Silver Rate Today: ಚಿನ್ನದ ಬೆಲೆ ಆಯ್ತು, ಈಗ ಬೆಳ್ಳಿ ದರ ಏಕಾಏಕಿ ಭಾರೀ ಜಿಗಿತ; ಕಿಲೋಗೆ ₹10,000 ಏರಿಕೆ!
Silver Rate Today: ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಹೆಚ್ಚಿದ್ದು, ಇಂದು ಬೆಳ್ಳಿ ದರ ಏಕಾಏಕಿ ಭಾರೀ ಜಿಗಿತ ಕಂಡಿದೆ. ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಹೊಸ ದಾಖಲೆ ಮಟ್ಟ ತಲುಪಿದೆ.

Silver Rate Today: ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ಮತ್ತೆ ದೇಶೀಯ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿವೆ. ವೆನಿಜುಯೆಲಾ ಸಂಕಷ್ಟ ತೀವ್ರಗೊಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಮುಖ ಮಾಡಿದ್ದು, ಇದರ ಪರಿಣಾಮವಾಗಿ ಬೆಳ್ಳಿ ದರದಲ್ಲಿ ಅಸಾಧಾರಣ ಏರಿಕೆ ಕಂಡುಬಂದಿದೆ. ಹೊಸ ವರ್ಷದ ಆರಂಭದಲ್ಲೇ ಬೆಳ್ಳಿ ಬೆಲೆ ಖರೀದಿದಾರರಿಗೆ ಶಾಕ್ ನೀಡಿದೆ.
ಇಂದಿನ ಬೆಳ್ಳಿ ದರ ಎಷ್ಟು?
ಇಂದು ಕಿಲೋ ಬೆಳ್ಳಿಯ ಮೇಲೆ ಏಕಾಏಕಿ ₹10,000ರಷ್ಟು ಏರಿಕೆ ದಾಖಲಾಗಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಮಾರುಕಟ್ಟೆಗಳಲ್ಲಿ ಕಿಲೋ ಬೆಳ್ಳಿ ₹2,83,000 ದರದಲ್ಲಿ ವ್ಯಾಪಾರವಾಗುತ್ತಿದೆ.
ಮತ್ತೊಂದೆಡೆ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಕಿಲೋ ಬೆಳ್ಳಿ ದರ ₹2,63,000 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಇದೇ ವೇಗ ಮುಂದುವರಿದರೆ ಶೀಘ್ರದಲ್ಲೇ ಬೆಳ್ಳಿ ₹3 ಲಕ್ಷ ಗಡಿ ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಖರೀದಿ ಪ್ಲ್ಯಾನ್ ಇದ್ಯಾ! ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ?
ಚಿನ್ನದ ಬೆಲೆ ಕೂಡ ಏರಿಕೆ
ಬೆಳ್ಳಿ ಜೊತೆಗೆ ಚಿನ್ನದ ದರದಲ್ಲೂ (Gold Price) ಇಂದು ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹660 ಏರಿಕೆಯಾಗಿದ್ದು, ₹1,39,480ಕ್ಕೆ ವಹಿವಾಟು ನಡೆಯುತ್ತಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹600 ಹೆಚ್ಚಾಗಿ ₹1,27,850 ಆಗಿದೆ. ಇನ್ನು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹490 ಏರಿಕೆ ಕಂಡು ₹1,04,610ಕ್ಕೆ ತಲುಪಿದೆ.
ಮುಂದಿನ ದಿನಗಳಲ್ಲಿ ಏನಾಗಬಹುದು?
ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಹೂಡಿಕೆದಾರರು ಮತ್ತು ಖರೀದಿದಾರರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.



