ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಲಿದೆ ₹50 ಸಾವಿರ ತನಕ ಸಾಲ ಸೌಲಭ್ಯ! ಅರ್ಜಿ ಸಲ್ಲಿಸಿ

Loan Scheme : ಈ ಒಂದು ಯೋಜನೆಯ ಮೂಲಕ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಸರ್ಕಾರದ ಕಡೆಯಿಂದ ₹50 ಸಾವಿರ ವರೆಗು ಸಾಲ ಸಿಗುತ್ತದೆ. 2020ರಲ್ಲಿ ಶುರುವಾದ ಈ ಒಂದು ಯೋಜನೆಯ ಅಡಿಯಲ್ಲಿ ಈಗಾಗಲೇ 76,78,830 ಜನರು ಅರ್ಜಿ ಸಲ್ಲಿಸಿದ್ದಾರೆ

Bengaluru, Karnataka, India
Edited By: Satish Raj Goravigere

Loan Scheme : ಬಹಳ ಕಷ್ಟಪಟ್ಟು ದುಡಿಯುವ ಬೀದಿಬದಿ ವ್ಯಾಪಾರಿಗಳಿಗೆ ಇದೀಗ ಕೇಂದ್ರ ಸರ್ಕಾರವು ಪಿಎಮ್ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಸರ್ಕಾರದ ಕಡೆಯಿಂದ ₹50 ಸಾವಿರ ವರೆಗು ಸಾಲ ಸಿಗುತ್ತದೆ. 2020ರಲ್ಲಿ ಶುರುವಾದ ಈ ಒಂದು ಯೋಜನೆಯ ಅಡಿಯಲ್ಲಿ ಈಗಾಗಲೇ 76,78,830 ಜನರು ಅರ್ಜಿ ಸಲ್ಲಿಸಿದ್ದು, ಅವರುಗಳ ಪೈಕಿ 60.03,816 ಜನರಿಗೆ ಸಾಲ ಸಿಗುತ್ತಿದೆ. 10 ಸಾವಿರ ಇಂದ 50 ಸಾವಿರ ವರೆಗು ಈ ಒಂದು ಸಾಲ ಸೌಲಭ್ಯ ಸಿಗುತ್ತಿದೆ.

ಪಿಎಮ್ ಸ್ವಾನಿಧಿ ಯೋಜನೆ:

ಈ ಯೋಜನೆಯನ್ನು ಲಾಕ್ ಡೌನ್ ವೇಳೆ ಕಷ್ಟ ಅನುಭವಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗಾಗಿ ಜಾರಿಗೆ ತರಲಾಯಿತು. ಈ ಯೋಜನೆಯಲ್ಲಿ ಯಾವುದೇ ದಾಖಲೇ ಇಲ್ಲದೇ, 50 ಸಾವಿರ ವರೆಗು ಸಾಲ ಕೊಡಲಾಗುತ್ತದೆ. ಮೊದಲ ಹಂತದಲ್ಲಿ 10 ಸಾವಿರ Loan ಸಿಗಲಿದ್ದು, ಅದನ್ನು ಸರಿಯಾಗಿ ಪಾವತಿ ಮಾಡಿದರೆ, 20 ಸಾವಿರ ಹಾಗೂ 50 ಸಾವಿರ ವರೆಗು ಸಾಲ ಸಿಗುತ್ತದೆ. ಇಲ್ಲಿ ನೀವು ಪಡೆಯುವ ಸಾಲಕ್ಕೆ 7% ಬಡ್ಡಿ ಪಾವತಿ ಮಾಡಬೇಕಾಗುತ್ತದೆ.. 10 ಸಾವಿರ ಹಣವನ್ನು ಮರುಪಾವತಿ ಮಾಡಲು 1 ವರ್ಷ ಸಮಯ, 20 ಹಾಗೂ 50 ಸಾವಿರ ಹಣವನ್ನು ಮರುಪಾವತಿ ಮಾಡಲು 2 ವರ್ಷ ಸಮಯ ಇರುತ್ತದೆ.

