಿ “INOP – Inoperative more than 3 years” ಎಂದು ಮಾರ್ಕ್ ಮಾಡಲಾಗುತ್ತದೆ.
ಇದನ್ನೂ ಓದಿ: 1 ಲಕ್ಷ ಬೆಲೆಬಾಳುವ ಚಿನ್ನಾಭರಣ ಅಡವಿಟ್ಟರೆ ಎಷ್ಟು ಲೋನ್ ಸಿಗುತ್ತೆ? ಇಲ್ಲಿದೆ ಲೆಕ್ಕ
ಅನ್ಲಾಕ್ ಮಾಡುವುದು ಹೇಗೆ?
ಖಾತೆ ಪುನಃ ಸಕ್ರಿಯಗೊಳಿಸಲು ಗ್ರಾಹಕರು ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಖಾತೆ ಪಾಸ್ಬುಕ್, PAN, Aadhaar (ಆಧಾರ್), ವಿಳಾಸದ ಪ್ರೂಫ್ ಸೇರಿದ ಡಾಕ್ಯುಮೆಂಟ್ಗಳನ್ನು ನೀಡಬೇಕು.
ಜೊತೆಗೆ, SB-7A ಫಾರ್ಮ್ ಭರ್ತಿ ಮಾಡಬೇಕು ಹಾಗೂ maturity amount ಅನ್ನು ಕಳುಹಿಸಬೇಕಾದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯ ವಿವರಗಳನ್ನು (Cancelled cheque ಅಥವಾ passbook copy) ನಿಗದಿಪಡಿಸಬೇಕು.
ಇದನ್ನೂ ಓದಿ: ಮನೆ ಕಟ್ಟಲು 30 ಲಕ್ಷ ಲೋನ್ ತಗೊಂಡ್ರೆ ಬಡ್ಡಿ ಎಷ್ಟು? EMI ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕ
ಹೆಡ್ ಪೋಸ್ಟ್ ಆಫೀಸ್ನಲ್ಲಿ ಈ ಪ್ರಕ್ರಿಯೆ ಪರಿಶೀಲನೆ ನಡೆಸಿದ ಬಳಿಕ, ನಿಮ್ಮ ಖಾತೆಯನ್ನು ಮತ್ತೆ ಆಕ್ಟಿವೇಟ್ ಮಾಡಲಾಗುತ್ತದೆ. ಹಣವನ್ನು Electronic Clearance System (ECS) ಮೂಲಕ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
ಅಕೌಂಟ್ ಫ್ರೀಜ್ ಆಗದಂತೆ ಮುಂಚೆ ಇಷ್ಟೇ ನೋಡಿ!
ಆದಷ್ಟು ಬೇಗ ಮೆಚ್ಯೂರಿಟಿ ಖಾತೆಗಳನ್ನು ವಿಸ್ತರಿಸಿಕೊಳ್ಳಿ ಅಥವಾ ಅವುಗಳನ್ನು ಮುಚ್ಚಿಕೊಳ್ಳಿ. ಕಾರಣ, inactive accounts ಬಹುಪಾಲು ಮೋಸಗಾರರ (fraudsters) ಟಾರ್ಗೆಟ್ ಆಗುವ ಸಾಧ್ಯತೆ ಇರುತ್ತದೆ. ಡಿಜಿಟಲ್ ಸುರಕ್ಷತೆಗಾಗಿ ಈ ಕ್ರಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
Post Office Accounts Frozen If Not Extended in 3 Years




