Recharge Plans: ₹200ಕ್ಕೆ ಕಡಿಮೆ ದರದಲ್ಲಿ 22 OTT ಆ್ಯಪ್‌ಗಳಿಗೆ ಉಚಿತ ಪ್ರವೇಶ! - Jio, Airtel Plans
ಜಿಯೋ, ಏರ್ಟೆಲ್ ವಿಶೇಷ ಪ್ರೀಪೇಯ್ಡ್ ಪ್ಯಾಕ್‌ಗಳು 22 ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಸಬ್‌ಸ್ಕ್ರಿಪ್ಷನ್ ನೀಡುತ್ತವೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚಿನ ಡೇಟಾ ಮತ್ತು ಎಂಟರ್‌ಟೈನ್ಮೆಂಟ್ ಪ್ಯಾಕ್‌ಗಳನ್ನು ಪಡೆಯಿರಿ.
Jio, Airtel Plans : ಈ ದಿನಗಳಲ್ಲಿ ಜನರು ಕೇವಲ ಡೇಟಾ ಅಥವಾ ಕಾಲಿಂಗ್‌ಗಾಗಿ ಮಾತ್ರ ಪ್ಲಾನ್‌ಗಳನ್ನು ಹುಡುಕುವುದಿಲ್ಲ. ಅವರಿಗೆ ಎಂಟರ್‌ಟೈನ್ಮೆಂಟ್ ಪ್ಯಾಕೇಜ್‌ಗಳು ಸಹ ಮುಖ್ಯವಾಗಿದೆ.
ಜಿಯೋ ಮತ್ತು ಏರ್ಟೆಲ್ ತಮ್ಮ ಗ್ರಾಹಕರ ಈ ಕೋರಿಕೆಗೆ ಪೂರಕವಾಗಿ ಬಜೆಟ್-ಫ್ರೆಂಡ್ಲಿ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ. ಈ ಪ್ಲಾನ್‌ಗಳೊಂದಿಗೆ ನೀವು 22 ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಮನರಂಜನೆ ಪಡೆಯಬಹುದು.
ಜಿಯೋ ₹195 ಪ್ಯಾಕ್ ವಿಶೇಷತೆ ಎಂದರೆ 90 ದಿನಗಳ ಅವಧಿಯಲ್ಲಿ 15GB ಡೇಟಾ, ಜೊತೆಗೆ ಜಿಯೋಹಾಟ್‌ಸ್ಟಾರ್ ಉಚಿತ ಪ್ರವೇಶವೂ ಲಭ್ಯ. ಇದನ್ನು ಒಂದು ಬಾರಿ ರೀಚಾರ್ಜ್ ಮಾಡಿದರೆ ಮೂರು ತಿಂಗಳು ಡೇಟಾ ಜೊತೆಗೆ ಹಿಟ್ ವೆಬ್ ಸಿರೀಸ್, ಸಿನಿಮಾಗಳನ್ನು ನೋಡಬಹುದು.
ಎರ್ಟೆಲ್ ₹195 ಪ್ಯಾಕ್ 12GB ಡೇಟಾ ಜೊತೆಗೆ ಏರ್ಟೆಲ್ Xstream Play Premium ಸೇವೆಯನ್ನು ಉಚಿತವಾಗಿ ನೀಡುತ್ತದೆ. ಜಿಯೋ ₹175 ಪ್ಯಾಕ್‌ನಲ್ಲೂ 10GB ಡೇಟಾ ಮತ್ತು 10 OTT ಆ್ಯಪ್‌ಗಳಿಗೆ ಉಚಿತ ಪ್ರವೇಶ ಲಭ್ಯ. ಏರ್ಟೆಲ್ ₹181 ಪ್ಯಾಕ್ 15GB ಡೇಟಾ ಮತ್ತು Xstream Play Premium ಸಬ್‌ಸ್ಕ್ರಿಪ್ಷನ್ ಒದಗಿಸುತ್ತದೆ.
ಇವುಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು. ನಿಮಗೆ ಹೆಚ್ಚು ಡೇಟಾ ಬೇಕಾದರೆ ಏರ್ಟೆಲ್ ₹181 ಅಥವಾ ₹195 ಪ್ಯಾಕ್ ಉತ್ತಮ ಆಯ್ಕೆಯಾಗಬಹುದು. ಆದರೆ ಜಿಯೋ ₹195 ಪ್ಯಾಕ್ ಹೆಚ್ಚು ಪ್ರಾಮುಖ್ಯತೆಯಾದದ್ದು, 3 ತಿಂಗಳ ಅವಧಿ ಇದ್ದು ಹೆಚ್ಚು ಸಮಯದ ಸೇವೆ ನೀಡುತ್ತದೆ.
ಈ ಬಜೆಟ್ ಪ್ಯಾಕ್‌ಗಳು OTT ಪ್ರಿಯರಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಮನರಂಜನೆ, ಉತ್ತಮ ಡೇಟಾ ಆಯ್ಕೆಗಳು ನಿಮ್ಮ ಫಿಂಗರ್ ಟಿಪ್‌ನಲ್ಲಿ ಇವೆ.
ಪ್ರತಿ ಪ್ಯಾಕ್‌ನಲ್ಲೂ ಪ್ರತಿ OTT ಆ್ಯಪ್‌ನ ಕಂಟೆಂಟ್‌ಗಳು uninterrupted ಆಗಿ ಲಭ್ಯವಿದ್ದು, ನೀವು ಇಚ್ಛಿಸಿದಂತೆ ಸಿನಿಮಾ, ಶೋ, ವೆಬ್ ಸಿರೀಸ್‌ಗಳನ್ನು ತಡೆರಹಿತವಾಗಿ ನೋಡಿ ಮನರಂಜನೆ ಪಡೆಯಬಹುದು.