Street vendors will get loan facility up to 50 thousand from the government

ಈ ತಳಿಯ ಕುರಿ ಸಾಕಾಣಿಕೆ ಮಾಡಿ ನೋಡಿ, ನಿಮ್ಮ ಬಂಡವಾಳಕ್ಕೆ ಡಬಲ್ ಆದಾಯ ಗ್ಯಾರೆಂಟಿ!

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:

ಪಿಎಮ್ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು, ಭಾರತದ ಪ್ರಜೆಗಳಿಗೆ ಮಾತ್ರ ಅರ್ಹತೆ ಇರುತ್ತದೆ. ಬೀದಿಬದಿ ವ್ಯಾಪಾರಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಕೋವಿಡ್ ಸಮಯದಲ್ಲಿ ವ್ಯಾಪಾರಕ್ಕೆ ಹಾನಿಗೆ ಒಳಪಟ್ಟವರು ಅರ್ಜಿ ಸಲ್ಲಿಸಬಹುದು. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದರೆ, ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮಾಡುವವರು, ಬೇರೆ ವಸ್ತುಗಳ ವ್ಯಾಪಾರಿಗಳು, ಬುಕ್ಸ್ ಹಾಗೂ ಸ್ಟೇಷನರಿ ಮಾರಾಟ ಮಾಡುವವರು, ಕ್ಷೌರದ ಅಂಗಡಿಯವರು, ಚಮ್ಮಾರರು, ಡ್ರೈ ಕ್ಲೀನಿಂಗ್ ಅಂಗಡಿಯವರು, ಟೀ ಅಂಗಡಿಯವರು, ಕುಶಲಕರ್ಮಿಗಳು, ಪಾನ್ ಅಂಗಡಿ ಹೊಂದಿರುವವರು.. ಇವರೆಲ್ಲ ಅಪ್ಲೈ ಮಾಡಬಹುದು..

ಅರ್ಜಿ ಸಲ್ಲಿಕೆಗೆ ಅರ್ಹತೆ:

ಪಿಎಮ್ ಸ್ವಾನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರ ಬಳಿ ಹತ್ತಿರದ ಆಡಳಿತ ಸಂಸ್ಥೆ ಇಂದ ಕೊಟ್ಟಿರುವ ಐಡಿ ಕಾರ್ಡ್ ಇರಬೇಕು, ಹಾಗೆಯೇ ಸ್ಥಳೀಯ ಸರ್ವೇ ಮಾಡಿರುವುದರಲ್ಲಿ ಇವರ ಬಗ್ಗೆ ಮಾಹಿತಿ ಇರಬೇಕು.

ಯಾರಿಗೆಲ್ಲಾ ಸಾಲ ಸಿಗುತ್ತದೆ?

ತರಕಾರಿ ಹಣ್ಣು ಮಾರುವವರು, ದೈನಂದಿನ ವಸ್ಗುಗಳ ವ್ಯಾಪಾರಿಗಳು, ಮಕ್ಕಳ ಆಟದ ವಸ್ತುಗಳು, ಬಟ್ಟೆ, ಬುಕ್ಸ್, ಸ್ಟೇಷನರಿ ಅಂಗಡಿಯವರು ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೇ, ತಳ್ಳುವ ಅಂಗಡಿಯಲ್ಲಿ ವ್ಯಾಪಾರ ಮಾಡುವವರು, ಪಾನ್ ಅಂಗಡಿ, ರೋಡ್ ಸೈಡ್ ಸಲೂನ್ ಗಳು, ಐರನ್ ಅಂಗಡಿ, ಇವರೆಲ್ಲರೂ ಅರ್ಜಿ ಸಲ್ಲಿಸಬಹುದು.

ದಿನಕ್ಕೆ 7 ರೂಪಾಯಿ ಕಟ್ಟಿದ್ರೆ, ತಿಂಗಳಿಗೆ 5 ಸಾವಿರ ಸಿಗೋ ಕೇಂದ್ರದ ಸ್ಕೀಮ್! ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ

ಸಾಲ ಸಿಗೋದು ಎಲ್ಲಿ?

