ಪೋಸ್ಟ್ ಆಫೀಸ್ ಸ್ಕೀಮ್: ಗಂಡ-ಹೆಂಡತಿಗೆ ತಿಂಗಳಿಗೆ ₹9,000 ಸ್ಥಿರ ಆದಾಯ! ಭಾರೀ ಯೋಜನೆ
ಕೇಂದ್ರ ಸರ್ಕಾರದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಮೂಲಕ ಪತಿ–ಪತ್ನಿ ಜಂಟಿ ಖಾತೆ ತೆರೆಯುವುದರಿಂದ ಪ್ರತಿ ತಿಂಗಳು ಸ್ಥಿರವಾದ ₹9,000 ವರಮಾನ ಪಡೆಯಬಹುದು. ಸುರಕ್ಷಿತ ಹೂಡಿಕೆ, ಖಚಿತ ಲಾಭ!

Post Office Scheme: ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ಖಚಿತ ಆದಾಯ ನೀಡುವ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಸ್ಕೀಮ್ (POMIS) ಒಂದು ಅತ್ಯುತ್ತಮ ಆಯ್ಕೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ನೀವು ಒಮ್ಮೆ ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಸ್ಥಿರ ಆದಾಯ ಪಡೆಯಬಹುದು. ಸರ್ಕಾರದ ಭರವಸೆ ಇರುವುದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ.
ಪ್ರಸ್ತುತ ಈ ಸ್ಕೀಮ್‌ನಲ್ಲಿ ವರ್ಷಕ್ಕೆ 7.4% ಬಡ್ಡಿದರ ನಿಗದಿಯಾಗಿದೆ. ಈ ಬಡ್ಡಿ ಪ್ರತಿ ತಿಂಗಳು ಖಾತೆಗೆ (Bank Account) ಜಮೆಯಾಗುತ್ತದೆ, ಇದು ಮನೆಯ ಮಾಸಿಕ ಖರ್ಚುಗಳಿಗೆ ಉತ್ತಮ ಸಹಾಯವಾಗುತ್ತದೆ.
ಈ ಯೋಜನೆಯಲ್ಲಿ ಕನಿಷ್ಠ ₹1,000 ರಿಂದ ಖಾತೆ ತೆರೆಯಬಹುದು. ವ್ಯಕ್ತಿಗತ ಖಾತೆಯಲ್ಲಿ ಗರಿಷ್ಠ ₹9 ಲಕ್ಷವರೆಗೆ ಹಾಗೂ ಜಂಟಿ ಖಾತೆಯಲ್ಲಿ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು. ಪತಿ–ಪತ್ನಿಯರು ಜಂಟಿ ಖಾತೆ ತೆರೆಯುವುದರಿಂದ ಪ್ರತಿ ತಿಂಗಳು ಸುಮಾರು ₹9,250 ವರೆಗೆ ಆದಾಯ ಲಭ್ಯವಾಗುತ್ತದೆ. ಅದೇ ವೈಯಕ್ತಿಕ ಖಾತೆಯಲ್ಲಿ ₹9 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ₹5,550 ವರೆಗೆ ಲಾಭ ಸಿಗುತ್ತದೆ.
ಈ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷ. ಅವಧಿ ಮುಗಿದ ನಂತರ ಹೂಡಿಕೆದಾರರು ಹಣವನ್ನು ಹಿಂತೆಗೆದುಕೊಳ್ಳಬಹುದು ಅಥವಾ ಹೊಸ ಬಡ್ಡಿದರದ ಮೇಲೆ ಇನ್ನೂ 5 ವರ್ಷ ವಿಸ್ತರಿಸಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಸಹ ಸಂರಕ್ಷಕರು ಈ ಖಾತೆ ತೆರೆಯಬಹುದು, ಇದು ಮಕ್ಕಳ ಶಿಕ್ಷಣ ಖರ್ಚುಗಳಿಗೆ ಸಹಾಯಕವಾಗುತ್ತದೆ.
ಅಗತ್ಯ ಸಂದರ್ಭಗಳಲ್ಲಿ ಖಾತೆಯನ್ನು ಮುಂಚಿತವಾಗಿ ಮುಚ್ಚುವ ಅವಕಾಶವೂ ಇದೆ. ಒಂದು ವರ್ಷದೊಳಗೆ ಹಣ ಹಿಂತೆಗೆದುಕೊಳ್ಳಲು ಅನುಮತಿ ಇಲ್ಲ. 1 ರಿಂದ 3 ವರ್ಷಗಳ ನಡುವೆ ಮುಚ್ಚಿದರೆ 2% ಕಟ್, 3 ವರ್ಷಗಳ ಬಳಿಕ ಮುಚ್ಚಿದರೆ 1% ಕಟ್ ಆಗಲಿದೆ.
ಈ ಸ್ಕೀಮ್‌ನಿಂದ ಲಭಿಸುವ ಬಡ್ಡಿ ಆದಾಯ ತೆರಿಗೆಯಡಿ ಬರುವುದಾದರೂ, ಪೋಸ್ಟ್ ಆಫೀಸ್ ಇದಕ್ಕೆ TDS ವಿಧಿಸುವುದಿಲ್ಲ. ಜೊತೆಗೆ, ನಿಮ್ಮ ಖಾತೆಯನ್ನು ದೇಶದ ಯಾವುದೇ ಪೋಸ್ಟ್ ಆಫೀಸ್‌ಗೆ ವರ್ಗಾಯಿಸಬಹುದು. ಸುರಕ್ಷಿತ ಹೂಡಿಕೆ ಬಯಸುವ ನಿವೃತ್ತರು ಮತ್ತು ದಂಪತಿಗಳಿಗೆ ಇದು ಅತ್ಯುತ್ತಮ ಆಯ್ಕೆ.
Post Office Scheme, Earn 9,000 Monthly Sitting at Home



