Post Office Scheme : ಹೇಗಾದರೂ ಮಾಡಿ 10,000 ಗಳನ್ನು ಹೊಂದಿಸಿಬಿಡಿ ಸಾಕು. ಇಷ್ಟು ಹಣವನ್ನು ಹೂಡಿಕೆ (Investment) ಮಾಡಿದರೆ ಏಳು ಲಕ್ಷ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳಬಹುದು.
ಇದು ಅಂಚೆ ಕಚೇರಿ ( post office scheme) ಯ ಯೋಜನೆ ಆಗಿದ್ದು, ನಿಮಗೆ ಗೊತ್ತಿಲ್ಲದೆ ಲಕ್ಷಾಂತರ ರೂಪಾಯಿಗಳ ಲಾಭವನ್ನು ಈ ಯೋಜನೆಯಿಂದ ಪಡೆದುಕೊಳ್ಳುತ್ತೀರಿ.
ಹೊಸ ಮನೆ ಕಟ್ಟುವವರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 2.65 ಲಕ್ಷ! ಅರ್ಜಿ ಸಲ್ಲಿಸಿ
ಅಂಚೆ ಕಚೇರಿಯಲ್ಲಿ, ಸಾಮಾನ್ಯ ವರ್ಗದಿಂದ ಹಿಡಿದು ಬಡವರು, ಶ್ರೀಮಂತರು ಎಲ್ಲರಿಗೂ ಕೂಡ ಅನುಕೂಲವಾಗುವಂತಹ ಉಳಿತಾಯ ಯೋಜನೆಗಳನ್ನು (Savings Scheme) ಪರಿಚಯಿಸಲಾಗಿದೆ.
ಇದರಲ್ಲಿ ಸುಮಾರು 13 ಯೋಜನೆಗಳು ಹೆಚ್ಚು ಪ್ರಚಲಿತದಲ್ಲಿ ಇವೆ, ಅವುಗಳಲ್ಲಿ ಆರ್ ಡಿ ಅಥವಾ ಮರುಕಳಿಸುವ ಠೇವಣಿ ಬಹಳ ಫೇಮಸ್ ಆಗಿದೆ. ಅಪ್ರಾಪ್ತ ವಯಸ್ಸಿನಿಂದ ಹಿಡಿದು ಮುದುಕರ ವರೆಗೂ ಕೂಡ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಒಮ್ಮೆ ಹೂಡಿಕೆ ಆರಂಭಿಸಿದ್ರೆ ನೀವು ಉತ್ತಮವಾಗಿರುವ ಲಾಭ ಪಡೆದುಕೊಳ್ಳುತ್ತೀರಿ. ಅಂಚೆ ಕಚೇರಿಯ ಆರ್ ಡಿ ಯಲ್ಲಿ ಯಾರು ಎಷ್ಟು ಹೂಡಿಕೆ ಮಾಡಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವಂತಿಲ್ಲ! ಹೊಸ ರೂಲ್ಸ್ ತಿಳಿಯಿರಿ
*ಅಂಚೆ ಕಚೇರಿ ಆರ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿ ಭಾರತೀಯ ನಾಗರಿಕನಾಗಿರಬೇಕು. ಅಪ್ರಾಪ್ತ ವಯಸ್ಸಿನಲ್ಲಿ ಆರ್‌ಡಿ ಖಾತೆ ಆರಂಭಿಸುವುದಾದರೆ, ತಂದೆ ತಾಯಿಗಳು ಮಕ್ಕಳ ಪರವಾಗಿ ಯೋಜನೆಯ ಡೆಪಾಸಿಟ್ ಆರಂಭಿಸಬೇಕಾಗುತ್ತದೆ. ಹತ್ತು ವರ್ಷಗಳ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಆರ್ ಡಿ ಖಾತೆಯನ್ನು ತೆರೆಯಬಹುದು.
*ಅಂಚೆ ಕಚೇರಿಯ ಆರ್ ಡಿ ಹೂಡಿಕೆಗೆ ಕನಿಷ್ಠ 100 ರೂಪಾಯಿಗಳ ಡಿಪೋಸಿಟ್ (deposit money) ಇಡಬೇಕು ಗರಿಷ್ಠ ಡಿಪೋಸಿಟ್ ಇರುವ ಮಿತಿ ನಿಗದಿಪಡಿಸಿಲ್ಲ. ಇದು ಐದು ವರ್ಷಗಳ ಅವಧಿಯ ಯೋಜನೆಯಾಗಿದ್ದು, ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು ನಿಗದಿತ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.
