ದಿನಕ್ಕೆ 7 ರೂಪಾಯಿ ಕಟ್ಟಿದ್ರೆ, ತಿಂಗಳಿಗೆ 5 ಸಾವಿರ ಸಿಗೋ ಕೇಂದ್ರದ ಸ್ಕೀಮ್! ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ

ದಿನಕ್ಕೆ ಕೇವಲ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ಸಿಗುತ್ತದೆ ₹5000! ಸರ್ಕಾರದ ಸೂಪರ್ ಸ್ಕೀಮ್

Bengaluru, Karnataka, India
Edited By: Satish Raj Goravigere

Pension Scheme : ಈಗಿನ ಕಾಲದಲ್ಲಿ ಪ್ರತಿ ತಿಂಗಳು ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ನೀವು ಹಣ ಉಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕಷ್ಟವೇ. ಹಾಗಾಗಿ ನೀವು ಯಾವುದೇ ಸಮಯದಲ್ಲಿ ಹಣ ಉಳಿತಾಯ ಮಾಡಬೇಕು ಎಂದು ಬಯಸಿದರೆ, ನಿಮಗಾಗಿ ಕೆಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಈ ಕೆಲವು ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ, ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡುವ ಮೂಲಕ, ಪ್ರತಿ ತಿಂಗಳು ₹5000 ಪಡೆಯಬಹುದು.

ಇದು ಒಂದು ಪೆನ್ಶನ್ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ, ನೀವು ಸಣ್ಣ ವಯಸ್ಸಿನಲ್ಲೇ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರೆ, ವೃದ್ಧಾಪ್ಯದ ವೇಳೆಗೆ ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಹಣ ಪಡೆಯಬಹುದು. ಚಿಕ್ಕ ವಯಸ್ಸಿನಲ್ಲಿ ಬಹಳ ಕಡಿಮೆ ಮೊತ್ತ, ಅಂದರೆ ದಿನಕ್ಕೆ 7 ರೂಪಾಯಿ ಉಳಿತಾಯ ಮಾಡಿದರೂ ಸಾಕು, ಇಲ್ಲಿ ನಿಮಗೆ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ.

Get 5 thousand per month from Center scheme by investing 7 rupees per day

ಇದು ಅಟಲ್ ಪೆನ್ಶನ್ ಯೋಜನೆ ಆಗಿದೆ. ಈ ಒಂದು ಯೋಜನೆಯನ್ನು ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಇರುವ ಬ್ರಾಂಚ್ ನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ, ಅಪ್ಲಿಕೇಶನ್ ಪಡೆದು ಫಿಲ್ ಮಾಡಿ ಶುರು ಮಾಡಬಹುದು..

ಯಾವುದೇ ಬ್ಯಾಂಕ್ ನಲ್ಲಿ ಪತ್ನಿಯ ಹೆಸರಿನಲ್ಲಿ ಸಾಲ ಪಡೆದವರಿಗೆ ಬಂಪರ್ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್

ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ 18 ವಯಸ್ಸಿನಲ್ಲಿ, 20ನೇ ವಯಸ್ಸಿನಲ್ಲಿ, 30ನೇ ವಯಸ್ಸಿನಲ್ಲಿ ಹೀಗೆ ವಯಸ್ಸಿಗೆ ಅನುಗುಣವಾಗಿ 60 ವರ್ಷ ತಲುಪುವವರೆಗು ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಠೇವಣಿ ಮಾಡುತ್ತಾ ಬಂದರೆ, 60 ವರ್ಷ ತುಂಬಿದ ನಂತರ ಉತ್ತಮವಾದ ಮೊತ್ತವನ್ನು ಪೆನ್ಶನ್ ರೂಪದಲ್ಲಿ (Pension) ಪಡೆಯಬಹುದು.

18ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ, ಪ್ರತಿ ತಿಂಗಳು ₹210 ರೂಪಾಯಿ ಪಾವತಿ ಮಾಡುತ್ತಾ ಬರಬೇಕು. ಇದರ ಅರ್ಥ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು..

40 ವರ್ಷಗಳ ಅವಧಿಗೆ ಇಷ್ಟು ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹5000 ಪೆನ್ಶನ್ ಪಡೆಯಬಹುದು. 30 ವರ್ಷದಲ್ಲಿ ಹೂಡಿಕೆ ಶುರು ಮಾಡಿದರೆ, 30 ವರ್ಷಗಳ ಅವಧಿಗೆ ಪ್ರತಿ ತಿಂಗಳು ₹577 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಈ ಅಟಲ್ ಪೆನ್ಶನ್ ಯೋಜನೆಯಲ್ಲಿ ಮಿನಿಮಮ್ ಎಂದರೂ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು.

ಬ್ಯಾಂಕ್‌ನಲ್ಲಿ 35,000 ಹಣ ಎಫ್‌ಡಿ ಇಟ್ರೆ, ಎಷ್ಟು ರಿಟರ್ನ್ ಸಿಗುತ್ತೆ? ಇಲ್ಲಿದೆ 35 ತಿಂಗಳ ಯೋಜನೆ

18ನೇ ವಯಸ್ಸಿನಲ್ಲಿ ಅಟಲ್ ಪೆನ್ಶನ್ ಸ್ಕೀಮ್ ಪಾವತಿ ಶುರು ಮಾಡಿದರೆ, 42 ವರ್ಷಗಳ ಕಾಲ ಹಣ ಕಟ್ಟಬೇಕು. ಇನ್ನು ನಿಮ್ಮ ವಯಸ್ಸು 30 ವರ್ಷ ಆಗಿದ್ದು, 30 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹1000 ಪೆನ್ಶನ್ ಬರಬೇಕು ಎಂದರೆ ತಿಂಗಳಿಗೆ ₹116 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ಪ್ರತಿ ತಿಂಗಳು ₹1000 ಪೆನ್ಶನ್ ಪಡೆಯಲು, 40ನೇ ವಯಸ್ಸಿನಲ್ಲಿ ಅಟಲ್ ಪೆನ್ಶನ್ ಸ್ಕೀಮ್ (Atal Pension Scheme) ಶುರು ಮಾಡಿದರೆ 20 ವರ್ಷಗಳ ಕಾಲ ತಿಂಗಳಿಗೆ ₹264 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬರಬೇಕು.

ಅಕಸ್ಮಾತ್ ಹೂಡಿಕೆ ಮಾಡುತ್ತಿದ್ದ ವ್ಯಕ್ತಿ ವಿಧಿವಶವಾದರೆ, ನಾಮಿನಿಗೆ ಎಲ್ಲಾ ಹಣ ಸಿಗುತ್ತದೆ. 1000 ಪೆನ್ಶನ್ ಪಡೆಯುವ ವ್ಯಕ್ತಿ ಮರಣ ಹೊಂದಿದರೆ, ನಾಮಿನಿಗೆ 1.7 ಲಕ್ಷ ಸಿಗುತ್ತದೆ. 5000 ಪೆನ್ಶನ್ ಪಡೆಯುವವರು ಮರಣ ಹೊಂದಿದರೆ ನಾಮಿನಿಗೆ 8.6 ಲಕ್ಷ ಸಿಗುತ್ತದೆ.

ಏರ್‌ಟೆಲ್ ಸಿಮ್ ಬಳಕೆ ಮಾಡ್ತಾ ಇದ್ದೀರಾ? ಆಗಾದ್ರೆ ನಿಮಗೆ ಸಿಗುತ್ತೆ ₹9 ಲಕ್ಷ ತನಕ ಸಾಲ! ಬಂಪರ್ ಕೊಡುಗೆ

Get 5 thousand per month from Center scheme by investing 7 rupees per day