80Km ಮೈಲೇಜ್ ರೇಂಜ್ ನೀಡುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಅಗ್ಗದ ಬೆಲೆಗೆ ಮಾರಾಟ

Electric Scooter : ಭಾರತದ ಮಾರುಕಟ್ಟೆಗೆ ಸೂಟ್ ಆಗುವ ರೀತಿಯಲ್ಲಿ ಈ ಸ್ಕೂಟರ್ ಬಿಡುಗಡೆಯಾಗಿದ್ದು Zelio X Men ಹೆಸರಿನ ಈ ಸ್ಕೂಟರ್ 60V/32AH ಲೆಡ್-ಆಸಿಡ್ ಬ್ಯಾಟರಿಯನ್ನು ಹೊಂದಿದೆ.

Electric Scooter : ಭಾರತದ ಮಾರುಕಟ್ಟೆಯಲ್ಲಿ ಸದ್ಯ ದಿನಕ್ಕೊಂದರಂತೆ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿವೆ. ಈಗ ಇದೆ ಸಾಲಿಗೆ ಹೊಸ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಜೆಲಿಯೊ ಇಬೈಕ್ಸ್ (E-Bike) ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಭಾರತದ ಮಾರುಕಟ್ಟೆಗೆ ಸೂಟ್ ಆಗುವ ರೀತಿಯಲ್ಲಿ ಈ ಸ್ಕೂಟರ್ ಬಿಡುಗಡೆಯಾಗಿದ್ದು Zelio X Men ಹೆಸರಿನ ಈ ಸ್ಕೂಟರ್ 60V/32AH ಲೆಡ್-ಆಸಿಡ್ ಬ್ಯಾಟರಿಯನ್ನು ಹೊಂದಿದೆ.

Stylish electric scooter launched with 80Km mileage range, available at affordable price

120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್

Zelio X Men ರೇಂಜ್

ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ಎಂದ ತಕ್ಷಣ ಎಲ್ಲರು ಮೊದಲು ಕೇಳುವುದು ಎಷ್ಟು ರೇಂಜ್ ತನಕ ಓಡುತ್ತೆ ಎಂದು, ಹಾಗೆಯೆ ಈ ಸ್ಕೂಟರ್ ಕೂಡ ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 60km ವರೆಗೆ ಓಡಲಿದೆ. 7-9 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ಇನ್ನು ಟಾಪ್ ಮಾಡೆಲ್ ಗಳು 60V/32AH ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ, ಇದನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದು.

ಝೆಲಿಯೊ ಎಕ್ಸ್ ಮೆನ್ ವೈಶಿಷ್ಟ್ಯಗಳು

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಗಳು ಫೀಚರ್ ಗಳ ಲಿಸ್ಟ್ ನಲ್ಲಿ ಏನನ್ನು ಕೂಡ ಕಡಿಮೆ ಮಾಡುವುದಿಲ್ಲ, ಪೆಟ್ರೋಲ್ ವಾಹನಗಳಂತೆ ಅನೇಕ ಫೀಚರ್ ಗಳನ್ನೂ ಕೂಡ ತಮ್ಮ ಸ್ಕೂಟರ್ ಗಳಲ್ಲಿ ನೀಡಿವೆ. ಇವುಗಳಲ್ಲಿ ಮುಖ್ಯವಾಗಿ ಆಂಟಿ-ಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ಪಾರ್ಕಿಂಗ್ ಸ್ವಿಚ್, ಆಟೋ ರಿಪೇರಿ ಸ್ವಿಚ್, ಯುಎಸ್‌ಬಿ ಚಾರ್ಜರ್, ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್, ಡಿಜಿಟಲ್ ಡಿಸ್ಪ್ಲೇ ಮತ್ತು ಸೆಂಟ್ರಲ್ ಲಾಕಿಂಗ್ ಅನ್ನು ಒಳಗೊಂಡಿದೆ.

ಹಾಗೆಯೆ ಉತ್ತಮವಾದ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ ಸ್ಕೂಟರ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿದೆ. ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಆಫೀಸ್ ಕೆಲಸ ಮಾಡುವವರಿಗೆ ಬೆಸ್ಟ್ ಆಯ್ಕೆ ಎಂದು ಹೇಳಬಹುದು.

ಪ್ರಸ್ತುತ ಭರ್ಜರಿ ಮೈಲೇಜ್ ನೀಡುವ ಭಾರತದ ಟಾಪ್ 5 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಲಿಸ್ಟ್ ಇಲ್ಲಿದೆ!

Zelio X Men Electric ScooterZelio X Men ಸ್ಕೂಟರ್ ನ ಬೆಲೆ

Zelio X Men ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 64,543 ರೂ ಆಗಿದೆ. ಒಟ್ಟು 5 ಬಗೆಯ ಮಾಡೆಲ್ ಗಳು ಲಭ್ಯವಿದೆ, ಇದರಲ್ಲಿ ಟಾಪ್-ಆಫ್-ಲೈನ್ ಟ್ರಿಮ್ ಬೆಲೆ ರೂ 87,573, ಎಕ್ಸ್ ಶೋ ರೂಂ ಆಗಿದೆ . ಇನ್ನು ಬಣ್ಣಗಳ ಆಯ್ಕೆಯಲ್ಲೂ ಕಂಪನಿ ಹಲವಾರು ಆಯ್ಕೆ ನೀಡಿದೆ ಎಕ್ಸ್ ಮೆನ್ ಕಪ್ಪು, ಬಿಳಿ, ಸೀ ಗ್ರೀನ್ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.

ರತನ್ ಟಾಟಾ ಕನಸಿನ ಕಾರು ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಎಂಟ್ರಿ, ಎಷ್ಟಿರಲಿದೆ ಬೆಲೆ ಗೊತ್ತಾ?

Stylish electric scooter launched with 80Km mileage range, available at affordable price