*ಆರ್ ಡಿ ಖಾತೆಗೆ ನೀವು ನಾಮಿನಿ ವ್ಯಕ್ತಿಯನ್ನು ಕೂಡ ಸೂಚಿಸಬೇಕಾಗುತ್ತದೆ. ಈ ಯೋಜನೆಯ ಮತ್ತೊಂದು ಪ್ರಮುಖ ಪ್ರಯೋಜನ ಅಂದರೆ ನೀವು ಆರು ಕಂತುಗಳಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲು ಅವಕಾಶ ಇದೆ.
*ಆರ್ ಡಿ ಖಾತೆಯನ್ನು ಪ್ರತಿ ತಿಂಗಳ 1ರಿಂದ 15ನೇ ತಾರೀಕಿನ ಒಳಗೆ ಅಥವಾ 15ರಿಂದ 30ನೇ ತಾರೀಕಿನ ಒಳಗೆ ಎರಡು ಅವಧಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಆರ್ಡಿ ಪಾವತಿ ಮಾಡಬೇಕಾಗುತ್ತದೆ.
*ಸದ್ಯ ಆರ್ ಡಿ ಠೇವಣಿಗೆ 6.7% ನಷ್ಟು ಬಡ್ಡಿದರ (rate of interest) ನಿಗದಿಪಡಿಸಲಾಗಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಈ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು! ಇಲ್ಲಿದೆ ಬಿಗ್ ಅಪ್ಡೇಟ್
ನೀವು ನಿಮ್ಮ ಆರ್‌ಡಿ ಖಾತೆಯಲ್ಲಿ 10,000ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ ಆಗ 5 ವರ್ಷಕ್ಕೆ 6,00,000 ಆಗುತ್ತದೆ. ಇದಕ್ಕೆ ಈಗಿರುವ ಬಡ್ಡಿ ದರದ ಪ್ರಕಾರ 1,10,000ಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅಂದರೆ ಐದು ವರ್ಷಗಳಲ್ಲಿ ಹತ್ತು ಸಾವಿರ ರೂಪಾಯಿಗಳ ಹೂಡಿಕೆಗೆ 7,10,000ಗಳನ್ನು ಹಿಂಪಡೆಯುತ್ತೀರಿ.
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಆರು ಡಿ ಖಾತೆಯನ್ನು ತೆರೆಯಬಹುದಾಗಿದೆ. ಇನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಆರ್‌ಡಿ ಹಣವನ್ನು ಸಿಂಪಡಲು ಬಯಸಿದರೆ ಆರ್ ಡಿ ಆರಂಭಿಸಿ ಮೂರು ವರ್ಷಗಳ ನಂತರ ಹಿಂಪಡೆಯಬಹುದು.
ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ
ಆದರೆ ಇದಕ್ಕೆ ಕೇವಲ 4% ನಷ್ಟು ಬಡ್ಡಿ ದರವನ್ನು ಮಾತ್ರ ನೀಡಲಾಗುವುದು. ಒಂದು ವರ್ಷಗಳ ಆರ್ ಡಿ ಹೂಡಿಕೆಯ ನಂತರ ಹೂಡಿಕೆಯ ಮೊತ್ತದ ಅರ್ಧದಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.
ಹೀಗಾಗಿ ಅತಿ ಉತ್ತಮ ಲಾಭವನ್ನು ಕೊಡಬಲ್ಲ ಆರ್ಡಿ ಅಥವಾ ಮರುಕಳಿಸುವ ಠೇವಣಿಯನ್ನು ಆರಂಭಿಸಿ ಹೆಚ್ಚು ಆದಾಯ ಪಡೆಯಿರಿ. ನೀವು ಅಂಚೆ ಕಚೇರಿಯ ಆನ್ಲೈನ್ ಪೋರ್ಟಲ್ ಅಥವಾ ನೇರವಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಆರ್ಡಿ ಖಾತೆ ಆರಂಭಿಸಬಹುದು.
Post Office New Scheme, Deposit 10 thousand and get 7 lakh