*ಸರ್ಕಾರೇತರ ಹಾಗೂ ಪ್ರೈವೇಟ್ ಬ್ಯಾಂಕ್ ಗಳಲ್ಲಿ
*ಹತ್ತಿರದ ಗ್ರಾಮೀಣ ಬ್ಯಾಂಕ್ ಗಳು
*ಸಣ್ಣ ಹಣಕಾಸು ಬ್ಯಾಂಕ್ ಗಳು
*ಕೋಆಪರೇಟಿವ್ ಬ್ಯಾಂಕ್ ಗಳು
*NBFC
*SHG ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತದೆ.

ಬೇಕಾಗುವ ದಾಖಲೆಗಳು:

*ಆಧಾರ್ ಕಾರ್ಡ್
*ವೋಟರ್ ಐಡಿ
*ಡ್ರೈವರ್ ಲೈಸೆನ್ಸ್
*ಪ್ಯಾನ್ ಕಾರ್ಡ್
*ನರೇಗಾ ಕಾರ್ಡ್

ಅರ್ಜಿ ಸಲ್ಲಿಕೆ:

ಮೇಲೆ ತಿಳಿಸಿರುವ ಎಲ್ಲಾ ಸಂಸ್ಥಗಳಲ್ಲಿ ಪಿಎಮ್ ಸ್ವಾನಿಧಿ ಯೋಜನೆಗೆ ಸಾಲ ಸಿಗುತ್ತದೆ. ಬ್ಯಾಂಕ್ ಅಥವಾ ಆ ಸಂಸ್ಥೆಗೆ ಭೇಟಿ ನೀಡಿ, ಸ್ವನಿಧಿ ಯೋಜನೆಯ ಬಗ್ಗೆ ತಿಳಿಸಿ, ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ಬ್ಯಾಂಕ್ ಗೆ ಸಲ್ಲಿಸಬೇಕು. ಎಲ್ಲವೂ ಸರಿ ಇದ್ದರೆ, ನಿಮಗೆ Loan ಸೌಲಭ್ಯ ಸಿಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಪಿಎಮ್ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ, ಈ ಕ್ರಮಗಳನ್ನು ಅನುಸರಿಸಿ..
*ಮೊದಲಿಗೆ ಸೇವಾಸಿಂಧು ಪೋರ್ಟಲ್ ನ ಈ ಲಿಂಕ್ ಗೆ ಭೇಟಿ ನೀಡಿ .. https://pmsvanidhi.mohua.gov.in/ ಇದು ಅರ್ಜಿ ಸಲ್ಲಿಕೆಯ ಲಿಂಕ್ ಆಗಿದೆ.
*ಹೋಮ್ ಪೇಜ್ ನಲ್ಲಿ, ನಿಮಗೆ ಎಷ್ಟು ಮೊತ್ತದ ಸಾಲ ಬೇಕು ಎಂದು ಆಯ್ಕೆ ಮಾಡಿ. 10, 20 ಅಥವಾ 50 ಸಾವಿರದ ಸಾಲವನ್ನು ಆಯ್ಕೆ ಮಾಡಬೇಕು.
*ನಂತರ ನಿಮ್ಮ ಫೋನ್ ನಂಬರ್ ಹಾಕಿ, ಓಟಿಪಿ ಪಡೆದುಕೊಳ್ಳಿ.
*ಓಟಿಪಿ ಹಾಕಿದ ನಂತರ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ. ಅಲ್ಲಿರುವ ಎಲ್ಲಾ ಮಾಹಿತಿಯನ್ನು ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
*ಬಳಿಕ ಅಪ್ಲಿಕೇಶನ್ ಫಾರ್ಮ್ ಪ್ರಿಂಟ್ ಔಟ್ ಪಡೆದು, ಕೇಂದ್ರ ಸರ್ಕಾರ ಶುರು ಮಾಡಿರುವ ಸ್ವಯಂ ಧನಸಹಾಯ ಕೇಂದ್ರಕ್ಕೆ ಹೋಗಿ ಅಪ್ಲಿಕೇಶನ್ ಹಾಗೂ ಅಗತ್ಯವಿರುವ ದಾಖಲೆಗಳನ್ನ ಜೊತೆಗೆ ಸಲ್ಲಿಸಿ.
*ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸಿ, ಎಲ್ಲವೂ ಸರಿ ಇದ್ದರೆ, ನಿಮಗೆ ಸಾಲ ಸಿಗುತ್ತದೆ.

Street vendors will get loan facility up to 50 thousand from the government